ಕರ್ನಾಟಕ

karnataka

ಜೆಡಿಎಸ್ ಅಭ್ಯರ್ಥಿ‌ ಕಣದಿಂದ ನಿವೃತ್ತಿ ಮಾಡಿಸೋದೇ ಈಗ ಸಂಧಾನ: ಸಿದ್ದರಾಮಯ್ಯ

By

Published : Jun 8, 2022, 6:22 PM IST

ಮಕ್ಕಳಿಗೆ ವೈಚಾರಿಕತೆ ತಿಳಿಸಬೇಕು. ಅಂಬೇಡ್ಕರ್ ಸಂವಿಧಾನ ಶಿಲ್ಪಿ ಅನ್ನೋದನ್ನು ತೆಗೆದು ಹಾಕಲಾಗಿದೆ. ಬಸವಣ್ಣ ವೈದಿಕ ಧರ್ಮದ ವಿರುದ್ಧ ಹೋರಾಡಿದರು.‌ ಅದನ್ನೇ ನೀವು ತಿರುಚಿದ್ದೀರಿ. 10 ದಿನದಲ್ಲಿ ಪರಿಷ್ಕರಣೆಯನ್ನು ಹಿಂಪಡೆದು ಅದನ್ನು ತೆಗೆದು ಹಾಕಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ಸಿದ್ದರಾಮಯ್ಯ
ಸಿದ್ದರಾಮಯ್ಯ

ಧಾರವಾಡ: ರಾಜ್ಯಸಭೆ ಚುನಾವಣೆ ಕಣದಿಂದ ಜೆಡಿಎಸ್ ಅಭ್ಯರ್ಥಿ‌ಯನ್ನು ನಿವೃತ್ತಿ ಮಾಡಿಸೋದೇ ಈಗ ಸಂಧಾನ. ಅವರು ನಮಗೆ ವೋಟ್ ಹಾಕಬೇಕು, ಅದೇ ಸಂಧಾನ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.


ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ವಿಚಾರವಾಗಿ ಸಂಧಾನ ಮಾಡಿಕೊಳ್ಳುವಂತೆ ಹೆಚ್‌ಡಿಕೆ ಆಹ್ವಾನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ, ಈ ಹಿಂದೆ ದೇವೇಗೌಡರಿಗಾಗಿ ನಾವು ಅಭ್ಯರ್ಥಿಯನ್ನೇ ಹಾಕಿರಲಿಲ್ಲ. ಆದರೆ, ಈಗ ಅವರು ಅಭ್ಯರ್ಥಿ ಯಾಕೆ ಹಾಕಿದ್ರು?. ಬಿಜೆಪಿ ಸೋಲಿಸೋದು ಅನ್ನೋದಾದ್ರೆ ನಮಗೆ ಸಪೋರ್ಟ್ ಮಾಡಲಿ. ನಮ್ಮ ಪಕ್ಷಕ್ಕೆ ಹೈಕಮಾಂಡ್​ ಇದೆ. ಅವರಿಗೆ ಹೈಕಮಾಂಡ್​ ಇಲ್ಲ. ಅವರ ಹೈಕಮಾಂಡ್​ ಇರೋದು ಪದ್ಮನಾಭನಗರದಲ್ಲಿ. ನಮ್ಮ ಹೈಕಮಾಂಡ್​ ಇರೋದು ದೆಹಲಿಯಲ್ಲಿ ಎಂದು ಲೇವಡಿ ಮಾಡಿದರು.

