ETV Bharat / technology

ನಾನ್​ ಸ್ಟಿಕ್​ ಪಾತ್ರೆಯಲ್ಲಿ ಅಡುಗೆ ಮಾಡುವ ಮುನ್ನ ಒಮ್ಮೆ ಯೋಚಿಸಿ; ಸದ್ದಿಲ್ಲದೇ ಸೇರುತ್ತಿದೆ ಹಾನಿಕಾರಕ ರಾಸಾಯನಿಕ!! - WHY NOT USE NON STICK COOKWARE

author img

By ETV Bharat Karnataka Team

Published : May 18, 2024, 4:20 PM IST

ಆರೋಗ್ಯದ ದೃಷ್ಟಿಯಿಂದ ಯಾವ ಪಾತ್ರೆಯಲ್ಲಿ ಅಡುಗೆ ಉಪಯೋಗ. ನಾನ್​ ಸ್ಟಿಕ್​ ಪಾತ್ರೆಗಳು ಯಾಕೆ ಅಪಾಯ ಎಂಬ ಕುರಿತು ಐಸಿಎಂಆರ್ ನೀಡಿರುವ​​ ಮಾಹಿತಿ ಇಲ್ಲಿದೆ.

ICMR says using Non Stick Cookware in high heat is dangerous
ICMR says using Non Stick Cookware in high heat is dangerous (Etv bharat kannada)

ಹೈದರಾಬಾದ್​: ನಾನ್​ಸಿಕ್ಟ್​​ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಸುಲಭ. ಅದನ್ನು ಶುಚಿ ಮಾಡುವುದು ಕೂಡ ಅಷ್ಟೇ ಸರಳ. ಇದೇ ಕಾರಣಕ್ಕೆ ಇಂದು ಬಹುತೇಕರ ಮನೆಯಲ್ಲಿ ಈ ಪಾತ್ರೆಗಳಿಗೆ ಪ್ರಾಶಸ್ತ್ಯ ಇದೆ. ಆದರೆ, ಇದರ ಬಳಕೆ ಮಾಡುವವರಿಗೆ ಎಚ್ಚರವಹಿಸುವುದು ಅವಶ್ಯವಾಗಿದೆ. ಈ ಸಂಬಂಧ ಐಸಿಎಂಆರ್​ ಕೂಡ ಎಚ್ಚರಿಕೆ ಸೂಚನೆ ನೀಡಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಈ ರೀತಿಯ ನಾನ್​ ಸ್ಟಿಕ್​ ಪಾತ್ರೆಗಳನ್ನು ದೀರ್ಘಾವಧಿಗಳ ಕಾಲ ಬಳಕೆ ಮಾಡದಂತೆ ಸೂಚಿಸಿದ್ದಾರೆ. ಕಾರಣ ಇದರಿಂದ ಮಾಡಿದ ಅಡುಗೆ ಸೇವನೆ ಮಾಡುವುದು ಗಂಭೀರ ಆರೋಗ್ಯ ಸಮಸ್ಯೆ ಅಪಾಯ ಎದುರಿಸುತ್ತದೆ. ಹಾಗಾದರೆ, ಆರೋಗ್ಯದ ದೃಷ್ಟಿಯಿಂದ ಯಾವ ಪಾತ್ರೆಯಲ್ಲಿ ಅಡುಗೆ ಉಪಯೋಗ. ನಾನ್​ ಸ್ಟಿಕ್​ ಪಾತ್ರೆಗಳು ಯಾಕೆ ಅಪಾಯ ಎಂಬ ಕುರಿತು ಐಸಿಎಂಆರ್​​ ಮಾಹಿತಿ ಇಲ್ಲಿದೆ.

ನಾನ್​ ಸ್ಟಿಕ್​ ಪಾತ್ರೆಗಳ ನಿರ್ಮಾಣದಲ್ಲಿ ಪಾಲಿ ಟೆಟ್ರಾಪ್ಲೊರೊ ಎಥಿಲೆನೆ (ಪಿಟಿಎಫ್​ಇ) ಎಂಬ ರಾಸಾಯನಿಕ ಬಳಕೆ ಮಾಡಲಾಗುವುದು. ಇದನ್ನು ಟೆಫ್ಲೊನ್​ ಎಂದು ಕೂಡ ಕರೆಯಲಾಗುತ್ತದೆ. ಈ ಟೆಫ್ಲೊನ್​​ ಎಂಬುದು ಸಿಂಥೆಟಿಕ್​ ರಾಸಾಯನಿಕವೂ ಇಂಗಾಲ ಮತ್ತು ಫ್ಲೋರಿನ್ ಪರಮಾಣುಗಳನ್ನು ಹೊಂದಿರುತ್ತದೆ. ತಜ್ಞರು ಹೇಳುವಂತೆ ಈ ನಾನ್​ ಸ್ಟಿಕ್​ ಪಾತ್ರೆಯ ತಳದಲ್ಲಿ ಈ ರಾಸಾಯನಿಕ ಸುರಿಯಲಾಗಿರುತ್ತದೆ. ಐಸಿಎಂಆರ್​ ಹೇಳುವಂತೆ, ನಾನ್​ ಸ್ಟಿಕ್​ ಪಾತ್ರೆಯಲ್ಲಿ ಸಣ್ಣ ಸ್ಕ್ರಾಚ್​ ಕೂಡ ಈ ಹಾನಿಕಾರಕ ರಾಸಾಯನಿಕ ಬಿಡುಗಡೆ ಆಗಿ, ಆಹಾರದೊಂದಿಗೆ ಸೇರುತ್ತದೆ. ನಾನ್​ ಸ್ಟಿಕ್​ ಪಾತ್ರೆಗಳಲ್ಲಿ ಉಂಟಾಗುವ ಒಂದು ಸ್ಕ್ರಾಚ್​ನಿಂದ 9,100 ಮೈಕ್ರೋಪ್ಲಾಸ್ಟಿಕ್​ ಕಣಗಳು ಬಿಡುಗಡೆಯಾಗುತ್ತದೆ.

