ಕರ್ನಾಟಕ

karnataka

ಉದ್ಯಮಿಗಳಿಗೆ ಬೆದರಿಕೆ ಪ್ರಕರಣ : ಶಂಕಿತ ಉಗ್ರ ಸೇರಿ ಇಬ್ಬರು ವಶಕ್ಕೆ

By

Published : Oct 30, 2021, 8:36 PM IST

Updated : Oct 30, 2021, 9:15 PM IST

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡು ಉದ್ಯಮಿಗಳಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಎನ್​ ಪೊಲೀಸರು ಭಟ್ಕಳ ಮೂಲಕ ಶಂಕಿತ ಉಗ್ರ ಹುಸೇನ್ ಹಾಗೂ ತಿಪಟೂರಿನ ರೌಡಿ ಶೀಟರ್ ನಾಗೇಂದ್ರನನ್ನು ಶಿವಮೊಗ್ಗಕ್ಕೆ ಕರೆ ತಂದಿದ್ದಾರೆ..

Shimoga CEN Police hand overed suspected militants and rowdy sheeter
ಶಂಕಿತ ಉಗ್ರ ಸೇರಿ ಇಬ್ಬರು ವಶಕ್ಕೆ ಪಡೆದ ಸಿಇಎನ್​ ಪೊಲೀಸರು

ಶಿವಮೊಗ್ಗ :ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡು ಉದ್ಯಮಿಗಳಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಎನ್​ ಪೊಲೀಸರು ಒಬ್ಬ ಶಂಕಿತ ಉಗ್ರ ಹಾಗೂ ರೌಡಿಶೀಟರ್​ ಅನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದ್ದಾರೆ.

ಶಂಕಿತ ಉಗ್ರ ಸೇರಿ ಇಬ್ಬರನ್ನ ವಶಕ್ಕೆ ಪಡೆದ ಸಿಇಎನ್​ ಪೊಲೀಸರು

ನ್ಯಾಯಾಲಯದ ವಿಶೇಷ ಅನುಮತಿಯ ಮೇರೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರಸದಿಂದ ಭಟ್ಕಳ ಮೂಲಕ ಶಂಕಿತ ಉಗ್ರ ಹುಸೇನ್ ಹಾಗೂ ತಿಪಟೂರಿನ ರೌಡಿಶೀಟರ್ ನಾಗೇಂದ್ರನನ್ನು ಶಿವಮೊಗ್ಗಕ್ಕೆ ಕರೆ ತಂದಿದ್ದಾರೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ ಇಬ್ಬರ ಆರೋಗ್ಯ ತಪಾಸಣೆ ನಡೆಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಅಕ್ಟೋಬರ್​​​ನಲ್ಲಿ ತಮಗೆ ಬೆದರಿಕೆ ಹಾಕಿದ್ದರ ಕುರಿತಂತೆ ಉದ್ಯಮಿಯೋರ್ವರು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬೆದರಿಕೆ ಹಾಕಿದವರೂ ಉದ್ಯಮಿಯಿಂದ ಎರಡು ಬಾರಿ ಹಣ ಪಡೆದುಕೊಂಡಿದ್ದಾರೆ.

ಬ್ಯಾಂಕ್​​ ಖಾತೆಯನ್ನು ಪರಿಶೀಲಿಸಿದಾಗ ಭಟ್ಕಳದ ಸಾಹೀರ ಬಾನು ಎಂಬುವರ ಖಾತೆಯಾಗಿತ್ತು. ಅದರಿಂದಲೇ ಹಣ ವರ್ಗಾವಣೆಗೊಂಡಿತ್ತು. ಈಕೆ ಶಂಕಿತ ಉಗ್ರ ಹುಸೇನ್ ಪತ್ನಿ ಎಂಬ ವಿಚಾರ ತಿಳಿದ ಕೂಡಲೇ ಪೊಲೀಸರು ಆಕೆಯನ್ನು ಬಂಧಿಸಿದ್ದರು.

ಸದ್ಯ ಇಬ್ಬರನ್ನು ಶಿವಮೊಗ್ಗದ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಧೀಶೆ ಪೊರ್ಣಿಮ ಯಾದವ್ ನ.2ರವರೆಗೂ ಆರೋಪಿಗಳನ್ನ ಪೊಲೀಸ್‌ ವಶಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಅಪ್ಪ ಪುನೀತ್ ತಲೆ ಸವರಿ ಮುತ್ತು ಕೊಟ್ಟ ಪುತ್ರಿ ಧೃತಿ.. ಪಾರ್ಥಿವ ಶರೀರ ಕಂಡು ಉಮ್ಮಳಿಸಿದ ದುಃಖ..

Last Updated :Oct 30, 2021, 9:15 PM IST

ABOUT THE AUTHOR

...view details