ಕರ್ನಾಟಕ

karnataka

ರಾಯಚೂರು: ಮಟ್ಕಾ, ಜೂಜುಕೋರರ ಗಡಿಪಾರು ಮಾಡಿದ ಜಿಲ್ಲಾಧಿಕಾರಿ

By

Published : Dec 18, 2022, 10:44 AM IST

ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ಕಂಡುಬಂದರೆ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

deputy commissionr's Office, Raichur
ಜಿಲ್ಲಾಧಿಕಾರಿಗಳ ಕಾರ್ಯಾಲಯ, ರಾಯಚೂರು

ರಾಯಚೂರು:ಜಿಲ್ಲೆಯಲ್ಲಿ 6 ಜನ ರೂಢಿಗತ ಜೂಜುಕೋರರು ಹಾಗು ಮಟ್ಕಾ ಆರೋಪಿಗಳನ್ನು 6 ತಿಂಗಳ ಕಾಲ ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಯಚೂರು ನಗರದ ಅಂದ್ರೂನ್ ಕಿಲ್ಲೆ ಮಹ್ಮದ್ ಹಾಜಿ ಅಲಿಯಾಸ್ ಹಾಜಿ, ಸಿಂಧನೂರು ನಗರದ ಧನಗಾರವಾಡಿಯ ವೆಂಕಟೇಶ ಅಲಿಯಾಸ್ ಸರ್ದಾರ್, ಸಿರವಾರ ತಾಲೂಕಿನ ಬಾಗಲವಾಡ ಗ್ರಾಮದ ಬುಡ್ಡಸಾಬ್ ಅಲಿಯಾಸ್ ಲಾಳೇಸಾಬ್, ಬುದನ್ ಸಾಬ್, ಬಳಗಾನೂರು ಗ್ರಾಮದ ರಾಘವೇಂದ್ರ, ಮಾನವಿ ಕೋನಾಪುರ ಪೇಟೆಯ ಮುಸ್ತಫಾ ಅಬ್ದುಲ್ ಹುಸೇನ್, ಸಿಂಧನೂರು ತಾಲೂಕಿನ ಗೋರಬಾಳ ಗ್ರಾಮದ ನರಸಪ್ಪ ಗಾಡಿಪಾರಾಗಿರುವ ಆರೋಪಿಗಳು.

2022ರ ಡಿ.9ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಟ್ಕಾ, ಜೂಜಾಟದಲ್ಲಿ ನಿರಂತರವಾಗಿದ್ದ ಈ ಆರು ರೂಢಿಗತ ಆರೋಪಿಗಳನ್ನು ಗಡಿಪಾರು ಮಾಡುವುದಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿ ಪರಿಶೀಲಿಸಿದ ಜಿಲ್ಲಾಧಿಕಾರಿ, ಪ್ರತಿಯೊಬ್ಬ ಆರೋಪಿಯನ್ನೂ 6 ತಿಂಗಳ ಕಾಲ ಗಡಿಪಾರು ಮಾಡಿ ಎಂದು ಆದೇಶ ಮಾಡಿದ್ದಾರೆ.

ಅಲ್ಲದೇ ಜಿಲ್ಲೆಯಲ್ಲಿ ಮಟ್ಕಾ, ಜೂಜಾಟ ನಿರಂತರವಾಗಿರುವುದರಿಂದ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಅಕ್ರಮ ಚಟುವಟಿಕೆಗಳು ಕಂಡುಬಂದರೆ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಕುಂಬಾರರ ಸಂಘದ ಕಚೇರಿಯಲ್ಲಿ ಗಲಾಟೆ: 2ನೇ ಮಹಡಿಯಿಂದ ಬಿದ್ದು ವ್ಯಕ್ತಿಗೆ ಗಾಯ

ABOUT THE AUTHOR

...view details