ETV Bharat / technology

ನೀವು ಜಿಯೋ ಸಿಮ್ ಬಳಸುತ್ತಿದ್ದೀರಾ? ಈಗಲೇ ಒಮ್ಮೆ ಚೆಕ್​ ಮಾಡಿಕೊಳ್ಳಿ, ಏಕೆಂದರೆ? - jio number re verification process

author img

By ETV Bharat Karnataka Team

Published : Apr 29, 2024, 8:28 AM IST

jio-number-re-verification-process-step-by-step-guide-is-here
ನೀವು ಜಿಯೋ ಸಿಮ್ ಬಳಸುತ್ತಿದ್ದೀರಾ? ಈಗಲೇ ಒಮ್ಮೆ ಚೆಕ್​ ಮಾಡಿಕೊಳ್ಳಿ, ಏಕೆಂದರೆ?

ನೀವು ಜಿಯೋ ಸಿಮ್ ಬಳಕೆ ಮಾಡುತ್ತಿದ್ದೀರಾ? ತಕ್ಷಣ ನಿಮ್ಮ ಜಿಯೋ ಸಂಖ್ಯೆಯನ್ನು ಮರುಪರಿಶೀಲಿಸಿ. ಗಡುವಿನೊಳಗೆ ಮರು ಪರಿಶೀಲನೆ ಮಾಡದಿದ್ದರೆ, ನಿಮ್ಮ ಸಂಖ್ಯೆಯನ್ನು ನಿರ್ಬಂಧಿಸಲಾಗುತ್ತದೆ. ಏಕೆ ಏನು ಎಂಬುದನ್ನು ಈ ವರದಿ ಓದಿ ತಿಳಿದುಕೊಳ್ಳಿ

ನೀವು ಬೇರೆಯವರ ಆಧಾರ್ ಕಾರ್ಡ್ ಬಳಸಿ ಜಿಯೋ ಸಿಮ್ ತೆಗೆದುಕೊಂಡಿದ್ದೀರಾ? ಆದರೆ ಇದು ನಿಮಗಾಗಿ. ಬೇರೆಯವರ ಗುರುತಿನ ಪುರಾವೆಯೊಂದಿಗೆ ರಿಲಯನ್ಸ್ ಜಿಯೋ ಸಿಮ್ ಅನ್ನು ಬಳಸುತ್ತಿದ್ದೀರಾ? ಹಾಗಾದರೆ ಅವರೆಲ್ಲರೂ ಸಮಯಕ್ಕೆ ಸರಿಯಾಗಿ ಈ ಬಗ್ಗೆ ಮರು ಪರಿಶೀಲನೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನೀವು ಬಳಸುತ್ತಿರುವ ಸಿಮ್ ಕಾರ್ಡ್ ಬ್ಲಾಕ್ ಆಗುವ ಸಾಧ್ಯತೆ ಇರುತ್ತದೆ.

ರಿಲಯನ್ಸ್ ಜಿಯೋ ಈಗಾಗಲೇ ತನ್ನ ಬಳಕೆದಾರರಿಗೆ ಮರು ಪರಿಶೀಲಿಸಲು ಪಠ್ಯ ಸಂದೇಶಗಳು ಮತ್ತು ಕರೆಗಳನ್ನು ಕಳುಹಿಸುತ್ತಿದೆ. ನೀವು ಅದೇ ಸಂದೇಶವನ್ನು ಪಡೆದರೆ, ಯಾವುದೇ ವಿಳಂಬವಿಲ್ಲದೇ ನಿಮ್ಮ ಸಂಖ್ಯೆಯನ್ನು ಮರು ಪರಿಶೀಲಿಸಿಕೊಳ್ಳುವುದು ಉತ್ತಮ. ಇದು ಐಚ್ಛಿಕ ಅಲ್ಲ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಇದು ಕಡ್ಡಾಯವಾಗಿದೆ.

ಜಿಯೋ ಸಂಖ್ಯೆ ಮರು ಪರಿಶೀಲನೆ ಪ್ರಕ್ರಿಯೆ ಹೇಗೆ?:

  • ಮೊದಲು ನೀವು My Jio ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
  • ಅಪ್ಲಿಕೇಶನ್‌ನಲ್ಲಿ ನಿಮ್ಮ ಜಿಯೋ ಸಂಖ್ಯೆಯೊಂದಿಗೆ ನೀವು ಲಾಗಿನ್ ಆಗಬೇಕು.
  • ನಂತರ ನೀವು ಅಪ್ಲಿಕೇಶನ್‌ನಲ್ಲಿ ಎಲ್ಲ ಸೇವೆಗಳು ಕಾಣಿಸಿಕೊಳ್ಳುತ್ತವೆ (ಮರು-ಪರಿಶೀಲನೆ ಬಾಕಿಯಿದೆ. ಸೇವೆಯ ಅಮಾನತು ತಪ್ಪಿಸಲು ದಯವಿಟ್ಟು ಸಂಪರ್ಕವನ್ನು ಮರು - ಪರಿಶೀಲಿಸಿ ಎಂದು ಕಾಣಿಸಿಕೊಳ್ಳುತ್ತದೆ. ನೀವು ಈ ಸಂದೇಶವನ್ನು ನೋಡಿದ ತಕ್ಷಣ ಮರು-ಪರಿಶೀಲಿಸಬೇಕು.)

