ಕರ್ನಾಟಕ

karnataka

ಅಫ್ಘಾನಿಸ್ತಾನದಲ್ಲಿ 4.1 ತೀವ್ರತೆಯ ಭೂಕಂಪ

By

Published : Mar 2, 2023, 7:09 AM IST

ಅಫ್ಘಾನಿಸ್ತಾನದ ಫೈಜಾಬಾದ್‌ನಲ್ಲಿ ಭೂಕಂಪ ಸಂಭವಿಸಿದೆ. ಯಾವುದೇ ಪ್ರಾಣಹಾನಿಯ ಬಗ್ಗೆ ವರದಿಯಾಗಿಲ್ಲ.

earthquake
ಪ್ರಾತಿನಿಧಿಕ ಚಿತ್ರ

ಕಾಬೂಲ್ (ಅಫ್ಘಾನಿಸ್ತಾನ):ಇಲ್ಲಿನ ಫೈಜಾಬಾದ್‌ನಿಂದ ಪೂರ್ವ ಈಶಾನ್ಯಕ್ಕೆ 267 ಕಿ.ಮೀ ದೂರದಲ್ಲಿ ಗುರುವಾರ ಮಧ್ಯಾಹ್ನ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. 37.73 ಅಕ್ಷಾಂಶ ಮತ್ತು 73.47 ರೇಖಾಂಶದಲ್ಲಿ 245 ಕಿ.ಮೀ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ಎನ್​ಸಿಎಸ್​ ಟ್ವೀಟ್​​ ಮಾಡಿದೆ.

ಭೂಕಂಪಕ್ಕೆ ತತ್ತರಿಸಿದ ಟರ್ಕಿ: ಪೂರ್ವ ಟರ್ಕಿಯಲ್ಲಿ ಕಳೆದ ಸೋಮವಾರ 5.2ರ ತೀವ್ರತೆಯ ಭೂಕಂಪ ಸಂಭವಿಸಿತ್ತು. ಆರಂಭದಲ್ಲಿ 5.5 ತೀವ್ರತೆಯ ಭೂಕಂಪವಾಗಿರುವುದಾಗಿ ಹೇಳಲಾಗಿತ್ತು. ಸಾವು–ನೋವು, ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಭೂಮಿಯ 5 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರಬಿಂದುವನ್ನು ಗುರುತಿಸಲಾಗಿತ್ತು. ಮೊದಲಿಗೆ, 10 ಕಿ.ಮೀ ಆಳದಲ್ಲಿ ಭೂಕಂಪವಾಗಿದೆ ಎಂದು ತಿಳಿಸಲಾಗಿತ್ತು.

ಫೆಬ್ರವರಿ ತಿಂಗಳಾರಂಭದಲ್ಲಿ ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಸಾವಿರಾರು ಕಟ್ಟಡಗಳು ಧರೆಗುರುಳಿ, 50 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಕಟ್ಟಡ ನಿರ್ಮಾಣದಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಟರ್ಕಿ ಸರ್ಕಾರ ಈವರೆಗೆ 184 ಜನರನ್ನು ಬಂಧಿಸಿದೆ. ತನಿಖೆಯನ್ನು ಮತ್ತಷ್ಟು ವಿಸ್ತರಿಸುತ್ತಿರುವುದಾಗಿ ಸರ್ಕಾರ ತಿಳಿಸಿದೆ. ಇತ್ತೀಚೆಗೆ ಟರ್ಕಿಯಲ್ಲದೇ, ತಜಕೀಸ್ತಾನ, ಇಂಡೋನೇಷ್ಯಾ, ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಧ್ಯಮ, ಕಡಿಮೆ ಪ್ರಮಾಣದ ಭೂಕಂಪ ಸಂಭವಿಸಿದೆ. ಆದರೆ ಯಾವುದೇ ಅನಾಹುತಗಳು ಸಂಭವಿಸಿಲ್ಲ.

ಇದನ್ನೂ ಓದಿ:ಇಂಡೋನೇಷ್ಯಾದಲ್ಲಿ ಕಂಪಿಸಿದ ಭೂಮಿ; ಟರ್ಕಿಯಲ್ಲಿ ಮೃತರ ಸಂಖ್ಯೆ 47 ಸಾವಿರಕ್ಕೇರಿಕೆ

ಮಣಿಪುರದಲ್ಲಿ ಕಂಪಿಸಿದ ಭೂಮಿ:ಮಂಗಳವಾರ(ಫೆ.28) ಮುಂಜಾನೆ ಮಣಿಪುರದ ನೋನಿ ಜಿಲ್ಲೆಯಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ನಸುಕಿನ ಜಾವ 2.46 ರ ಸುಮಾರಿಗೆ 25 ಕಿ.ಮೀ ಆಳದಲ್ಲಿ ಭೂಕಂಪದ ಅಲೆಗಳೆದ್ದಿವೆ. ಇದು 93 ಕಿ.ಮೀ ವ್ಯಾಪ್ತಿಯಲ್ಲಿ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ (ಎನ್​ಸಿಎಸ್​​) ತಿಳಿಸಿತ್ತು.

ಇದನ್ನೂ ಓದಿ:ಒಂದೇ ದಿನ ಅಫ್ಘಾನಿಸ್ತಾನ, ತಜಕಿಸ್ತಾನ, ಮಣಿಪುರದಲ್ಲಿ ನಡುಗಿದ ಭೂಮಿ

ಗುಮ್ಮಟ ನಗರಿಯಲ್ಲಿ ಸರಣಿ ಭೂಕಂಪ: ಫೆಬ್ರವರಿ ತಿಂಗಳಲ್ಲಿ ಒಂದೇ ವಾರದಲ್ಲಿ ವಿಜಯಪುರ ಜಿಲ್ಲೆಯ ತಿಕೋಟಾ ಸುತ್ತ ಮುತ್ತ ಮೂರು ಬಾರಿ ಭೂಕಂಪನ‌ ಅನುಭವವಾಗಿತ್ತು. ಸರಣಿ ಭೂಕಂಪನಗಳಿಂದ ತಿಕೋಟಾ ಪಟ್ಟಣದ ಜನ ಕಂಗಾಲಾಗಿದ್ದರು. ಈ ಹಿಂದೆ ಆಗಸ್ಟ್​ 2022ರಲ್ಲಿ ವಿಜಯಪುರ ಜಿಲ್ಲೆಯ ಭೂಕಂಪನ ಪೀಡಿತ ಪ್ರದೇಶಗಳಿಗೆ ನೈಸರ್ಗಿಕ ವಿಕೋಪ ಪರಿಶೀಲನಾ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಜಿಲ್ಲೆಯಲ್ಲಿ ಪದೇ ಪದೆ ಭೂಕಂಪದ ಅನುಭವವಾಗುತ್ತಿರುವುದಕ್ಕೆ ಆಲಮಟ್ಟಿ ಜಲಾಶಯ ಭರ್ತಿ ಹಾಗೂ ಅಧಿಕ ಮಳೆ ಕಾರಣ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ:ಗುಮ್ಮಟ ನಗರಿಯಲ್ಲಿ ಸರಣಿ ಭೂಕಂಪದ ಅನುಭವ: ಆತಂಕದಲ್ಲಿ ಜನತೆ

ABOUT THE AUTHOR

...view details