ಕರ್ನಾಟಕ

karnataka

ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಿಂದ ಹಿಂದೆ ಸರಿದ್ರಾ ಮಾಜಿ ಸಚಿವ ವಿನಯ ಕುಲಕರ್ಣಿ!?

By

Published : Sep 5, 2021, 3:14 PM IST

Updated : Sep 5, 2021, 4:02 PM IST

ಈ ಮೊದಲು ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಿನಯ್​​​ ಕುಲಕರ್ಣಿ ಅವರು, ಇದೀಗ ನಾವು ಸ್ವಾಮೀಜಿಗೆ ಬೆಂಬಲ ನೀಡುತ್ತೇವೆ ಎನ್ನುವ ಮೂಲಕ ಹೋರಾಟದಿಂದ ಹಿಂದೆ ಸರಿದ್ರಾ ಎಂಬ ಪ್ರಶ್ನೆ ಮೂಡುತ್ತಿದೆ..

Vinay Kulkarni
ವಿನಯ್​ ಕುಲಕರ್ಣಿ

ಬಳ್ಳಾರಿ :ಕೇವಲ ಲಿಂಗಾಯತ ಮಾತ್ರವಲ್ಲ, ಎಲ್ಲಾ ಸಮಾಜಕ್ಕೆ ನಾವು ಬೆಂಬಲ ನೀಡುವುದಾಗಿ ಮಾಜಿ ಸಚಿವ ವಿನಯ್​​ ಕುಲಕರ್ಣಿ ಹೇಳಿದರು. ನಗರದಲ್ಲಿ ಮಾಧ್ಯಮಗಳು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಕುರಿತಂತೆ ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿನಯ್ ಕುಲಕರ್ಣಿ ಅವರು, ನಮ್ಮ ಬೆಂಬಲ ಕೇವಲ ಲಿಂಗಾಯತ ಸಮುದಾಯಕ್ಕೆ ಅಲ್ಲ. ಎಲ್ಲಾ ಸಮಾಜಕ್ಕೆ ನಾವು ಬೆಂಬಲ ನೀಡಬೇಕಾಗುತ್ತದೆ. ಸಿಎಂ ನಮ್ಮವರೇ ಇದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಶ್ವಾಸ ಇದೆ ಎಂದರು.

ಮಾಜಿ ಸಚಿವ ವಿನಯ ಕುಲಕರ್ಣಿ

ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ 2ಎ ಮೀಸಲಾತಿ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಅವರ ಹಿಂದೆ ನಾವಿದ್ದೇವೆ. ಸಮಾಜದ ಯಾವುದೇ ವ್ಯಕ್ತಿಗೆ ಸಂಕಷ್ಟ ಬಂದಾಗ ಸಹಾಯ ಮಾಡುತ್ತೇವೆ. ನಾನು ರಾಜಕಾರಣದಲ್ಲಿ ಸಕ್ರಿಯವಾಗಿರುತ್ತೇನೆ. ಸಮಾಜದ ಹೋರಾಟಕ್ಕೆ ನಮ್ಮ ಬೆಂಬಲ ಇರುತ್ತದೆ ಎಂದರು.

ಈ ಮೊದಲು ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಿನಯ್​​​ ಕುಲಕರ್ಣಿ ಅವರು, ಇದೀಗ ನಾವು ಸ್ವಾಮೀಜಿಗೆ ಬೆಂಬಲ ನೀಡುತ್ತೇವೆ ಎನ್ನುವ ಮೂಲಕ ಹೋರಾಟದಿಂದ ಹಿಂದೆ ಸರಿದ್ರಾ ಎಂಬ ಪ್ರಶ್ನೆ ಮೂಡುತ್ತಿದೆ.

ಓದಿ: ರಾಜ್ಯದಲ್ಲಿ ಸಾರ್ವಜನಿಕ ಗಣೇಶ ಉತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ?

Last Updated :Sep 5, 2021, 4:02 PM IST

ABOUT THE AUTHOR

...view details