ಕರ್ನಾಟಕ

karnataka

ಪಿಎಸ್​​ಐ ಅಕ್ರಮ ನೇಮಕಾತಿ ಪ್ರಕರಣ: ಅಮೃತ್ ಪಾಲ್, ಶಾಂತ್ ಕುಮಾರ್ ಮನೆಯಲ್ಲಿ ಇಡಿ ಶೋಧ

By

Published : Nov 10, 2022, 3:48 PM IST

PSI SCAM
ಇಡಿ ಶೋಧ

ಪಿಎಸ್​​ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಅಮಾನತುಗೊಂಡಿರುವ ಎಡಿಜಿಪಿ ಅಮೃತ್ ಪಾಲ್ ಮತ್ತು ಡಿವೈಎಸ್ಪಿ ಶಾಂತ್ ಕುಮಾರ್ ಮನೆಯಲ್ಲಿ ಶೋಧ ನಡೆಸುತ್ತಿದ್ದಾರೆ.

ಬೆಂಗಳೂರು: ಪಿಎಸ್ಐ‌ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದಡಿ ಜೈಲು ಸೇರಿದ್ದ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಹಾಗೂ ಡಿವೈಎಸ್ಪಿ ಶಾಂತಕುಮಾರ್ ಮನೆ ಸೇರಿ 11 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸಹಕಾರನಗರದಲ್ಲಿರುವ ಅಮೃತ್ ಪಾಲ್ ಹಾಗೂ ಆಡುಗೋಡಿಯ ಟೆಕ್ನಿಕಲ್ ಸೆಂಟರ್​​ನಲ್ಲಿರುವ ಶಾಂತಕುಮಾರ್ ಮನೆಗಳಲ್ಲಿ ಇಡಿ ಅಧಿಕಾರಿಗಳು ಬೆಳಿಗ್ಗೆ 11 ಗಂಟೆಯಿಂದ ಪರಿಶೀಲನೆ ನಡೆಸಿದ್ದಾರೆ. ಕಳೆದ ವರ್ಷ 545 ಪಿಎಸ್ಐ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಪಿಎಸ್​ಐ ಅಭ್ಯರ್ಥಿಗಳಿಂದ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪಾಲ್ ಕೋಟ್ಯಾಂತರ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಅಮೃತ್ ಪಾಲ್, ಶಾಂತ್ ಕುಮಾರ್ ಮನೆಯಲ್ಲಿ ಇಡಿ ಶೋಧ

ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆ 28 ಪೊಲೀಸರು ಸೇರಿ 102 ಆರೋಪಿಗಳನ್ನ ಸಿಐಡಿ ಬಂಧಿಸಿತ್ತು. ವಿಚಾರಣೆ ವೇಳೆ ಅಮ್ರಿತ್ ಪಾಲ್ ಕೋಟ್ಯಾಂತರ ರೂಪಾಯಿ ಅವ್ಯವಹಾರ ಕಂಡುಬಂದ ಹಿನ್ನೆಲೆಯಲ್ಲಿ ಹಣದ ಮೂಲ ಪತ್ತೆ ಹಚ್ಚಲು ಇಡಿ ಅಧಿಕಾರಿಗಳಿಗೆ ಸಿಐಡಿ ಪತ್ರ ಬರೆದಿತ್ತು. ಈ ಸಂಬಂಧ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಅಧಿಕಾರಿಗಳು, ಪಾಲ್ ಹಾಗೂ ಶಾಂತಕುಮಾರ್ ಮನೆ ಹಾಗೂ ಕಚೇರಿ ಸೇರಿದಂತೆ ಒಟ್ಟು 11 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಸದ್ಯ ಇಬ್ಬರು ಅಧಿಕಾರಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದನ್ನೂ ಓದಿ:ಪಿಎಸ್ಐ ಪರೀಕ್ಷಾ ಅಕ್ರಮ: ಮತ್ತೋರ್ವ ರ‍್ಯಾಂಕ್ ಅಭ್ಯರ್ಥಿ ಬಂಧನ

ABOUT THE AUTHOR

...view details