ಕರ್ನಾಟಕ

karnataka

ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಶಂಕೆ.. ಯುವಕನ ಕೊಲೆ, ಶಾಲೆ ಆವರಣದಲ್ಲಿ ಶವ ಪತ್ತೆ

By

Published : Apr 10, 2023, 8:04 AM IST

ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಯುವಕನನ್ನು ಕೊಲೆ ಮಾಡಿ ದೇಹವನ್ನು ಶಾಲೆ ಆವರಣದಲ್ಲಿ ಬಿಸಾಡಿರುವ ಪ್ರಕರಣ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

ಕಲಬುರಗಿ
ಕಲಬುರಗಿ

ಕಲಬುರಗಿ:ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾದ ಯುವಕನನ್ನು ಕೊಲೆಗೈದು ಶಾಲೆಯ ಆವರಣದಲ್ಲಿ ಶವ ಬಿಸಾಡಿದ ಘಟನೆ ಜೇವರ್ಗಿ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ಭಾನುವಾರ ನಡೆದಿದೆ. ಸಂತೋಷ್​ ಹೆಗಡೆ (24) ಕೊಲೆಯಾದ ಯುವಕ. ಸಂತೋಷನ ಕತ್ತು ಹಿಸುಕಿ ಕೊಲೆ ಮಾಡಿ ಶಾಲೆ ಆವರಣದಲ್ಲಿ ಬಿಸಾಡಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಕೃಷಿ ಕಾಯಕ ಮಾಡುತ್ತಿದ್ದ ಸಂತೋಷ್​ ಅದೇ ಗ್ರಾಮದ ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಮಹಿಳೆಯೊಂದಿಗೆ ಅತಿ ಸಲುಗೆ ಬೆಳೆಸಿಕೊಂಡಿದ್ದ, ವಾಟ್ಸಪ್ ಚಾಟ್ ಮಾಡೋದು, ಮಾತಾಡೋದು ಮಾಡುತ್ತಿದ್ದನಂತೆ. ಇದೇ ಕಾರಣಕ್ಕೆ ವಿವಾಹಿತ ಮಹಿಳೆಯ ಸಹಾಯದೊಂದಿಗೆ ಆಕೆ ಕಡೆಯವರು ಕೊಲೆಗೈದಿದ್ದಾರೆಂದು ಯುವಕನ ಸಂಬಂಧಿಕರು ಆರೋಪಿಸಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಸುದ್ದಿ ತಿಳಿದ ನೆಲೋಗಿ ಠಾಣೆ ಪೊಲೀಸರು, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ಕೊಲೆಯಾದ ಸಂತೋಷ್​ ಕುಟುಂಬದವರು ಮಹಿಳೆಯ ವಿರುದ್ಧ ನೆಲೋಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೈಕ್ ಕಳ್ಳತನ ಸಿಸಿಟಿವಿಯಲ್ಲಿ ಕಳ್ಳನ ಕೈಚಳ ಸೇರೆ:ಕಲಬುರಗಿ ನಗರದ ದೇವಿನಗರ ಬಡಾವಣೆಯಲ್ಲಿ ಬೈಕ್ ಕಳ್ಳತನವಾಗಿದೆ. ಮನೆಯ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ‌ ಮಾಡಲಾಗಿದ್ದು, ಸಿಸಿಟಿವಿ ದೃಶ್ಯದಲ್ಲಿ ಕಳ್ಳನ ಕೈಚಳಕ ಸೇರೆಯಾಗಿದೆ. ಚನ್ನಬಸಪ್ಪ ಯಂಪಳ್ಳಿ ಎಂಬುವರಿಗೆ ಸೇರಿದ ಸ್ಪ್ಲೆಂಡರ್ ಬೈಕ್ ಕಳ್ಳತನ ಆಗಿದೆ. ರಾಘವೇಂದ್ರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಶೀಘ್ರವೇ ಕಳ್ಳರನ್ನು ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ದೇವಿನಗರ ಹಾಗೂ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಸಾಲು ಸಾಲು ದ್ವಿಚಕ್ರ ವಾಹನ ಕಳ್ಳತನ ಆಗುತ್ತಿವೆ. ಈ ಮುಂಚೆ ಬಸವರಾಜ್ ಹೊಳಕುಂದೆ ಅವರ ಪ್ಯಾಷನ್​ ವಾಹನ, ಶಿವಾನಂದ ಹಿರೇಗೌಡ ಟಿವಿಎಸ್​ ಎಕ್ಸ್​ಎಲ್​, ಸಿದ್ದರಾಮ ತರಕಾರಿ ಅಂಗಡಿ ಸ್ಪ್ಲೆಂಡರ್​, ದೇವೇಂದ್ರ ಚೌಹಾಣ ಸ್ಪ್ಲೆಂಡರ್​ ಪ್ರೋ, ಚಿಂಚೋಳಿ ಲೇಔಟ್ ನಿವಾಸಿ ಹಾಗು ಪ್ರಶಾಂತ ಅಷ್ಟಗಿ ಅವರ ವಾಹನಗಳು ಕಳ್ಳತನ ಆಗಿವೆ. ಕಳ್ಳತನವಾದ ವಾಹನಗಳು ಸಿಗುತ್ತಿಲ್ಲ, ಕಳ್ಳತನವೂ ನಿಲ್ಲುತ್ತಿಲ್ಲ ಎಂದು ಸ್ಥಳೀಯರು ಆತಂಕ ಹೊರಹಾಕಿದ್ದಾರೆ.

