ಕರ್ನಾಟಕ

karnataka

FIFA World cup 2022: ಇಂದು ಮೂರನೇ ಸ್ಥಾನಕ್ಕಾಗಿ ಕ್ರೊಯೇಷಿಯಾ - ಮೊರಾಕ್ಕೊ ತಂಡಗಳ ಕಾದಾಟ

By

Published : Dec 17, 2022, 4:31 PM IST

22ನೇ ಫಿಫಾ ವಿಶ್ವಕಪ್ 2022ರಲ್ಲಿ ಮೂರನೇ ಸ್ಥಾನಕ್ಕಾಗಿ ಕ್ರೊಯೇಷಿಯಾ ಮತ್ತು ಮೊರಾಕ್ಕೊ ತಂಡಗಳ ನಡುವೆ ಪೈಪೋಟಿ ನಡೆಯಲಿದೆ.

fifa-world-cup-2022-today-match-schedule-morocco-vs-croatia-third-place-match
FIFA World cup 2022: ಇಂದು ಮೂರನೇ ಸ್ಥಾನಕ್ಕಾಗಿ ಕ್ರೊಯೇಷಿಯಾ - ಮೊರಾಕ್ಕೊ ತಂಡಗಳ ಕಾದಾಟ

ದೋಹಾ (ಕತಾರ್​): ಕತಾರ್​ನಲ್ಲಿ ನಡೆಯುತ್ತಿರುವ 22ನೇ ಫಿಫಾ ವಿಶ್ವಕಪ್ 2022ರಲ್ಲಿ ಇಂದು ರಾತ್ರಿ 8:30ಕ್ಕೆ ಕ್ರೊಯೇಷಿಯಾ ಮತ್ತು ಮೊರಾಕ್ಕೊ ತಂಡಗಳ ನಡುವೆ ಮೂರನೇ ಸ್ಥಾನಕ್ಕೆ ಹೋರಾಟ ನಡೆಯಲಿದೆ. ಖಲೀಫಾ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಉಭಯ ತಂಡಗಳು ಕಂಚಿನ ಪದಕಕ್ಕಾಗಿ ಕಾದಾಟ ನಡೆಸಲಿವೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಕ್ರೊಯೇಷಿಯಾ ಮತ್ತು ಮೊರಾಕ್ಕೊ ತಂಡಗಳು ಎರಡನೇ ಬಾರಿ ಮುಖಾಮುಖಿಯಾಗಲಿವೆ. ಮೊದಲ ಪಂದ್ಯ 0-0 ಡ್ರಾ ಆಗಿತ್ತು. ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಎರಡೂ ತಂಡಗಳು ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ ಪಡೆಯಲು ಪ್ರಯತ್ನಿಸಲಿವೆ.

ಇದನ್ನೂ ಓದಿ: ಮೊರಾಕ್ಕೊ ಮೊದಲ ಫೈನಲ್​ ಆಸೆಗೆ ತಣ್ಣೀರೆರಚಿದ ಫ್ರಾನ್ಸ್​... 2-0 ಗೋಲುಗಳಿಂದ ಗೆದ್ದು ಫೈನಲ್​ಗೆ ಎಂಟ್ರಿ

ಅದರಲ್ಲೂ 2018ರ ವಿಶ್ವಕಪ್‌ ರನ್ನರ್ ಅಪ್ ಆಗಿರುವ ಕ್ರೊವೇಷಿಯಾ ಈ ಬಾರಿ ಫೈನಲ್‌ಗೆ ತಲುಪದ ಕಾರಣ ಮೂರನೇ ಸ್ಥಾನಕ್ಕೆ ತೀವ್ರ ಹೋರಾಟ ನಡೆಸಲಿದೆ. ಅದೇ ರೀತಿಯಾಗಿ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಫ್ರಿಕನ್ ತಂಡ ಮೊರಾಕ್ಕೊ ಸಹ ಮೂರನೇ ಸ್ಥಾನ ಪಡೆಯಲು ಪಣ ತೊಟ್ಟಿದೆ.

ಎರಡೂ ತಂಡಗಳ ಆಟಗಾರರು ಹುರುಪಿನ ಆಟ ಪ್ರದರ್ಶಿಸುವ ಮೂಲಕ ತಮ್ಮ ತಂಡಗಳನ್ನು ವಿಶ್ವಕಪ್‌ನ ಸೆಮಿಫೈನಲ್‌ನವರೆಗೆ ತೆಗೆದುಕೊಂಡು ಬಂದಿದ್ದರು. ಕೊನೆಯ ನಾಲ್ಕರಲ್ಲಿ ಕ್ರೊಯೇಷಿಯಾವನ್ನು ಅರ್ಜೆಂಟೀನಾ 3-0 ಗೋಲುಗಳಿಂದ ಸೋಲಿಸಿದರೆ, ಮೊರೊಕ್ಕೊ ಕೊನೆಯ ನಾಲ್ಕರಲ್ಲಿ ಫ್ರಾನ್ಸ್ ವಿರುದ್ಧ 0-2 ಸೋಲು ಕಂಡಿತ್ತು.

