ಕರ್ನಾಟಕ

karnataka

ಮಹದಾಯಿ ವಿಚಾರದಲ್ಲಿ ಯಾರಿಗೂ ಆತಂಕ ಬೇಡ: ಸಚಿವ ಕಾರಜೋಳ

By

Published : Feb 24, 2023, 8:52 PM IST

ಮಹದಾಯಿ ಯೋಜನೆಗೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಡಿಪಿಆರ್ ಅನುಮೋದನೆ ನೀಡಲಾಗಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ

ಬೆಳಗಾವಿ: ಮಹದಾಯಿ ಯೋಜನೆ ವಿಚಾರದಲ್ಲಿ ಯಾರೂ ಆತಂಕಪಡುವ ಅಗತ್ಯವಿಲ್ಲ. ಈಗಾಗಲೇ ಕೇಂದ್ರ ಸರ್ಕಾರ ಡಿಪಿಆರ್ ಅನುಮೋದನೆ ನೀಡಿದೆ. ಅಂತರ್‌ರಾಜ್ಯ ನೀರು ಹಂಚಿಕೆ ಸಮಿತಿ ನೀರು ಹಂಚಿಕೆಯನ್ನು ಈಗಾಗಲೇ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹದಾಯಿ ಪ್ರಾಧಿಕಾರ ರಚನೆಗೆ ಅನುಮೋದನೆ ಕೊಟ್ಟಿದ್ದಾರೆ. ಈ ಪ್ರಾಧಿಕಾರದಲ್ಲಿ ಗೋವಾ, ಕರ್ನಾಟಕ, ಮಹಾರಾಷ್ಟ್ರ ಸರ್ಕಾರಗಳ ಪ್ರತಿನಿಧಿಗಳು ಇರುತ್ತಾರೆ. ಜೊತೆಗೆ, ನೀರು ಯಾವ ರೀತಿ ನಿರ್ವಹಣೆ ಮಾಡ್ಬೇಕೆಂಬ ಕಾರ್ಯಗಳನ್ನು ಮಾಡುತ್ತಾರೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಬೆಳಗಾವಿ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಳಸಾದಲ್ಲಿ 1.72 ಟಿಎಂಸಿ ನೀರು ವಂಡೋರಾದಲ್ಲಿ 2.80 ಟಿಎಂಸಿ ನೀರು ಸೇರಿ ಒಟ್ಟು ಕರ್ನಾಟಕಕ್ಕೆ ನ್ಯಾಯಾಲಯದಿಂದ 3.9 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಎಲ್ಲಾ ಆಯಾಮಗಳಲ್ಲಿ ಅಭಿಪ್ರಾಯ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಯೋಜನೆಗೆ ಕೆಲವು ಕಾಡು ಪ್ರದೇಶ ಮುಳುಗಡೆ ಆಗುವುದರಿಂದ ಅರಣ್ಯ ಇಲಾಖೆಗೆ ಪರ್ಯಾಯವಾಗಿ ಅಥಣಿ ತಾಲೂಕಿನ ಕೆಲವು ಭೂ ಪ್ರದೇಶ ಗುರುತಿಸಿ ಅವರಿಗೆ ಭೂಮಿ ನೀಡಲಾಗಿದೆ. ಆದಷ್ಟು ಬೇಗ ಈ ಕಾಮಗಾರಿ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಪ್ರಧಾನಿ ಮೋದಿ ಅವರು ಇದೇ 27ಕ್ಕೆ ಬೆಳಗಾವಿ ನಗರಕ್ಕೆ ಆಗಮಿಸುತ್ತಿದ್ದಾರೆ. ಒಟ್ಟು 2250 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗೆ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ಮಾಡಲಿದ್ದಾರೆ. 190 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಳಗಾವಿ ರೈಲು ನಿಲ್ದಾಣ ಮೂರು ನಿರ್ಮಾಣವಾಗಿರುವ ಕಾಮಗಾರಿ ಉದ್ಘಾಟನೆ. ಬೆಳಗಾವಿ- ಲೋಂಡಾ ದ್ವಿಪಂಥ ಮಾರ್ಗ 932 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ಮಾಡಲಿದ್ದಾರೆ. ರೈಲ್ವೆ ಇಲಾಖೆಯಿಂದ ಒಟ್ಟು 1122 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಧಾನಿ ಅವರು ಚಾಲನೆ ನೀಡಲಿದ್ದಾರೆ. ಜೊತೆಗೆ ಜಲ ಜೀವನ ಮಿಷನ್ ಯೋಜನೆ 1030 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು.

ಕಿಸಾನ್ ಸನ್ಮಾನ್​ ಯೋಜನೆಯಿಂದ ರೈತರ ಖಾತೆಗೆ ನೇರವಾಗಿ ನರೇಂದ್ರ ಮೋದಿ ಹಣ ಜಮಾ ಮಾಡಲಿದ್ದಾರೆ. 13ನೇ ಕಂತಾಗಿ ದೇಶದಲ್ಲಿ ಒಟ್ಟು 8 ಕೋಟಿ ರೈತರಿಗೆ 16 ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಲಿದ್ದಾರೆ. ನಮ್ಮ ಬೆಳಗಾವಿ ಜಿಲ್ಲೆಯ 510649 ರೈತರ ಖಾತೆಗೆ 102 ಕೋಟಿ ರೂಪಾಯಿ ಬಿಡುಗಡೆ ಮಾಡಲಿದ್ದಾರೆ. ಜೊತೆಗೆ ಕರ್ನಾಟಕ ಒಟ್ಟು 4955790 ರೈತರಿಗೆ 991 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಬೆಳಗಾವಿಯಲ್ಲಿ ರೋಡ್ ಶೋ:ಫೆಬ್ರವರಿ 27 ರಂದು ಬೆಳಗಾವಿ ನಗರದಲ್ಲಿ ಬೃಹತ್ ಕಾರ್ಯಕ್ರಮ ಮಾಡಲಿದ್ದೇವೆ. ಎಂಟು ಕಿಲೋಮೀಟರ್ ರೋಡ್ ಶೋ ಬಗ್ಗೆ ತೀರ್ಮಾನ ಮಾಡಲಾಗಿದೆ‌. ಯಾವ ಮಾರ್ಗ ಎಂದು ಇನ್ನೂ ತೀರ್ಮಾನ ಮಾಡಿಲ್ಲ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:'ಕಾರ್ಮಿಕರು ಯಂತ್ರವಲ್ಲ, 12 ಗಂಟೆವರೆಗೂ ದುಡಿಸಿಕೊಳ್ಳುವುದು ಸರಿಯಲ್ಲ': ಆಯನೂರು ಮಂಜುನಾಥ್‌

ABOUT THE AUTHOR

...view details