ಕರ್ನಾಟಕ

karnataka

ಡಿ.14ರ ನಂತರ ನನ್ನ-ಡಿಕೆಶಿ ಮಧ್ಯೆ ಬಹಿರಂಗ ವಾರ್ ಆಗಲಿ : ರಮೇಶ್ ಜಾರಕಿಹೊಳಿ‌

By

Published : Dec 1, 2021, 3:01 PM IST

ಬೆಳಗಾವಿ ವಿಧಾನಪರಿಷತ್ ಕಣದಲ್ಲಿ ಡಿ ಕೆ ಶಿವಕುಮಾರ್ ಹಾಗೂ ರಮೇಶ್ ಜಾರಕಿಹೊಳಿ ನಡುವೆ ವಾಕ್ಸಮರ ಏರ್ಪಟ್ಟಿದೆ. ಈ ನಡುವೆ ಡಿಸೆಂಬರ್ 14ರ ಫಲಿತಾಂಶ ಬಳಿಕ ಶಿವಕುಮಾರ್ ಟೀಕೆಗಳಿಗೆ ಕಠೋರವಾಗಿ ಉತ್ತರಿಸುವುದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ..

ramesh-jarkiholi-
ರಮೇಶ್ ಜಾರಕಿಹೊಳಿ‌

ಬೆಳಗಾವಿ :ಪರಿಷತ್ ಚುನಾವಣೆ ಫಲಿತಾಂಶದ ಬಳಿಕ ಜಾರಕಿಹೊಳಿ-ಡಿಕೆಶಿ ಮಧ್ಯೆ ಓಪನ್ ವಾರ್ ಆಗಲಿ ಎಂದು ಮಾಜಿ ಸಚಿವ ರಮೇಶ್ ‌ಜಾರಕಿಹೊಳಿ ಪಂಥಾಹ್ವಾನ ನೀಡಿದ್ದಾರೆ.

ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಮಾಡಿರುವ ಎಲ್ಲಾ ಟೀಕೆ, ಟಿಪ್ಪಣಿಗಳಿಗೆ ಡಿಸೆಂಬರ್ 14ರಂದು ಉತ್ತರ ನೀಡಲಿದ್ದೇನೆ ಎಂದಿದ್ದಾರೆ.

ಡಿ ಕೆ ಶಿವಕುಮಾರ್ ಟೀಕೆಗೆ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿರುವುದು..

ನನ್ನ ವಿರುದ್ಧ ಡಿ ಕೆ ಶಿವಕುಮಾರ್ ಆಡಿರುವ ಪ್ರತಿ ಶಬ್ದಕ್ಕೂ ಡಿ.14ರಂದು ಕಠೋರವಾಗಿ ಉತ್ತರ ನೀಡುತ್ತೇನೆ. ನಾವು ಎಲೆಕ್ಷನ್ ಮೂಡ್​​ನಲ್ಲಿದ್ದೇವೆ. ಚುನಾವಣೆ ಮಾಡುತ್ತೇವೆ. 1985ರಿಂದ ಹಿಡಿದು ಇವತ್ತಿನವರೆಗೆ ಏನೆಲ್ಲಾ ವಿಷಯಗಳಿವೆ.

ನನ್ನ ವ್ಯಕ್ತಿತ್ವ ಏನಿತ್ತು? ಅವರ ವ್ಯಕ್ತಿತ್ವ ಏನಿತ್ತು? ಎಲ್ಲವನ್ನೂ ವಿವರವಾಗಿ ಮಾತನಾಡೋಣ. ಇದಕ್ಕೆ ಸಂಬಂಧಿಸಿದಂತೆ ಬೇಕಾದರೆ ಓಪನ್ ವಾರ್ ಆಗಲಿ. 1985ರಿಂದ ಜಾರಕಿಹೊಳಿ‌ ಕುಟುಂಬ ಹೇಗಿತ್ತು, ಡಿಕೆಶಿ ಕುಟುಂಬ ಹೇಗಿತ್ತು ಪ್ರತಿಯೊಂದನ್ನು ಹೇಳುತ್ತೇನೆ ಎಂದರು.

ವರಿಷ್ಠರ ಆಶೀರ್ವಾದದಿಂದಲೇ ಬದುಕಿದ್ದೇನೆ :ದೆಹಲಿಗೆ ಹೋಗಿ ವರಿಷ್ಠರ ಭೇಟಿಯಾಗಿ ಬಂದಿದ್ದೇನೆ. ವರಿಷ್ಠರ ಆಶೀರ್ವಾದ ಯಾವಾಗಲೂ ನನ್ನ ಮೇಲಿದೆ. ವರಿಷ್ಠರು ಇದ್ದಾರೆ ಎಂಬ ಕಾರಣಕ್ಕೆ ನಾನು ಇಂದು ಜೀವಂತವಿದ್ದೇನೆ. ವರಿಷ್ಠರು ನನ್ನ ಬೆಂಬಲಕ್ಕೆ ಇರಲಿಲ್ಲ ಅಂದಿದ್ರೇ ನನ್ನ ವಿರುದ್ಧ ಷಡ್ಯಂತ್ರ ಮಾಡಿ ಮುಗಿಸಿ ಬಿಡುತ್ತಿದ್ದರು. ಬಿಜೆಪಿ ನಾಯಕರು ಮತ್ತು ಸಂಘ ಪರಿವಾರದ ಆಶೀರ್ವಾದದಿಂದಲೇ ನಾನಿಂದು ಪ್ರಮುಖ ನಾಯಕನಾಗಿ ಹೊರ ಬಂದಿದ್ದೇನೆ ಎಂದರು.

ಇದನ್ನೂ ಓದಿ:ಹುಬ್ಬಳ್ಳಿ ಬಿಜೆಪಿ ಸಭೆಯಲ್ಲಿ ಶಾಸಕ-ಎಂಎಲ್​ಸಿ ಗಲಾಟೆ: ​ಶೆಟ್ಟರ್ ಸಮ್ಮುಖದಲ್ಲೇ ಹೊಯ್‌ ಕೈ

ABOUT THE AUTHOR

...view details