ETV Bharat / state

ಹೆಚ್​ಡಿಕೆ, ಬಿಎಸ್​ವೈ, ಬೊಮ್ಮಾಯಿ ಸರ್ಕಾರದಿಂದ ₹3 ಲಕ್ಷ ಕೋಟಿ ಸಾಲ: ಸಿದ್ದರಾಮಯ್ಯ

author img

By

Published : Jun 8, 2022, 5:01 PM IST

'ನಾನು ಕಳೆದ 40 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಇಂತಹ ಭ್ರಷ್ಟ, ಕೆಟ್ಟ ಸರ್ಕಾರ ಯಾವತ್ತಿಗೂ ಬಂದಿರಲಿಲ್ಲ' ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಸಿದ್ದರಾಮಯ್ಯ
ಸಿದ್ದರಾಮಯ್ಯ

ಧಾರವಾಡ: 'ರಾಜ್ಯದಲ್ಲಿ ಹೆಚ್​.ಡಿ.ಕುಮಾರಸ್ವಾಮಿ, ಯಡಿಯೂರಪ್ಪ ಹಾಗು ಬೊಮ್ಮಾಯಿ ಸೇರಿ 3 ಲಕ್ಷ ಕೋಟಿ ರೂ ಸಾಲ ಮಾಡಿದ್ದಾರೆ. ನಾನೇ ಹಣಕಾಸು ಮಂತ್ರಿಯಾದರೂ ಎಲ್ಲವನ್ನೂ ಸರಿ ಮಾಡಲು ಎರಡು ವರ್ಷ ಬೇಕು. ನಾನು ಜೋಕ್ ಮಾಡುತ್ತಿಲ್ಲ. ಇಷ್ಟೊಂದು ಬಡ್ಡಿ ಕಟ್ಟಿಕೊಂಡು ಸಾಲ ಮಾಡಿದ್ದಾರೆ. ನಾನು ಐದು ವರ್ಷ ಸಿಎಂ ಆಗಿದ್ದೆ. ಆಗ ರೆವಿನ್ಯೂ ಸರಿಯಾಗಿತ್ತು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.


ಧಾರವಾಡದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ, 'ನಾನು ಶಾಲೆಯಲ್ಲಿದ್ದಾಗಲೇ ಗಣಿತದಲ್ಲಿ ನಂ. 1 ಇದ್ದೆ. ಆದರೆ ಏನು ಮಾಡೋದು ಲಾ ಮಾಡಿದೆ. ನಾನು ಇಲ್ಲಿಯವರೆಗೆ 13 ಬಜೆಟ್ ಮಂಡಿಸಿದ್ದೇನೆ. ನಾನು 40 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಇಂತಹ ಭ್ರಷ್ಟ, ಕೆಟ್ಟ ಸರ್ಕಾರ ಯಾವತ್ತಿಗೂ ಬಂದಿರಲಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ' ಎಂಬ ವಿಶ್ವಾಸ ವ್ಯಕ್ತಪಡಿಸಿದರು.

