ಕರ್ನಾಟಕ

karnataka

ಚಿನ್ನದ ಸರ ಕಳವು, ಖೋಟಾ ನೋಟುಗಳ ತಯಾರಿಕಾ ಜಾಲ ಪತ್ತೆ: ಕೇರಳ ಮೂಲದ ಆರೋಪಿಗಳ ಬಂಧನ

By

Published : Sep 8, 2022, 11:05 PM IST

bengaluru-police-arrested-two-kerala-based-accused-in-fake-currency-notes-case
ಚಿನ್ನದ ಸರ ಕಳವು, ಖೋಟಾ ನೋಟುಗಳ ತಯಾರಿಕಾ ಜಾಲ ಪತ್ತೆ: ಕೇರಳ ಮೂಲದ ಆರೋಪಿಗಳ ಬಂಧನ

ಕಳವು ಮಾಡಿದ್ದ ಚಿನ್ನಾಭರಣಗಳನ್ನು ಆರೋಪಿಗಳು ಕರಗಸಿ ಚಿನ್ನದ ಗಟ್ಟಿಗಳನ್ನಾಗಿ ಮಾಡಿ, ಬಂಗಾರದ ಅಂಗಡಿಗಳು ಮತ್ತು ಫೈನಾನ್ಸ್​ ಕಂಪನಿಗಳಲ್ಲಿ ಅಡಮಾನ ಇಟ್ಟು ಮೋಜಿನ ಜೀವನ ನಡೆಸುತ್ತಿದ್ದರು.

ಬೆಂಗಳೂರು: ಚಿನ್ನದ ಸರ ಕಳವು ಮತ್ತು ಖೋಟಾ ನೋಟುಗಳ ತಯಾರಿಕಾ ಜಾಲದಲ್ಲಿ ತೊಡಗಿದ್ದ ಇಬ್ಬರು ಕೇರಳ ಮೂಲದ ಆರೋಪಿಗಳನ್ನು ಬೆಂಗಳೂರಿನ ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್ ಅಲಿಯಾಸ್ ಉನ್ನಿ ಮತ್ತು ಸನಲ್ ಎಂಬುವವರೇ ಬಂಧಿತರು.

ಈ ಇಬ್ಬರು ಆರೋಪಿಗಳಿಂದ 3.19 ಲಕ್ಷ ರೂ ಮೌಲ್ಯದ 500 ಮತ್ತು 2 ಸಾವಿರ ಮುಖ ಬೆಲೆಯ ಖೋಟಾ ನೋಟುಗಳು ಮತ್ತು 46 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೆಲ ವರ್ಷಗಳ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ಬಸವನಪುರ ವಿಲೇಜ್‌ನಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಜೆಪಿ ಠಾಣೆ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಯ ಉದ್ಯೋಗಿ ಶಾಂತಿ ಎಂಬವರು ಮನೆಯ ಕಿಟಕಿ ಪಕ್ಕದ ಟೇಬಲ್ ಮೇಲಿಟ್ಟಿದ್ದ ಚಿನ್ನದ ಸರ ಕಳವು ಮಾಡಲಾಗಿತ್ತು.

ಅಲ್ಲದೇ, ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ ದೋಚಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಘಟನಾ ಸ್ಥಳದ ಸಿಸಿ ಕ್ಯಾಮರಾ ಮತ್ತು ನಿಖರ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಖೋಟಾ ನೋಟುಗಳು ಪತ್ತೆೆ:ಬಂಧಿತರ ವಿಚಾರಣೆ ವೇಳೆ ಛಾಪಾ ಕಾಗದಗಳ ಮೇಲೆ 500 ಮತ್ತು 2 ಸಾವಿರ ಮುಖ ಬೆಲೆಯ ನೋಟುಗಳನ್ನು ಕಲರ್ ಜೆರಾಕ್ಸ್​ ಮೂಲಕ ಮುದ್ರಿಸಿ ಅಸಲಿ ನೋಟುಗಳು ಎಂದು ಬದಲಾವಣೆ ಮಾಡುತ್ತಿದ್ದರು ಎಂಬುದೂ ಗೊತ್ತಾಗಿದೆ.

ಸದ್ಯ ಲಕ್ಷಾಂತರ ರೂ. ಮೌಲ್ಯದ ಖೋಟಾ ನೋಟುಗಳನ್ನು ವಶಕ್ಕೆೆ ಪಡೆಯಲಾಗಿದೆ. ಅಲ್ಲದೇ, ಆರೋಪಿಗಳು ಕರ್ನಾಟಕ ಮಾತ್ರವಲ್ಲದೆ ಕೇರಳದಲ್ಲೂ ಸರ ಕಳವು ಮತ್ತು ಮನೆ ಕಳ್ಳತನ ಮಾಡುತ್ತಿದ್ದ ಬಗ್ಗೆ ಪ್ರಕರಣ ದಾಖಲಾಗಿದೆ. ಕಳವು ಮಾಡಿದ್ದ ಚಿನ್ನಾಭರಣಗಳನ್ನು ಕರಗಸಿ ಚಿನ್ನದ ಗಟ್ಟಿಗಳನ್ನಾಗಿ ಮಾಡಿ, ಬಂಗಾರದ ಅಂಗಡಿಗಳು ಮತ್ತು ಫೈನಾನ್ಸ್​ ಕಂಪನಿಗಳಲ್ಲಿ ಅಡಮಾನ ಇಟ್ಟು ಮೋಜಿನ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ:ಕಟಿಂಗ್ ಪ್ಲೇಯರ್​ನಿಂದ ಪತ್ನಿಯ ಉಗುರು ಕಿತ್ತ ಪಾಪಿ

ABOUT THE AUTHOR

...view details