ಕರ್ನಾಟಕ

karnataka

ಅಧಿಕಾರದ ಆಸೆಗೆ ಕಾಂಗ್ರೆಸ್‌ನಿಂದ ತುಷ್ಟೀಕರಣ ರಾಜಕಾರಣ: ಬೊಮ್ಮಾಯಿ

By

Published : Aug 14, 2023, 9:59 PM IST

ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್​ ಇಂದಿಗೂ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಸ್ಮೃತಿ ದಿವಸ ಕಾರ್ಯಕ್ರಮ
ಸ್ಮೃತಿ ದಿವಸ ಕಾರ್ಯಕ್ರಮ

ಬೆಂಗಳೂರು: ಅಧಿಕಾರದ ಆಸೆಗೆ ಕಾಂಗ್ರೆಸ್ ಈಗಲೂ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಬೇರೆ ದೇಶಗಳಿಗೆ ಹೋಗಿ ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತರಲ್ಲ ಎಂದು ಹೇಳುತ್ತಾರೆ. ಭಾರತದಲ್ಲಿ ಅಲ್ಪಸಂಖ್ಯಾತರು ಅತಿ ಹೆಚ್ಚು ಸುರಕ್ಷಿತವಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ದೇಶ ವಿಭಜನೆ ಒಂದು ದುರಂತ ಕಥೆ ಸ್ಮೃತಿ ದಿವಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವದ ಇತಿಹಾಸದಲ್ಲಿ ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ಭಾರತದಂತ ಕೆಟ್ಟ ಸಂದರ್ಭ ಯಾವ ದೇಶಕ್ಕೂ ಬಂದಿಲ್ಲ. ಪರಕೀಯರ ಆಡಳಿತದಿಂದ ಸ್ವಾತಂತ್ರ್ಯ ಬಂದಾಗ ದೇಶ ಅಲ್ಲೋಲ ಕಲ್ಲೋಲ ಆಗಿರುವ ಇತಿಹಾಸ ಭಾರತಕ್ಕೆ ಮಾತ್ರ ಇದೆ. ಇಷ್ಟೆಲ್ಲಾ ಆದರೂ ಸತ್ಯ ಹೇಳುವ ವ್ಯವಸ್ಥೆ ಬರಲಿಲ್ಲ‌ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಹುಟ್ಟುವ ಮೊದಲೇ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಆರಂಭವಾಗಿದೆ. ವೀರ ಮಹಿಳೆ ಕಿತ್ತೂರು ಚೆನ್ನಮ್ಮ ಬ್ರಿಟೀಷರ ವಿರುದ್ದ ಕತ್ತಿ ಎತ್ತಿದರು. ಸಂಗೊಳ್ಳಿ ರಾಯಣ್ಣ, ಸಿಂಧೂರ ಲಕ್ಷ್ಮಣ, ನರಗುಂದದ ಬಾಳಾ ಸಾಹೇಬ ಇವರಾರೂ ಈಗಿನ ಇತಿಹಾಸದಲ್ಲಿ ಕಾಣುವುದಿಲ್ಲ. ಬರೇ ಗಾಂಧಿ ನೆಹರು ಹಾಗೂ ಅವರ ಹಿಂಬಾಲಕರು ಮಾತ್ರ ಇದ್ದಾರೆ. ಲೋಕಮಾನ್ಯ ತಿಲಕ, ಬಾಲ ಗಂಗಾಧರ ತಿಲಕ ಕಾಂಗ್ರೆಸ್ ಮಾರ್ಗದರ್ಶಕರಾಗಿದ್ದರು. ಸುಭಾಶ್ಚಂದ್ರ ಭೋ್ ಕಾಂಗ್ರೆಸ್‌ನಿಂದ ಹೊರಬಂದು ಹೋರಾಟ ನಡೆಸಿದರು. ಮೈಲಾರ ಮಹಾದೇವನನ್ನು ಬ್ರಿಟೀಷರಿಗೆ ಹಿಡಿಯಲು ಆಗಲಿಲ್ಲ, ಅವನನ್ನು ಮೋಸದಿಂದ ಕೊಂದರು, ಸಂಗೊಳ್ಳಿ ರಾಯಣ್ಣನನ್ನು ಮೋಸದಿಂದಲೇ ಹಿಡಿದು ಕೊಂದರು.

