ಕರ್ನಾಟಕ

karnataka

ಉತ್ತರ ಕೊರಿಯಾ ದಾಳಿಗೆ ದಕ್ಷಿಣ ಕೊರಿಯಾ ವಾರ್ನಿಂಗ್​

By

Published : Jul 22, 2023, 4:11 PM IST

ಉತ್ತರ ಕೊರಿಯಾ ದಕ್ಷಿಣ ಮತ್ತು ಪಶ್ಚಿಮ ಸಮುದ್ರದಲ್ಲಿ ಕ್ಷಿಪಣಿ ದಾಳಿ ಮುಂದುವರೆಸಿದ್ದು, ಈ ಸಂಬಂಧ ದಕ್ಷಿಣ ಕೊರಿಯಾ ಎಚ್ಚರಿಕೆ ನೀಡಿದೆ.

Any nuke attack would end Kim Jong Un regime, South Korea warns as North Korea fires cruise missiles
Any nuke attack would end Kim Jong Un regime, South Korea warns as North Korea fires cruise missiles

ಸಿಯೋಲ್​(ದಕ್ಷಿಣ ಕೊರಿಯಾ): ಪಶ್ಚಿಮ ಸಮುದ್ರದತ್ತ ಉತ್ತರ ಕೊರಿಯಾ ಅನೇಕ ಕ್ಷಿಪಣಿಗಳನ್ನು ಹಾರಿಸುತ್ತಿದೆ ಎಂದು ದಕ್ಷಿಣ ಕೊರಿಯಾ ಸೇನೆ ತಿಳಿಸಿದೆ. ಈ ವಾರ ಎರಡನೇ ಬಾರಿಗೆ ಅಮೆರಿಕದ ಪರಮಾಣು​ ಸಜ್ಜಿತ ಸಬ್​​​ಮರಿನ್​ ಗುರಿಯಾಗಿಸಿ ನಡೆಸಿದ​ ದಾಳಿ ವಿರೋಧಿಸಿದೆ. ಯಾವುದೇ ಅಣುಬಾಂಬು ದಾಳಿಯು ಕಿಮ್ ಜೊಂಗ್ ಉನ್ ