ಕರ್ನಾಟಕ

karnataka

ಫೇಸ್​ಬುಕ್​ ಪ್ರೇಯಸಿಯಿಂದ 40 ಲಕ್ಷ ವಂಚನೆ: ಪ್ರಕರಣ ಭೇದಿಸಿದ ವಿಜಯಪುರ ಪೊಲೀಸರು

By

Published : Dec 1, 2022, 6:34 PM IST

40-lakh-fraud-by-facebook-lover-vijayapur-police-accused-women

ಯುವಕನೊಬ್ಬನಿಗೆ ಫೇಸ್​ಬುಕ್ ನಲ್ಲಿ ಪರಿಚಯವಾದ ಯುವತಿ ಸುಮಾರು 40 ಲಕ್ಷ ರೂ ವಸೂಲಿ ಮಾಡಿ ವಂಚಿಸಿದ ಪ್ರಕರಣವನ್ನು ವಿಜಯಪುರ ಪೊಲೀಸರು ಬೇಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್​ಬುಕ್​ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ :ಯುವಕನೊಬ್ಬನಿಗೆ ಫೇಸ್​ಬುಕ್ ನಲ್ಲಿ ಪರಿಚಯವಾದ ಯುವತಿ ಸುಮಾರು 40 ಲಕ್ಷ ರೂ ವಸೂಲಿ ಮಾಡಿ ವಂಚಿಸಿದ ಪ್ರಕರಣವನ್ನು ವಿಜಯಪುರ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್​ಬುಕ್​ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಪರಶುರಾಮ‌ ಎಂಬ ಯುವಕ ಹೈದರಾಬಾದ್ ನಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಇವರಿಗೆ ತಿಂಗಳಿಗೆ 30 ಸಾವಿರ ರೂಪಾಯಿ ಸಂಬಳ ಬರುತ್ತಿತ್ತು. ಈ ಮಧ್ಯೆ ಫೇಸ್ ಬುಕ್ ನಲ್ಲಿ ಒಂದು ಹುಡುಗಿಯ ಫ್ರೆಂಡ್​​ ರಿಕ್ವೆಸ್ಟ್​​ ಬಂದಿತ್ತು. ಇದನ್ನು ಪರಶುರಾಮ ಸ್ವೀಕರಿಸಿದ್ದು, ಬಳಿಕ ಫೇಸ್​ಬುಕ್​ನಲ್ಲಿ ಇಬ್ಬರ ನಡುವೆ ಚಾಟಿಂಗ್​ ಆರಂಭವಾಗಿತ್ತು.

ಪರಶುರಾಮ ಮತ್ತು ಯುವತಿ ನಡುವೆ ಸಲುಗೆ ಬೆಳೆದಿದ್ದು, ಈ ಸಲುಗೆ ಪ್ರೀತಿಗೆ ತಿರುಗಿತ್ತು. ಫೇಸ್ ಬುಕ್ ನಲ್ಲಿ ಯುವತಿಯ ಫೋಟೋ ನೋಡಿ ಮಾರುಹೋಗಿದ್ದ ಯುವಕ, ಆಕೆ ಕೇಳಿದಾಗಲೆಲ್ಲ ಹಣ ಕಳುಹಿಸಿದ್ದರು. ಹೀಗೆ ಸುಮಾರು 40 ಲಕ್ಷ ಹಣ ಪಡೆದು ಯುವತಿ ಮೋಸ ಮಾಡಿದ್ದಳು.

ಫೇಸ್​ಬುಕ್​ ಪ್ರೇಯಸಿಯಿಂದ 40 ಲಕ್ಷ ವಂಚನೆ : ಪ್ರಕರಣ ಭೇದಿಸಿದ ವಿಜಯಪುರ ಪೊಲೀಸರು

ಇದು ಇಷ್ಟಕ್ಕೆ ನಿಲ್ಲದೆ ಯುವತಿಯು, ಈತ ಸ್ನಾನ ಮಾಡುವ ಸಂದರ್ಭದಲ್ಲಿ ವಿಡಿಯೋ ಕಾಲ್ ಮಾಡಿ ಅದನ್ನು ರೆಕಾರ್ಡ್ ಮಾಡಿಕೊಂಡು ಮತ್ತೆ ಹಣ ಕೊಡುವಂತೆ ಬ್ಲಾಕ್ ಮೇಲ್​ ಮಾಡಿದ್ದಾಳೆ. ಇದರಿಂದ ರೋಸಿ ಹೋದ ಯುವಕ, ನ.15‌ ರಂದು ಸಿಂದಗಿ ಪೊಲೀಸ್ ಠಾಣೆಗೆ ದೂರು‌ ನೀಡಿದ್ದರು.

