ಕರ್ನಾಟಕ

karnataka

ವಾಕಿಂಗ್​ ಮಾಡಿ ಕ್ಯಾನ್ಸರ್​, ಬುದ್ಧಿಮಾಂದ್ಯತೆ ತಡೆಯಿರಿ.. ವೇಗದ ಹೆಜ್ಜೆಯಿಂದ ಹತ್ತು ಹಲವು ಲಾಭ

By

Published : Sep 15, 2022, 5:47 PM IST

research-walking-10000-steps-per-day
ದಿನಕ್ಕೆ 10 ಸಾವಿರ ವೇಗದ ಹೆಜ್ಜೆಯಿಂದ ಇವೆ ಲಾಭ

ವೇಗದ ನಡಿಗೆಯ ನಡೆದ ಅಧ್ಯಯನ ಹಲವು ಆರೋಗ್ಯ ಪ್ರಯೋಜನೆಗಳನ್ನು ನೀಡುತ್ತದೆ ಎಂಬುದನ್ನು ಅಧ್ಯಯನ ಪತ್ತೆ ಮಾಡಿದೆ. ಸೋ.. ಈಗಲೇ ಎದ್ದು ನಡೆದು ಆರೋಗ್ಯ ವೃದ್ಧಿಸಿಕೊಳ್ಳಿ.

ನವದೆಹಲಿ:ದೇಹದ ತೂಕವನ್ನು ಕಡಿಮೆ ಮಾಡಲು ನಡಿಗೆ ಉಪಕಾರಿ ಎಂದು ಭಾವಿಸುವುದುಂಟು. ವೇಗವಾಗಿ ನಡೆಯುವುದರಿಂದ ಬರೀ ದೇಹ ಕರಗಿಸುವುದಲ್ಲ, ಇದರಿಂದ ಬುದ್ಧಿಮಾಂದ್ಯತೆ, ಹೃದ್ರೋಗ, ಕ್ಯಾನ್ಸರ್ ಮತ್ತು ಮರಣದ ಅಪಾಯವನ್ನು ಕಡಿಮೆ ಮಾಡಬಹುದು ಎಂಬುದನ್ನು ಅಧ್ಯಯನ ಕಂಡುಕೊಂಡಿದೆ.

ಆಸ್ಟ್ರೇಲಿಯಾದ ಸಿಡ್ನಿ ಮತ್ತು ದಕ್ಷಿಣ ಡೆನ್ಮಾರ್ಕ್ ವಿಶ್ವವಿದ್ಯಾಲಯದ ಸಂಶೋಧಕರು ದಿನಕ್ಕೆ 10 ಸಾವಿರ ಹೆಜ್ಜೆಗಳನ್ನು ನಡೆಯುವುದರಿಂದ ಆರೋಗ್ಯವನ್ನು ಹಿಡಿತದಲ್ಲಿಟ್ಟುಕೊಳ್ಳುವುದರ ಜೊತೆಗೆ ಬುದ್ಧಿಮಾಂದ್ಯತೆ, ಹೃದ್ರೋಗ, ಕ್ಯಾನ್ಸರ್ ರೋಗವನ್ನೂ ತಡೆಗಟ್ಟಬಹುದು. ವೇಗದ ನಡಿಗೆಯು ಹಲವು ಬಗೆಯ ಪ್ರಯೋಜನೆಗಳನ್ನು ದಾಖಲಿಸಿದೆ ಎಂಬುದು ಅಧ್ಯಯನದ ಸಾರವಾಗಿದೆ.

ವಸ್ತುನಿಷ್ಠ ಅಧ್ಯಯನ.. ಪ್ರಮುಖ ನಿಯತಕಾಲಿಕೆಗಳಾದ ಜೆಎಎಂಎ ಇಂಟರ್ನಲ್ ಮೆಡಿಸಿನ್ ಮತ್ತು ಜೆಎಎಂಎ ನ್ಯೂರಾಲಜಿಯಲ್ಲಿ ಈ ಅಧ್ಯಯನದ ವರದಿ ಪ್ರಕಟವಾಗಿದೆ. ಈ ಅಧ್ಯಯನಕ್ಕಾಗಿ 78,500 ವಯಸ್ಕರನ್ನು ಬಳಸಿಕೊಳ್ಳಲಾಗಿದೆ. ಬುದ್ಧಿಮಾಂದ್ಯತೆ, ಹೃದ್ರೋಗ, ಕ್ಯಾನ್ಸರ್ ಹೊಂದಿರುವ ಜನರು ಇದರಲ್ಲಿದ್ದರು. ಅವರ ಮೇಲೆ ನಿಗಾ ಇರಿಸಿ ಅಧ್ಯಯನ ನಡೆಸಲಾಗಿದ್ದು, ವಸ್ತುನಿಷ್ಠವಾಗಿ ಪತ್ತೆಹಚ್ಚಿದ ಅತಿದೊಡ್ಡ ಅಧ್ಯಯನ ಇದಾಗಿದೆ.

ಅಧ್ಯಯನದ ವೇಳೆ ಕಡಿಮೆ ಎಂದರೂ ದಿನಕ್ಕೆ 3800 ಹೆಜ್ಜೆ ಹಾಕಿದರೂ ಬುದ್ಧಿಮಾಂದ್ಯತೆಯ ಅಪಾಯವನ್ನು ಶೇಕಡಾ 25 ರಷ್ಟು ಕಡಿತ ಮಾಡಬಹುದು ಎಂದು ದಕ್ಷಿಣ ಡೆನ್ಮಾರ್ಕ್​ನ ಕ್ಯಾಡಿಜ್ ವಿಶ್ವವಿದ್ಯಾಲಯದ ಆರೋಗ್ಯ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಬೋರ್ಜಾ ಡೆಲ್ ಪೊಜೊ ಕ್ರೂಜ್ ಹೇಳಿದರು.

ಓದಿ:ಅಮೆರಿಕ ವಿಜ್ಞಾನಿಗಳಿಂದ ರಕ್ತಪರೀಕ್ಷೆ ಮೂಲಕ ಕ್ಯಾನ್ಸರ್​ ಪತ್ತೆ ವಿಧಾನ ಶೋಧ

ABOUT THE AUTHOR

...view details