ETV Bharat / sitara

ಅಪ್ಪ ಪುನೀತ್ ತಲೆ ಸವರಿ ಮುತ್ತು ಕೊಟ್ಟ ಪುತ್ರಿ ಧೃತಿ.. ಪಾರ್ಥಿವ ಶರೀರ ಕಂಡು ಉಮ್ಮಳಿಸಿದ ದುಃಖ..

author img

By

Published : Oct 30, 2021, 6:20 PM IST

Updated : Oct 30, 2021, 6:35 PM IST

ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿದ ಪುನೀತ್ ಪುತ್ರಿ, ತಂದೆಯ ಅಂತಿಮ ದರ್ಶನ ಪಡೆದರು. ಅಪ್ಪನ ಪಾರ್ಥಿವ ಶರೀರ ಕಂಡು ಕಣ್ಣೀರಾದರು..

Arrival of Puneet's daughter
Arrival of Puneet's daughter

ಬೆಂಗಳೂರು : ವಿದೇಶದಲ್ಲಿದ್ದ ನಟ ಪುನೀತ್ ಅವರ ಮಗಳು ಧೃತಿ ಆಗಮಿಸಿದ್ದಾರೆ. ಕಂಠೀರವ ಸ್ಟೇಡಿಯಂಗೆ ತೆರಳಿದ ಧೃತಿ, ತಂದೆಯ ಅಂತಿಮ ದರ್ಶನ ಪಡೆದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸದಾಶಿವನಗರ ನಿವಾಸಕ್ಕೆ ತೆರಳಿ ಅಲ್ಲಿಂದ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ತಂದೆಯ ಅಂತಿಮ ದರ್ಶನ ಪಡೆದರು.

ಪುನೀತ್ ಪಾರ್ಥಿವ ಶರೀರ ಕಂಡು ಉಮ್ಮಳಿಸಿದ ದುಃಖ

ಅಪ್ಪನ ಪಾರ್ಥಿವ ಶರೀಶ ಕಂಡು ಧೃತಿ ಕಣ್ಣೀರಾದರು. ಮಗಳು ಬರುತ್ತಿದ್ದಂತೆ ಅವರ ತಾಯಿ ಸಹ ಅಪ್ಪಿಕೊಂಡು ಕಣ್ಣೀರು ಸುರಿಸುತ್ತಿದ್ದಾರೆ. ಅಪ್ಪನ ಪಾರ್ಥಿವ ಶರೀರದ ತಲೆಯ ಮೇಲೆ ಮುತ್ತು ಕೊಟ್ಟು ನಮಸ್ಕಾರ ಮಾಡಿದ ಧೃತಿ, ತಾಯಿಯನ್ನು ಕಂಡು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕುತ್ತಿದ್ದಾರೆ.

Last Updated :Oct 30, 2021, 6:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.