ಕರ್ನಾಟಕ

karnataka

ಬಂಡವಾಳ ಹೂಡಿಕೆಗೆ ಆಹ್ವಾನ:  ಆಯೋಜಕರಿಗೆ ಧನ್ಯವಾದ ಸಲ್ಲಿಸಿದ ಸಿಎಂ

By

Published : Jan 23, 2020, 6:34 PM IST

ಸ್ವಿಟ್ಜರ್ಲೆಂಡ್​​ ನ ದಾವೋಸ್​​ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗದಲ್ಲಿ, ಬಂಡವಾಳ ಹೂಡಿಕೆಗೆ ಆಹ್ವಾನ ನೀಡಲು ಅವಕಾಶ ಕಲ್ಪಿಸಿದ ಆಯೋಜಕರಿಗೆ ಸಿಎಂ ಅಭಿನಂದನೆ ಸಲ್ಲಿಸಿದ್ದಾರೆ.

CM thanked the organizer
ಆಯೋಜಕರಿಗೆ ಧನ್ಯವಾದ ಸಲ್ಲಿಸಿದ ಸಿಎಂ

ಬೆಂಗಳೂರು: ದಾವೋಸ್​​ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಂಡವಾಳ ಹೂಡಿಕೆಗೆ ಆಹ್ವಾನ ನೀಡಲು ಅವಕಾಶ ಕಲ್ಪಿಸಿದ ಆಯೋಜಕರಿಗೆ ಅಭಿನಂದನೆ ಸಲ್ಲಿಸಿ ವಾಪಸಾಗುತ್ತಿದ್ದಾರೆ.

ಜನವರಿ 20 ರಿಂದ 23 ರವರೆಗೆ ದಾವೋಸ್​ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗದ ಮೊದಲ ದಿನ ಇನ್ವೆಸ್ಟ್ ಕರ್ನಾಟಕ ಪೆವಿಲಿಯನ್ ಉದ್ಘಾಟನೆ ಮಾಡಿದ್ದ ಸಿಎಂ, ನಂತರದ ಎರಡು ದಿನ ಸಮಾವೇಶಗಳಲ್ಲಿ ಪಾಲ್ಗೊಂಡರು. ಕಡೆಯ‌ ದಿನವಾದ ಇಂದು ಕೂಡ ಶೃಂಗದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ದೇಶದ ಆರ್ಥಿಕ ಸ್ಥಿತಿ ಮೇಲೆತ್ತಲು ಪ್ರಯತ್ನಿಸುತ್ತಿದ್ದು, ಕರ್ನಾಟಕ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ತಿಳಿಸಿದ ಸಿಎಂ, ಶೃಂಗದಲ್ಲಿ ಜಾಗತಿಕ ಹೂಡಿಕೆದಾರರ ಜೊತೆ ಮಾತುಕತೆ ನಡೆಸಿದ್ರು. ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡಲು ಆಹ್ವಾನ ನೀಡಲು ಅವಕಾಶ ಕಲ್ಪಿಸಿದ್ದಕ್ಕೆ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದರು.

ಇಂದು ಸಂಜೆ 5.30 ಕ್ಕೆ ದಾವೋಸ್​​ನಿಂದ ಹೊರಡಲಿರುವ ಸಿಎಂ 8.30 ಕ್ಕೆ ಜ್ಯೂರಿಕ್ ತಲುಪಲಿದ್ದಾರೆ. ರಾತ್ರಿ 9.55 ಕ್ಕೆ ಜ್ಯೂರಿಕ್​ನಿಂದ ಹೊರಟು ಬೆಳಗ್ಗೆ 7.10 ಕ್ಕೆ ದುಬೈ ತಲುಪಲಿದ್ದಾರೆ. 10 ಗಂಟೆಗೆ ದುಬೈನಿಂದ ಹೊರಟು ನಾಳೆ ಮಧ್ಯಾಹ್ನ 3.10 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.

Intro:



ಬೆಂಗಳೂರು: ಸ್ವಿಟ್ಜರ್ಲೆಂಡ್‌‌ ನ ದಾವೂಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಂಡವಾಳ ಹೂಡಿಕೆಗೆ ಆಹ್ವಾನ ನೀಡಲು ಅವಕಾಶ ಕಲ್ಪಿಸಿದ ಆಯೋಜಕರಿಗೆ ಅಭಿನಂದನೆ ಸಲ್ಲಿಸಿ ವಾಪಸಾಗುತ್ತಿದ್ದಾರೆ.

ಜನವರಿ 20 ರಿಂದ 23 ರವರೆಗೆ ದಾವೂಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗದ ಮೊದಲ ದಿನ ಇನ್ವೆಸ್ಟ್ ಕರ್ನಾಟಕ ಪೆವಿಲಿಯನ್ ಉದ್ಘಾಟನೆ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಂತರದ ಎರಡು ದಿನ ಸಮಾವೇಶಗಳಲ್ಲಿ ಪಾಲ್ಗೊಂಡರು, ಕಡೆಯ‌ ದಿನವಾದ ಇಂದು ಕೂಡ ಶೃಂಗದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ದೇಶದ ಆರ್ಥಿಕ ಸ್ಥಿತಿ ಮೇಲೆತ್ತಲು ಪ್ರಯತ್ನಿಸುತ್ತಿದ್ದು ಕರ್ನಾಟಕ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ, ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ತಿಳಿಸಿದ ಸಿಎಂ, ಶೃಂಗದಲ್ಲಿ ಜಾಗತಿಕ ಹೂಡಿಕೆದಾರರ ಜೊತೆ ಮಾತುಕತೆ ನಡೆಸಿ ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡಲು ಆಹ್ವಾನ ನೀಡಲು ಅವಕಾಶ ಕಲ್ಪಿಸಿದ್ದಕ್ಕೆ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದರು.

ಇಂದು ಸಂಜೆ 5.30 ಕ್ಕೆ ದಾವೂಸ್ ನಿಂದ ಹೊರಡಲಿರುವ ಸಿಎಂ 8.30 ಕ್ಕೆ ಜ್ಯೂರಿಕ್ ತಲುಪಲಿದ್ದಾರೆ, ರಾತ್ರಿ 9.55 ಕ್ಕೆ ಜ್ಯೂರಿಕ್ ನಿಂದ ಹೊರಟು ಬೆಳಗ್ಗೆ 7.10 ಕ್ಕೆ ದುಬೈ ತಲುಪಲಿದ್ದಾರೆ. 10 ಗಂಟೆಗೆ ದುಬೈನಿಂದ ಹೊರಟು ನಾಳೆ ಮಧ್ಯಾಹ್ನ 3.10 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.
Body:.Conclusion:

ABOUT THE AUTHOR

...view details