ಕರ್ನಾಟಕ

karnataka

"ಸಚಿನ್​ ದಾಖಲೆ ಸಮಮಾಡಲು ಲೇಸರ್​ನಂತೆ ವಿರಾಟ್ ಫೋಕಸ್​ ಹೊಂದಿದ್ದರು"- ಎಬಿಡಿ

By ETV Bharat Karnataka Team

Published : Nov 6, 2023, 9:18 PM IST

ಭಾನುವಾರ ನಡೆದ ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಮುನ್ನ ವಿರಾಟ್​ ಜೊತೆಗೆ ನಡೆಸಿದ ಸಂಭಾಷಣೆಯ ಬಗ್ಗೆ ಎಬಿ ಡಿ ವಿಲಿಯರ್ಸ್​ ಹಂಚಿಕೊಂಡಿದ್ದು ಹೀಗೆ..

Virat was so laser focused
Virat was so laser focused

ಕೋಲ್ಕತ್ತಾ (ಪಶ್ಚಿಮ ಬಂಗಾಳ): ವಿರಾಟ್​ಗೆ ಕ್ರಿಕೆಟ್​ ನೋಡುಗರು ಮಾತ್ರ ಅಭಿಮಾನಿಗಳಲ್ಲಿ ಅವರೊಂದಿಗೆ ಆಡುವವರು, ಎದುರಾಳಿ ತಂಡ ಆಟಗಾರರು ಹಾಗೇ ಮಾಜಿ ಆಟಗಾರರೂ ಫ್ಯಾನ್​ಗಳೇ. ಅವರ ಆಟದ ಶೈಲಿಗೆ ದಿಗ್ಗಜ ಕ್ರಿಕೆಟರ್​​ಗಳೇ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ದಕ್ಷಿಣ ಆಫ್ರಿಕಾದ 360 ಆಟಗಾರ ಎಬಿ ಡಿ ವಿಲಿಯರ್ಸ್​ ತಮ್ಮ ತವರಿನ ತಂಡ ಸೋತರೂ ವಿರಾಟ್​ ಆಟವನ್ನು ಶ್ಲಾಘಿಸಿದ್ದಾರೆ.

ಡಿ ವಿಲಿಯರ್ಸ್​​ ಮತ್ತು ವಿರಾಟ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕಾಗಿ (ಆರ್​ಸಿಬಿ) ಒಟ್ಟಿಗೆ ಆಡಿದ್ದರು. ಈ ಇಬ್ಬರು ಬ್ಯಾಟರ್​​ಗಳು ಎಷ್ಟೂ ಬಾರಿ ಮೈದಾನದಲ್ಲಿ ಪಾಲುದಾರಿಕೆಯನ್ನು ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ವಿರುದ್ಧದ ಪಂದ್ಯಕ್ಕೂ ಮುನ್ನ ಎಬಿಡಿ ವಿರಾಟ್​ ಕೊಹ್ಲಿಯನ್ನು ಭೇಟಿ ಮಾಡಿ ಜನ್ಮದಿನದ ಶುಭಾಶಯ ತಿಳಿಸಿದ್ದರು. ಈ ವೇಳೆ ಸಚಿನ್​ ದಾಖಲೆ ಬಗ್ಗೆ ಮಾತನಾಡಿದಾಗ ಅವರ ಪ್ರತಿಕ್ರಿಯೆ ಬಗ್ಗೆ ಎಬಿಡಿ ಹಂಚಿಕೊಂಡಿದ್ದಾರೆ.

"ಜನ್ಮದಿನದಂದು ವಿರಾಟ್​ ಭೇಟಿ ಯಾವುದೇ ಪೂರ್ವ ಯೋಜಿತವಾಗಿರಲಿಲ್ಲ. ಆದರೆ ಮೈದಾನದಲ್ಲಿ ಪಂದ್ಯಕ್ಕೂ ಮುನ್ನ ಭೇಟಿ ಮಾಡಿದೆ. ಈ ರೀತಿಯ ಅನಿರೀಕ್ಷಿತ ಭೇಟಿಗಳು ಹಲವು ಬಾರಿ ಆಗಿದೆ. ನಾನು ಇಂದು ಬೆಳಗ್ಗೆ ಮೈದಾನಕ್ಕೆ ಬಂದಾಗ ನೇರವಾಗಿ ಅವನ (ವಿರಾಟ್​) ಬಳಿಗೆ ಹೋಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿ, ನೀನು ಇಂದು ಆಡುತ್ತೀಯ, ಸಚಿನ್​ ದಾಖಲೆ ಸಮಮಾಡುವ ಸಾಧ್ಯತೆ ಇದೆ ಎಂದಿದ್ದೆ. ಆಗ ವಿರಾಟ್​ ಕಣ್ಣಿನಲ್ಲಿ ಲೇಸರ್​ ರೀತಿಯ ಫೋಕಸ್​ ಕಾಣಿಸಿತ್ತು. ಆತ ಅದನ್ನು ಸಾಧಿಸಿದ ಕೂಡ" ಎಂದು ಎಬಿ ಡಿ ವಿಲಿಯರ್ಸ್​​ ಹೇಳಿಕೊಂಡಿದ್ದಾರೆ.