ಬ್ರಿಟೀಷರು ದೇಶ ವಿಭಜನೆಗೆ ಒಪ್ಪಿದರೆ ಮಾತ್ರ ಸ್ವಾತಂತ್ರ್ಯ ನೀಡುತ್ತೇವೆ ಅಂದರು. ಆಗ ಗಾಂಧೀಜಿ ನೆಹರು ಮಾತಿಗೆ ಬೆಲೆ ಕೊಟ್ಟು ವಿಭಜನೆಗೆ ಒಪ್ಪಿದರು. ಇದು ಭೌಗೋಳಿಕವಾಗಿ ಮಾತ್ರ ಆಗಲಿಲ್ಲ, ಭಾರತೀಯರ ಜೀವನದ ವಿಭಜನೆ ಆಯಿತು. ರಾಜಕೀಯ ಲಾಭಕ್ಕೆ ತುಷ್ಟೀಕರಣ ರಾಜಕೀಯ ಮಾಡಲಾಯಿತು. ಕಾಂಗ್ರೆಸ್ ಅಧಿಕಾರಕ್ಕಾಗಿ ಈಗಲೂ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಡ್ಯಾಂ ನೀರನ್ನು ಸರ್ಕಾರ ನಮ್ಮ ರೈತರಿಗೂ ಕೊಟ್ಟಿಲ್ಲ:ಕುರುವೈ ಬೆಳೆಗೆ ನೀಡಲಾಗಿದ್ದ ಮಿತಿಯ ನಾಲ್ಕು ಪಟ್ಟು ಹೆಚ್ಚು ಬೆಳೆಯನ್ನು ತಮಿಳುನಾಡು ರೈತರು ಬೆಳೆದಿದ್ದಾರೆ. ಈ ಬಗ್ಗೆ ಸಿಡಬ್ಲ್ಯುಎಂಎ ಸಭೆಯಲ್ಲಿ ನಮ್ಮ ಅಧಿಕಾರಿಗಳು ಸರಿಯಾಗಿ ಪ್ರತಿಪಾದಿಸಿಲ್ಲ. ಇದರ ಬಗ್ಗೆ ಅಧಿಕಾರಿಗಳು ತಿಳಿಸಬೇಕಿತ್ತು. ಹೆಚ್ಚಿನ ನೀರು ಕೊಡಲು ಆಗುವುದಿಲ್ಲ ಎನ್ನಬೇಕಿತ್ತು ಎಂದು ಬೊಮ್ಮಾಯಿ ಹೇಳಿದ್ದಾರೆ. ಬಸವನಗುಡಿಯಲ್ಲಿ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಡ್ಯಾಂ ನೀರನ್ನು ನಮ್ಮ ರೈತರಿಗೂ ಕೊಟ್ಟಿಲ್ಲ. ಇದಕ್ಕಾಗಿ ನಾನು ಪತ್ರ ಬರೆದು ಎಚ್ಚರಿಸಿದ್ದೇನೆ. ತಮಿಳುನಾಡು ಸುಪ್ರೀಂಕೋರ್ಟ್‌ಗೆ ಹೋಗುತ್ತೇನೆ ಎಂದಿದೆ. ಈ ಸಮಯದಲ್ಲಿ ಸರಿಯಾಗಿ ವಾದ ಮಾಡಬೇಕು ಎಂದು ಕೇಳಿದ್ದೇನೆ, ಇದನ್ನು ತಿಳಿಯುತ್ತಾರೆ ಎಂದು ಭಾವಿಸುತ್ತೇನೆ ಎಂದರು.

ಗುತ್ತಿಗೆದಾರ ಯುಟರ್ನ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗುತ್ತಿಗೆದಾರರೇ ಆಕ್ರೋಶದಲ್ಲಿ ಮಾತನಾಡಿದವರು ಈಗ ಹಿಂತೆಗೆಯುತ್ತಾರೆ ಎಂದರೆ ಇದರ ಹಿಂದೆ ಯಾವ ಶಕ್ತಿಗಳು ಒತ್ತಡ ಹೇರುತ್ತಿವೆ ಎನ್ನುವುದು ಸ್ಪಷ್ಟವಾಗಿದೆ. ನಮ್ಮ ಸರ್ಕಾರದ 650 ಕೋಟಿ ಬಿಡುಗಡೆ ಮಾಡಿದೆ.
ಎಷ್ಟು ದಿನ ತನಿಖೆ ಮಾಡುತ್ತೀರಾ? ತನಿಖೆಯಲ್ಲಿ ಎಷ್ಟು ತಪ್ಪು ಸಿಕ್ಕಿದೆ ಎಂದು ಹೇಳಿ. ಇದರಲ್ಲಿ ಪಾರದರ್ಶಕತೆ ಬರುವುದು ಬಹಳ ಮುಖ್ಯವಾಗಿದೆ. ಅದನ್ನು ತರಲು ಸರ್ಕಾರ ತಯಾರಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:D K Shivakumar: ತಮಿಳುನಾಡು ಆತುರಪಡುವ ಅಗತ್ಯವಿಲ್ಲ, ಕಾವೇರಿ ನೀರು ನೀಡಲು ಬದ್ಧ- ಡಿಸಿಎಂ ಡಿ.ಕೆ.ಶಿವಕುಮಾರ್

ABOUT THE AUTHOR

...view details