ಕರ್ನಾಟಕ

karnataka

ನಾಳೆಯಿಂದ ಹಾಸನ ಅನ್‌ಲಾಕ್: ಕೊರೊನಾ ಹೋಗಿಲ್ಲ, ಮುನ್ನೆಚ್ಚರಿಕೆ ಮರೆಯಬೇಡಿ..

By

Published : Jul 11, 2021, 6:00 PM IST

ಸರ್ಕಾರದ ಆದೇಶದ ಅನ್ವಯ ನಾಳೆಯಿಂದ ಹಾಸನ ಜಿಲ್ಲೆಯಲ್ಲಿ ಅನ್ ಲಾಕ್ 3.0 ಜಾರಿ ಮಾಡುವುದಾಗಿ ಜಿಲ್ಲಾಡಳಿತ ಸೂಚಿಸಿದೆ.

Hassan
ಹಾಸನ

ಹಾಸನ:ಕಳೆದ 4 ತಿಂಗಳಿಂದ ಹಾಸನ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಾಗಿತ್ತು. ಸದ್ಯ ಕೊರೊನಾ ಪಾಸಿಟಿವಿಟಿ ದರ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ನಿಯಮ ಸಡಿಲಗೊಳಿಸಲಾಗುತ್ತಿದೆ.

ಮಾ 22, 2021ರಿಂದ ಜಿಲ್ಲೆಯಲ್ಲಿ 2ನೇ ಕೋವಿಡ್‌ ಅಲೆ ಪ್ರಾರಂಭವಾಗಿದ್ದು, ಸುಮಾರು 112 ದಿನಗಳ ಕಾಲ ಜಿಲ್ಲೆಯಲ್ಲಿ ಕೊರೊನಾ ಹೆಮ್ಮಾರಿಯ ಅಬ್ಬರವಿತ್ತು. ಸದ್ಯ ರಾಜ್ಯದ ಸರ್ಕಾರದ ನಿಮಯದ ಪ್ರಕಾರ ನಾಳೆಯಿಂದ ಕೆಲವು ಷರತ್ತುಗಳ ಪ್ರಕಾರ ಜಿಲ್ಲೆಯನ್ನು ಅನ್ ಲಾಕ್ ಮಾಡಲಾಗುತ್ತಿದೆ.

ಮಾ.23, 2021 ರಿಂದ ಜು.10ರ ವರೆಗೆ ಜಿಲ್ಲೆಯಲ್ಲಿ ಸುಮಾರು 74,869 ಮಂದಿ ಸೋಂಕಿತರು ಪತ್ತೆಯಾಗಿದ್ದರು. ಇದರಲ್ಲಿ ಸದ್ಯ ಇನ್ನೂ 2,427 ಸಕ್ರಿಯ ಪ್ರಕರಣಗಳಿವೆ. ಕಳೆದ 112 ದಿನಗಳ ಅಂದರೆ 2ನೇ ಅಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಕೊರೊನಾಗೆ ಸುಮಾರು 763 ಮಂದಿ ಬಲಿಯಾಗಿದ್ದರು. ಮೊದಲ ಮತ್ತು ಎರಡನೇ ಅಲೆಯಿಂದ ಜಿಲ್ಲೆಯಲ್ಲಿ ಬರೋಬ್ಬರಿ 1,229 ಮಂದಿ ಸಾವನಪ್ಪಿದ್ದಾರೆ. ಈವರೆಗೆ 1,00,432 ಮಂದಿ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, 78 ಮಂದಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ 2,427 ಸಕ್ರಿಯ ಪ್ರಕರಣಗಳಿದ್ದ ಕಾರಣ ಜಿಲ್ಲೆಯನ್ನು ಅನ್​​ಲಾಕ್ ಮಾಡುವುದಾ, ಬೇಡವಾ ಎಂಬ ಗೊಂದಲ ಸೃಷ್ಠಿಯಾಗಿತ್ತು. ಕೆಲವು ಜೆಡಿಎಸ್ ನಾಯಕರುಗಳು ನಾಳೆಯಿಂದ ಲಾಕ್​​ಲಾಕ್ ಮಾಡದಿದ್ದರೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದರು. ಸದ್ಯ ಸರ್ಕಾರದ ಆದೇಶದ ಅನ್ವಯ ನಾಳೆಯಿಂದ ಜಿಲ್ಲೆಯನ್ನು ಅನ್ ಲಾಕ್ ಮಾಡುವುದಾಗಿ ಜಿಲ್ಲಾಡಳಿತ ಸೂಚಿಸಿದೆ.

ABOUT THE AUTHOR

...view details