ಸ್ಕ್ರಾಚ್​ ಆಗಿರುವ ನಾನ್​ ಸ್ಟಿಕ್​ ಪಾತ್ರೆಗಳನ್ನು 170 ಡಿಗ್ರಿ ಸೆಲ್ಸಿಯಸ್​​​ಗಿಂತ ಹೆಚ್ಚಿನ ತಾಪಾಮಾನದಲ್ಲಿ ಅಡುಗೆಗೆ ಬಳಕೆ ಮಾಡುವುದು ಅಪಾಯಕಾರಿ. ಜೊತೆಗೆ ಈ ಪಾತ್ರೆ ಶುಚಿ ವೇಳೆ ಕೂಡ ಅನೇಕ ಸ್ಕ್ರಾಚ್​ ಉಂಟಾಗುತ್ತದೆ. ಅದರ ಅನುಸಾರ ಕೆಲವು ಲಕ್ಷ ಮೈಕ್ರೋಪ್ಲಾಸ್ಟಿಕ್​ ಬಿಡುಗಡೆಯಾಗುತ್ತದೆ. ಇದು ನಮಗೆ ತಿಳಿಯದಂತೆ ನಮ್ಮ ದೇಹ ಸೇರಿ, ಆರೋಗ್ಯಕ್ಕೆ ಅಪಾಯವನ್ನು ಉಂಟು ಮಾಡುತ್ತದೆ.

ಈ ಆರೋಗ್ಯ ಸಮಸ್ಯೆ ಕಾಡಬಹುದು: ಐಸಿಎಂಆರ್​ ಪ್ರಕಾರ ನಾನ್​ ಸ್ಟಿಕ್​ ಪಾತ್ರೆಗಳು ಕ್ಯಾನ್ಸರ್​, ಫಲವತತ್ತೆ ಸಮಸ್ಯೆ, ಮೈಕೈ ನೋವು, ಹಾರ್ಮೋನ್​ ಅಸಮತೋಲನ ಮತ್ತು ತಲೆನೋವಿಗೆ ಕಾರಣವಾಗುತ್ತದೆ.

ಇದರ ಬಳಕೆ ಮಾಡಿ: ಐಸಿಎಂಆರ್​ ನಾನ್​ ಸ್ಟಿಕ್​ಗೆ ಬದಲಾಗಿ ಮಣ್ಣಿನ ಪಾತ್ರೆ ಬಳಕೆಗೆ ಸುರಕ್ಷಿತ ಎಂದು ಶಿಫಾರಸು ಮಾಡಿದೆ. ಜೊತೆಗೆ ಇದು ಆಹಾರ ದರ್ಜೆ ಸ್ಟೈನ್​ಲೆಸ್​ ಪಾತ್ರೆ ಬಳಕೆ ಮಾಡುವುದು ಉತ್ತಮ. ಜೊತೆಗೆ ರಾಸಾಯನಿಕ ಕೋಟಿಂಗ್​ ಇಲ್ಲದ ಪಾತ್ರೆಗಳ ಬಳಕೆ ಕೂಡ ಉತ್ತಮ. ಐಸಿಎಂಆರ್​​ ಭಾರತೀಯರ ಆಹಾರ ಮಾರ್ಗಸೂಚಿಗಳ ಹೆಸರಿನ ಅಡಿ ಈ ಅಂಶವನ್ನು ಕೂಡ ಉಲ್ಲೇಖಿಸಿದೆ.

ಇದನ್ನೂ ಓದಿ: ಕಬ್ಬಿಣಾಂಶ ಭರಿತ ಆಹಾರ ಸೇವನೆಯಿಂದ ಅನೀಮಿಯಾ ತಡೆಗಟ್ಟಲು ಸಾಧ್ಯ: ತಜ್ಞರ ಅಭಿಮತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.