ರಾಜ್ಯದ ಉಸ್ತುವಾರಿ ಹೇಳಿದಂತೆ ಎರಡನೇ ಅಭ್ಯರ್ಥಿ ಹಾಕಿದ್ದೇವೆ. ಈಗ ಏನೂ ಆಗೋದಿಲ್ಲ. ಏನೇ ಆಗೋದಿದ್ರು ಮತದಾನದ ದಿನವೇ ತೀರ್ಮಾನ ಆಗುತ್ತದೆ. ಪಠ್ಯಪುಸ್ತಕ ವಿವಾದ ಹಿನ್ನೆಲೆಯಲ್ಲಿ ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಸಾಹಿತಿಗಳು ಅವರ ಫಲಾನುಭವಿಗಳಾಗಿದ್ದರು ಎನ್ನುವ ಅಂದಂಡ ಸಿ ಕಾರಿಯಪ್ಪ ಹೇಳಿಕೆ ವಿಚಾರ ಪಂಡಿತಾರಾಧ್ಯ ಶ್ರೀ ನಮ್ಮ ಫಲಾನುಭವಿನಾ? ಬಸವಣ್ಣನ ವಿಚಾರವನ್ನು ಪುಸ್ತಕದಲ್ಲಿ ತಿರುಚಿದ್ದೀರಿ. ಅಂಬೇಡ್ಕರ್ ವಿಚಾರ ಸೇರಿ ಭಗತ್ ಸಿಂಗ್ ಹಾಗೂ ಕುವೆಂಪು ಬಗ್ಗೆ ತಿರುಚಲಾಗಿದೆ. ಚರಿತ್ರೆಯಲ್ಲಿ ಏನಿದೆ ಅನ್ನೋದನ್ನ ತಿರುಚಿ ಸತ್ಯ ಮುಚ್ಚಿಟ್ಟಿದ್ದೀರಿ ಎಂದು ಹರಿಹಾಯ್ದರು.

ನೈಜ ಇತಿಹಾಸವನ್ನು ಜನರಿಗೆ ತಿಳಿಸಬೇಕು: ಮಕ್ಕಳಿಗೆ ವೈಚಾರಿಕತೆ ತಿಳಿಸಬೇಕು. ಅಂಬೇಡ್ಕರ್ ಸಂವಿಧಾನ ಶಿಲ್ಪಿ ಅನ್ನೋದನ್ನು ತೆಗೆದು ಹಾಕಲಾಗಿದೆ. ಬಸವಣ್ಣ ವೈದಿಕ ಧರ್ಮದ ವಿರುದ್ಧ ಹೋರಾಡಿದರು.‌ ಅದನ್ನೇ ನೀವು ತಿರುಚಿದ್ದೀರಿ. 10 ದಿನದಲ್ಲಿ ಪರಿಷ್ಕರಣೆಯನ್ನು ಹಿಂಪಡೆದು ಅದನ್ನು ತೆಗೆದು ಹಾಕಬೇಕು. ರೋಹಿತ್ ಚಕ್ರತೀರ್ಥ ಮಾಡಿರೋದನ್ನು ಸಂಪೂರ್ಣ ಹಿಂಪಡೆಯಬೇಕು. ನೈಜ ಇತಿಹಾಸವನ್ನು ಜನರಿಗೆ ತಿಳಿಸಬೇಕು. ಸಾಹಿತಿಗಳು, ದಾರ್ಶನಿಕರು, ಸಂತರು ಹೇಳಿರೋದನ್ನು ತೋರಿಸಿ ಎಂದರು. ಆರ್​ಎಸ್​ಎಸ್​ ಚಡ್ಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಚಡ್ಡಿ ಒಂದನ್ನು ಬಿಟ್ಟು ಬೇರೆ ಕೇಳಿ ಎಂದು ಗರಂ ಆದರು.

ಇದನ್ನೂ ಓದಿ:ಹೆಚ್​ಡಿಕೆ, ಬಿಎಸ್​ವೈ, ಬೊಮ್ಮಾಯಿ ಸರ್ಕಾರದಿಂದ ₹3 ಲಕ್ಷ ಕೋಟಿ ಸಾಲ: ಸಿದ್ದರಾಮಯ್ಯ

TAGGED:

ABOUT THE AUTHOR

...view details