ಎಬಿಡಿ ವಿರಾಟ್​ ಉತ್ತಮ ಫಾರ್ಮ್​ನಲ್ಲಿದ್ದರೆ ಆತನನ್ನು ತಡೆದು ನಿಲ್ಲಿಸುವುದು ಅಸಾಧ್ಯ ಎಂದು ಹೇಳಿದ್ದಾರೆ." ನಾನು ಅವನಿಗೆ (ವಿರಾಟ್​) ಬಿಗಿಯಾದ ಅಪ್ಪುಗೆಯನ್ನು ನೀಡಿದ್ದೇನೆ. ವಿರಾಟ್​ ಆಟ ನನಗೆ ಹೆಚ್ಚು ಗಮನ ಸೆಳೆಯಿತು, ಆದರೆ ಅವನ ಆಟದ ಬಗ್ಗೆ ಅಚ್ಚರಿ ಇಲ್ಲ, ಏಕೆಂದರೆ ವಿರಾಟ್ ಫಾರ್ಮ್​ನಲ್ಲಿದ್ದರೆ ಅವನನ್ನು ತಡೆಯಲು ಸಾಧ್ಯವೇ ಇಲ್ಲ. ವಿರಾಟ್​ ಇನ್ನಷ್ಟೂ ರನ್​ ಹಸಿವನ್ನು ಹೊಂದಿದ್ದಾನೆ. ಅವನಿಂದ ಇನ್ನಷ್ಟೂ ದೊಡ್ಡ ಪಂದ್ಯಗಳು ಬರಲಿವೆ, ಪಟಾಕಿಗಳು ಇನ್ನಷ್ಟೂ ಸಿಡಿಯಲಿವೆ" ಎಂದಿದ್ದಾರೆ.

ಸೋದರನ ಶತಕದ ಸಂಭ್ರಮ: ಡಿವಿಲಿಯರ್ಸ್ ವಿರಾಟ್ ಅವರ ಶತಕವನ್ನು ಸಂಭ್ರಮಿಸಿದ್ದು ನನ್ನ ಸಹೋದರನ ಆಟ ಎಂದು. "ನನ್ನ ಸಹೋದರನ ಆಟ ನನಗೆ ತುಂಬಾ ಸಂತೋಷವಾಗಿದೆ. ನಾವು ಒಟ್ಟಿಗೆ ಬಹಳ ಸಮಯವನ್ನು ಕಳೆದಿದ್ದೇವೆ. ನಾವು ಮೈದಾನದಲ್ಲಿ ಮತ್ತು ಹೊರಗೆ ಉತ್ತಮ ನೆನಪುಗಳನ್ನು ಹೊಂದಿದ್ದೇವೆ. ಅದು ಕೂಡ ದಕ್ಷಿಣ ಆಫ್ರಿಕಾ ವಿರುದ್ಧ, ಇದು ನನಗೆ ಒಂದು ರೀತಿಯಲ್ಲಿ ದುಃಖ ತಂದಿದೆ. ನನ್ನ ಸಹೋದರನ ಬಗ್ಗೆ ನನಗೆ ತುಂಬಾ ಸಂತೋಷ ಇದೆ ಎಂತಹ ಮಹಾನ್ ವ್ಯಕ್ತಿ" ಎಂದು ಹರಿಣಗಳ ದಾಖಲೆ ವೀರ ಎಬಿಡಿ ಹೇಳಿದರು.

ನಡೆಯುತ್ತಿರುವ ವಿಶ್ವಕಪ್​ನಲ್ಲಿ ಭಾರತ ಸತತ 8 ಪಂದ್ಯಗಳನ್ನು ಗೆದ್ದುಕೊಂಡಿದ್ದು, ಅಂಕಪಟ್ಟಿಯಲ್ಲಿ ಮೊದಲಿಗನಾಗಿ ಸೆಮೀಸ್​ನಲ್ಲಿ ಸೆಣಸಲಿದೆ. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯುವ ತಂಡ ಸೆಮೀಸ್​ನಲ್ಲಿ ಭಾರತಕ್ಕೆ ಮುಖಾಮುಖಿ ಆಗಲಿದೆ. ಟೀಮ್​ ಇಂಡಿಯಾಕ್ಕೆ ಲೀಗ್​ ಹಂತದ ಕೊನೆಯ ಒಂದು ಪಂದ್ಯ ಬಾಕಿ ಇದ್ದು ನವೆಂಬರ್ 12 ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನೆದರ್ಲೆಂಡ್ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ:ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿಗೆ ಪಟಾಕಿ ಸಿಡಿಸಿ ಸಂಭ್ರಮ: ಹೃದಯಾಘಾತದಿಂದ ಪೊಲೀಸ್​ ಕುದುರೆ ಸಾವು

ABOUT THE AUTHOR

...view details