ವಿಶ್ವಕಪ್ ಶ್ರೇಯಾಂಕ: ಫಿಫಾ ರ‍್ಯಾಂಕಿಂಗ್​ನಲ್ಲಿ ಕ್ರೊವೇಷಿಯಾ ತಂಡ 12ನೇ ಸ್ಥಾನದಲ್ಲಿದ್ದು, ಮೊರಾಕೊ 22ನೇ ಸ್ಥಾನದಲ್ಲಿದೆ. ಎರಡೂ ತಂಡಗಳ ರಕ್ಷಣಾ ವಿಭಾಗ ಬಲಿಷ್ಠವಾಗಿದೆ. ವಿಶ್ವಕಪ್‌ನಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದು, ಆ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.

ಇದನ್ನೂ ಓದಿ: ಫಿಫಾ ವಿಶ್ವಕಪ್​: ಕ್ರೊವೇಷಿಯಾ ಸೋಲಿಸಿ ಫೈನಲ್​ ತಲುಪಿದ ಅರ್ಜೆಂಟೀನಾ, ಅಂತಿಮ ಕದನಕ್ಕೆ ರೆಡಿ

ಮೊರೊಕ್ಕೊ ತಂಡದ ವಿರುದ್ಧ ಕ್ವಾರ್ಟರ್ ಫೈನಲ್‌ವರೆಗೆ ಒಂದೇ ಒಂದು ಗೋಲು ದಾಖಲಾಗಿಲ್ಲ. ಕೆನಡಾ ಜೊತೆಗಿನ ಗುಂಪಿನ ಪಂದ್ಯದಲ್ಲಿ ಮೊರಾಕ್ಕೊ ವಿರುದ್ಧ ಒಂದು ಗೋಲು ಇತ್ತು. ಅದೇ ಸಮಯದಲ್ಲಿ ಗುಂಪು ಸುತ್ತಿನ ಮೂರು ಪಂದ್ಯಗಳು, ಪ್ರಿ-ಕ್ವಾರ್ಟರ್ ಮತ್ತು ಕ್ವಾರ್ಟರ್ ಫೈನಲ್ ಸೇರಿದಂತೆ ಕ್ರೊಯೇಷಿಯಾ ವಿರುದ್ಧ ಮೂರು ಗೋಲುಗಳು ದಾಖಲಾಗಿವೆ.

ಮೊರಾಕ್ಕೊಗೆ ಅವಕಾಶ: ಕೊನೆಯ ವಿಶ್ವಕಪ್‌ ಆಡುತ್ತಿರುವ ಕ್ರೊವೇಷಿಯಾ ನಾಯಕ ಲೂಕಾ ಮಾಡ್ರಿಕ್‌ಗೆ ಇನ್ನೂ ಯಾವುದೇ ಗೋಲು ಗಳಿಸಲು ಸಾಧ್ಯವಾಗಿಲ್ಲ. 24 ವರ್ಷಗಳ ಬಳಿಕ ಕ್ರೊವೇಷಿಯಾ ಮೂರನೇ ಸ್ಥಾನ ಪಡೆಯುವ ಅವಕಾಶ ಪಡೆದಿದೆ.

ಕ್ರೊಯೇಷಿಯಾ 1998ರಲ್ಲಿ ನೆದರ್ಲೆಂಡ್​​ ತಂಡವನ್ನು 2-1 ರಿಂದ ಸೋಲಿಸಿದ ನಂತರ ಮೂರನೇ ಸ್ಥಾನ ಗಳಿಸಿತ್ತು. ಇತ್ತ, ಮೊರಾಕ್ಕೊ ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ್ದು, ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ ಗೆದ್ದು ಇತಿಹಾಸ ಸೃಷ್ಟಿಸಲು ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ: FIFA World Cup 2022: ಫೈನಲ್ ಪಂದ್ಯಕ್ಕೂ ಮುನ್ನ ಪ್ರೇಕ್ಷಕರ ರಂಜಿಸಲಿರುವ ಸೆಲೆಬ್ರಿಟಿಗಳು

ABOUT THE AUTHOR

...view details