ಕರ್ನಾಟಕ

karnataka

ಟಿ20 ವಿಶ್ವಕಪ್: ಇಂಗ್ಲೆಂಡ್ ಪಾಕಿಸ್ತಾನ ಫೈನಲ್‌ ಪಂದ್ಯಕ್ಕೆ ಮಳೆರಾಯನ ಭೀತಿ ಸಾಧ್ಯತೆ

By

Published : Nov 11, 2022, 2:46 PM IST

ಮೆಲ್ಬೋರ್ನ್ ಕ್ರಿಕೆಟ್ ಮೈದಾನನಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಫೈನಲ್‌ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ ಎಂದು ಬ್ಯೂರೋ ಆಫ್ ಹವಾಮಾನ ಇಲಾಖೆ ಮುನ್ಸೂಚನೆ ನೀಡದೆ.

Fear of rain for England Pakistan final match
ಇಂಗ್ಲೆಂಡ್ ಪಾಕಿಸ್ತಾನ ಫೈನಲ್‌ ಮ್ಯಾಚ್ ಗೆ ಮಳೆರಾಯನ ಭೀತಿ

ಮೆಲ್ಬೋರ್ನ್ (ಆಸ್ಟ್ರೇಲಿಯಾ): ಮೆಲ್ಬೋರ್ನ್ ಕ್ರಿಕೆಟ್ ಮೈದಾನನಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಫೈನಲ್‌ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ ಎಂದು ಬ್ಯೂರೋ ಆಫ್ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳು ಟಿ ಟ್ವೆಂಟಿ ವಿಶ್ವಕಪ್‌ ಯಾವ ತಂಡ ಗೆಲ್ಲುತ್ತದೆ ಎಂದು ಕಾತರದಿಂದ ಕಾಯುತ್ತಿದ್ದಾರೆ.

ಆದರೆ, ಮಳೆಯಿಂದಾಗಿ ಫೈನಲ್ ಮೀಸಲು ದಿನಕ್ಕೆ ಮುಂದೂಡಲ್ಪಟ್ಟರೂ ಆ ದಿನ ಮಳೆ ಮತ್ತೆ ಬಂದರೆ ಎರಡು ತಂಡಗಳು ಕಪ್ ಹಂಚಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹವಾಮಾನ ವರದಿ:ಭಾನುವಾರದಂದು ಮೋಡ ಅತಿ ಹೆಚ್ಚಾಗಿದ್ದು, ಗುಡುಗು ಸಹಿತ 8 ರಿಂದ 20 ಮಿಮೀ ಶೇ 95 ರಷ್ಟು ಮಳೆಯ ಬೀಳುವ ಮುನ್ಸೂಚನೆ ಇದೆ. ಮಾರುತಗಳು ಬೆಳಗ್ಗೆ ಉತ್ತರದಿಂದ ಈಶಾನ್ಯಕ್ಕೆ 15 ರಿಂದ 25 ಕಿಮೀ / ಗಂ ವೇಗದಲ್ಲಿ ತಿರುಗುತ್ತವೆ. ನಂತರ ಉತ್ತರದಿಂದ ವಾಯುವ್ಯ ಕಡೆಗೆ ಮಾರುತಗಳು ಹೋಗುತ್ತವೆ ಎಂದು ಹವಾಮಾನ ಬ್ಯೂರೋ ತಿಳಿಸಿದೆ.

ಒಂದು ವೇಳೆ ಮಳೆಯಿಂದ ಪಂದ್ಯ ರದ್ದುಗೊಂಡು ಮೀಸಲು ದಿನಕ್ಕೆ ನಿಗದಿಯಾದರೆ ಸೋಮವಾರದಂದು ಮೋಡಕವಿದ ವಾತಾವರಣವಿದ್ದು, ಗುಡುಗು ಸಹಿತ ಶೇ 95 ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಮೀಸಲು ದಿನವಾದ ಸೋಮವಾರವೂ ಮಳೆ ಬರುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಷ್ಟೋ ಪಂದ್ಯಗಳು ಮಳೆಯಿಂದ ತೊಂದರೆಗೀಡಾಗಿದ್ದು, ಒಂದು ಬಾಲ್ ಆಗದೇ ಪಂದ್ಯಗಳು ವಾಶ್ ಔಟ್ ಆಗಿವೆ.

ಇದನ್ನೂ ಓದಿ:T20 World Cup: ಟೀಂ ಇಂಡಿಯಾದ ಫೈನಲ್​ ಕನಸು ಭಗ್ನ... ಇಂಗ್ಲೆಂಡ್​ಗೆ 10 ವಿಕೆಟ್​ಗಳ ಭರ್ಜರಿ ಗೆಲುವು

ABOUT THE AUTHOR

...view details