ಪ್ರಕರಣದ ಹಿನ್ನೆಲೆ: ಜೂನ್ ತಿಂಗಳ 29 ರಂದು ಪರಶುರಾಮ್​ಗೆ ಮಂಜುಳಾ ಕೆ.ಆರ್ ಎಂಬ ಫೇಸ್​ಬುಕ್ ಐಡಿಯಿಂದ ಫ್ರೆಂಡ್​ ರಿಕ್ವೆಸ್ಟ್​​ ಬಂದಿತ್ತು. ಯುವಕ ರಿಕ್ವೆಸ್ಟ್ ಸ್ವೀಕರಿಸಿದ್ದು, ಇಬ್ಬರ ನಡುವೆ ಚಾಟಿಂಗ್ ಆರಂಭವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಯುವತಿ, ನಮ್ಮ ತಾಯಿಗೆ ಆರೋಗ್ಯ ಸರಿ ಇಲ್ಲ, 700 ರೂ. ಫೋನ್ ಪೇ ಮಾಡುವಂತೆ ಮನವಿ ಮಾಡಿದ್ದಾಳೆ. ಅಂತೆಯೇ ಯುವತಿಯ ಮಾತಿಗೆ ಕರಗಿದ ಯುವಕ ಫೋನ್​ ಪೇ ಮಾಡುತ್ತಾನೆ. ಅಲ್ಲದೆ ಯುವತಿಯು ತಾನು ಯುಪಿಎಸ್ಸಿ ಪರೀಕ್ಷೆ ಬರೆಯುತ್ತಿದ್ದು, ಹಣ ನೀಡುವಂತೆ ಕೇಳುತ್ತಿರುತ್ತಾಳೆ. ಇದನ್ನು ನಂಬಿದ ಯುವಕ ಇಲ್ಲಿಯವರೆಗೆ ಸುಮಾರು 40 ಲಕ್ಷಕ್ಕೂ‌ ಹೆಚ್ಚು ಹಣವನ್ನು ಆಕೆಗೆ ಪಾವತಿಸಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ ಪಿ ಆನಂದಕುಮಾರ್​, ವಿಶೇಷ ತಂಡವೊಂ‌ದನ್ನು ರಚಿಸಿ ತನಿಖೆ ನಡೆಸಿದ್ದರು. ಸದ್ಯ ಪ್ರಕರಣ ಭೇದಿಸಿರುವ ಪೊಲೀಸರು, ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣ ತಾಲೂಕಿನ ದಾಸರಳ್ಳಿ ಗ್ರಾಮದಿಂದ ಆರೋಪಿ ಮಂಜುಳನನ್ನು ಬಂಧಿಸಿದ್ದಾರೆ.

ಇನ್ನೂ ಯುವಕ ನೀಡಿದ ಹಣದಲ್ಲಿ ಮಂಜುಳಾ 100 ಗ್ರಾಂ ಬಂಗಾರ, ಒಂದು ಹುಂಡೈ ಕಾರ್, ಬೈಕ್ ಖರೀದಿ ಮಾಡಿದ್ದಾಳೆ. ಜೊತೆಗೆ ಊರಲ್ಲಿ ಮನೆಯನ್ನೂ ಕಟ್ಟುತ್ತಿದ್ದಾಳೆ. ಮಂಜುಳಾಗೆ ಸಹಕರಿಸಿದ್ದ ಆಕೆಯ ಗಂಡ ತಲೆಮರೆಸಿಕೊಂಡಿದ್ದು, ಆತನ‌ ಪತ್ತೆಗೆ ಪೊಲೀಸರು‌ ಬಲೆ ಬೀಸಿದ್ದಾರೆ. ಇನ್ನು, ಪ್ರಕರಣ ಭೇದಿಸಿದ ಪೊಲೀಸರ ತಂಡಕ್ಕೆ ಎಸ್ ಪಿ ಆನಂದ ಕುಮಾರ ಪ್ರಶಂಸನಾ ಪತ್ರ ನೀಡಿ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ :ಫೇಸ್​ಬುಕ್ ಪ್ರೇಯಸಿಯಿಂದ ಆನ್​ಲೈನ್ ವಂಚನೆ; ತನಿಖೆಗೆ ವಿಶೇಷ ತಂಡ ರಚನೆ

ABOUT THE AUTHOR

...view details