ಇದನ್ನೂ ಓದಿ:ರೀಲ್ಸ್​ ಮಾಡಲೆಂದು ಭಾವಿ ಪತಿಯನ್ನು ಪಾರ್ಕ್​ಗೆ ಕರೆದ ಹುಡುಗಿ .. ಯುವಕನ ಕತ್ತು ಕೊಯ್ದ ಅಪ್ರಾಪ್ತೆ!

ಯುವಕನ ಕತ್ತು ಕೊಯ್ದ ಯುವತಿ, ರಾಣೆಬೆನ್ನೂರು: ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನಿಗೆ ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬಳು ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದ ಘಟನೆ ಏ.8 ರಂದು ನಡೆದಿದೆ. ಅಪ್ರಾಪ್ತೆ ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದಳು. ಕೆಲ ದಿನಗಳ ಹಿಂದಷ್ಟೇ ಪಿಯುಸಿ ಪ್ರಥಮ ವರ್ಷದ ಪರೀಕ್ಷೆ ಬರೆದಿದ್ದ ಬಾಲಕಿಗೆ ದೇವೇಂದ್ರಗೌಡ ಎಂಬುವವರ ಜೊತೆ ವಿವಾಹ ನಿಶ್ಚಿತಾರ್ಥ ಮಾಡಲಾಗಿತ್ತು. ಏಪ್ರಿಲ್ 6 ರಂದು ದೇವೇಂದ್ರಗೌಡರನ್ನು ನಗರದ ಹೊರವಲಯದ ಸ್ವರ್ಣ ಪಾರ್ಕ್​ಗೆ ಕರೆಸಿಕೊಂಡ ಬಾಲಕಿ, ರೀಲ್ಸ್​​ ಮಾಡುವುದಾಗಿ ಹೇಳಿ, ಕಣ್ಣಿಗೆ ಬಟ್ಟೆ ಕಟ್ಟಿ ಕುತ್ತಿಗೆಗೆ ಚಾಕು ಇರಿದು ಹತ್ಯೆ ಮಾಡಲು ಯತ್ನಿಸಿದ್ದಾಳೆ ಎಂದು ಯುವಕನ ಪೋಷಕರು ದೂರು ನೀಡಿದ್ದರು.

ಇದನ್ನೂ ಓದಿ:ಭಟ್ಕಳ: ಬುಲೆಟ್ ಬೈಕ್ ಕದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು

ABOUT THE AUTHOR

...view details