'ರಾಜ್ಯ ಸರ್ಕಾರ ಏನು ಸಾಧನೆ ಮಾಡಿದೆ. ಸಾಧನೆ ಬಗ್ಗೆ ಒಂದು ವೇದಿಕೆಗೆ ಬನ್ನಿ ಅಂತಾ ಕರೆದಿದ್ದೇನೆ. ಆದರೆ ಬರೋಕೆ ಅವರಿಗೆ ದಮ್ ಇಲ್ಲ. ನಾಲ್ಕು ವರ್ಷಗಳಲ್ಲಿ ಒಂದೇ ಒಂದು ಮನೆ ಕೊಟ್ಟಿಲ್ಲ. ಧಾರವಾಡ ಜಿಲ್ಲೆಯಲ್ಲಿಯೂ ಮನೆ ಕೊಟ್ಟಿಲ್ಲ. ಜಿಲ್ಲೆಯ ಸಚಿವರು ಮನೆ ಮಂಜೂರು ಮಾಡಿದ ಆದೇಶ ತೋರಿಸಲಿ. ನಾನು ನನ್ನ ಮಾತು ವಾಪಸ್ ತೆಗೆದುಕೊಳ್ಳುತ್ತೇನೆ. ಕುಮಾರಸ್ವಾಮಿ ಅವಧಿಯಲ್ಲಿಯೂ ಒಂದೇ ಒಂದು ಮನೆ ಕೊಟ್ಟಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಏಳು ಕೆಜಿ ಅಕ್ಕಿ ಕೊಡುವ ಕಾರ್ಯಕ್ರಮ ತಂದಿದ್ದೆ': 'ಐದು ವರ್ಷಗಳಲ್ಲಿ ನಾನು 16,800 ಕೋಟಿ ರೂ ಖರ್ಚು ಮಾಡಿ 15 ಲಕ್ಷ ಮನೆ ಕೊಟ್ಟಿದ್ದೆ. ಸೂರು ಇಲ್ಲದವರು 20 ಲಕ್ಷ ಜನ ಇದಾರೆ ಅಂತ ಅವರೇ ಹೇಳ್ತಾರೆ. ಆದರೆ ಬಡವರಿಗೆ ಮನೆ ಕಟ್ಟಿಕೊಡೋ ಜವಾಬ್ದಾರಿ ಇಲ್ಲವಾ?. ಕೆಲಸ ಮಾಡದವರಿಗೆ ಕಾಳಜಿ ಇಲ್ಲದವರಿಗೆ ವೋಟ್ ಹಾಕಬೇಕು. ರೈತರ ಸಾಲ ಮನ್ನಾ ಮಾಡಿಲ್ಲ. ನಾನು ಏಳು ಕೆಜಿ ಅಕ್ಕಿ ಕೊಡುವ ಕಾರ್ಯಕ್ರಮ ತಂದಿದ್ದೆ.‌ ಅದು ಇಲ್ಲದೇ ಹೋಗಿದ್ದರೆ ಕೊರೊನಾದಲ್ಲಿ ಇನ್ನೊಂದಿಷ್ಟು ಜನ ಸಾಯುತ್ತಿದ್ದರು. ಲಂಚ ಎಷ್ಟಿದೆ ಗೊತ್ತಾ' ಎಂದರು.

'ಈಶ್ವರಪ್ಪ ಯಾಕೆ ರಾಜೀನಾಮೆ ಕೊಟ್ಟಾ?': '40 ಪ್ರತಿಶತ ಲಂಚ ಹೊಡೆದು ಸಿಕ್ಕು ಬಿದ್ದಿದ್ದ. ನಾವು ಪ್ರತಿಭಟನೆ ಮಾಡಿದ ಮೇಲೆ ಬಾಯಿ‌ ಮುಚ್ಚಿಕೊಂಡ. ರಾಜೀನಾಮೆ ಕೊಟ್ಟರೂ ಮತ್ತೊಬ್ಬರ ಮನೆ ಹಾಳು ಮಾಡುವುದೇ ಇವರ ಕೆಲಸ. ರಮೇಶ ಜಾರಕಿಹೊಳಿ ಯಾಕೆ ರಾಜೀನಾಮೆ ಕೊಟ್ಟಾ? ನಾನು ಹೇಳೋಕೆ ಹೋಗೊಲ್ಲ? ಇಂತಹ ಮಂತ್ರಿಗಳನ್ನು ಇಟ್ಟುಕೊಂಡಿದ್ದ ಸರ್ಕಾರ ಇರಬೇಕಾ?' ಎಂದು ಪ್ರಶ್ನಿಸಿದರು.

'ಯಾರಿಗೆ ಅಚ್ಛೇ ದಿನ ಬಂದಿದೆ?' 'ನರೇಂದ್ರ ಮೋದಿ ನಾ ಕಾವುಂಗಾ ನಾ ಕಾನೆ ದುಂಗಾ ಅಂತಾರೆ. ಆದ್ರೆ ಗುತ್ತಿಗೆದಾರರ ಸಂಘದವರು ಪತ್ರ ಬರೆದು ಒಂದು ವರ್ಷ ಆಯ್ತು. ಏನು ಮಾಡುತ್ತಿದ್ದೀರಿ. ನರೇಂದ್ರ ಮೋದಿ ಅಚ್ಛೇ ದಿನ ಅಂತಾರೆ. ಯಾರಿಗೆ ಅಚ್ಛೇ ದಿನ ಬಂದಿದೆ ಹೇಳಿ' ಎಂದು ಹರಿಹಾಯ್ದರು.

ಇದನ್ನೂ ಓದಿ: ದೇವೇಗೌಡರು ರಾಜ್ಯಸಭೆಗೆ ನಿಂತಾಗ ನಾವು ಅಭ್ಯರ್ಥಿ ಹಾಕಿದ್ದೇವಾ?: ಹೆಚ್​​ಡಿಕೆಗೆ ಸಿದ್ದು ಪ್ರಶ್ನೆ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.