ಇದಕ್ಕಾಗಿ ನೀವು ಈಗ ಮರುಪರಿಶೀಲನಾ ಬಟನ್​ ಕ್ಲಿಕ್ ಮಾಡಬೇಕು: ನಿಮ್ಮ ಜಿಯೋ ಸಂಖ್ಯೆಯನ್ನು ನೀವು ಏಕೆ ಮರುಪರಿಶೀಲಿಸಬೇಕೆಂದು ಜಿಯೋ ವಿವರಿಸುತ್ತದೆ. ಇದನ್ನು ಓದಿದ ನಂತರ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು ಮೌಲ್ಯೀಕರಿಸಬೇಕು. ಅಥವಾ ನೀವು ವೋಟರ್ ಐಡಿ, ಪಾಸ್‌ಪೋರ್ಟ್‌ನಂತಹ ಇತರ ಸರ್ಕಾರಿ ಗುರುತಿನ ದಾಖಲೆಗಳನ್ನು ಸಹ ಅಪ್‌ಲೋಡ್ ಮಾಡಬಹುದು.

  • ನೀವು ಆಧಾರ್‌ನೊಂದಿಗೆ ಪರಿಶೀಲಿಸಲು ಬಯಸಿದರೆ, ಆಧಾರ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ ಮತ್ತು OTP ಅನ್ನು ರಚಿಸಿ ಕ್ಲಿಕ್ ಮಾಡಿ.
  • ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಯನ್ನು ತಕ್ಷಣವೇ ಕಳುಹಿಸಲಾಗುತ್ತದೆ. ಅದನ್ನು ನಮೂದಿಸಿ.
  • ನಂತರ ನೀವು ಫೋನ್ ಕ್ಯಾಮೆರಾವನ್ನು ತೆರೆಯಬೇಕು ಮತ್ತು ನಿಮ್ಮ ಫೋಟೋ ತೆಗೆಯಬೇಕು. ಫೋಟೋ ತುಂಬಾ ಸ್ಪಷ್ಟವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಆಗ ಮಾತ್ರ ಅದು ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಫೋಟೋಗೆ ಹೊಂದಿಕೆಯಾಗುತ್ತದೆ.
  • ಇಲ್ಲಿ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶ ಏನೆಂದರೆ ನೀವು ಬೇರೆ ಯಾವುದೇ ಫೋಟೋವನ್ನು ಅಪ್‌ಲೋಡ್ ಮಾಡಲು ಸಾಧ್ಯವಿಲ್ಲ. ಕ್ಯಾಮೆರಾದೊಂದಿಗೆ ನೈಜ ಸಮಯದಲ್ಲಿ ಫೋಟೋವನ್ನು ತೆಗೆದುಕೊಳ್ಳಿ.

ನಂತರ ನೀವು ಫೋಟೋ ಸಲ್ಲಿಕೆ ಬಟನ್ ಮೇಲೆ ಕ್ಲಿಕ್ ಮಾಡಬೇಕು, ಆ ಬಳಿಕ ನಿಮ್ಮ ಜಿಯೋ ಸಂಖ್ಯೆ ಮರು ಪರಿಶೀಲನೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಇದಕ್ಕೆ ಪುರಾವೆಯಾಗಿ ನೀವು SMS ಅನ್ನು ಪಡೆಯುತ್ತೀರಿ. ಇದು ಟಿಕೆಟ್ ಐಡಿಯನ್ನು ಒಳಗೊಂಡಿದೆ.

ನಿಮ್ಮ ಜಿಯೋ ಸಂಖ್ಯೆಯ ಮರು ಪರಿಶೀಲನೆಯು ಪೂರ್ಣಗೊಳ್ಳಲು ಸರಿಸುಮಾರು 7-8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಮರು ಪರಿಶೀಲನೆಯ ನಂತರ ನೀವು ಅದನ್ನು ಸಂದೇಶದ ರೂಪದಲ್ಲಿ ಪಡೆಯುತ್ತೀರಿ.

ಇದನ್ನು ಓದಿ: ಬ್ಯಾಂಕ್​ ಗ್ರಾಹಕರ ಗಮನಕ್ಕೆ: ಮೇ 1 ರಿಂದ ಏನೆಲ್ಲಾ ಬದಲಾವಣೆ: ಇಲ್ಲಿ ತಿಳಿಯಿರಿ! - New Bank Rules From May 1st 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.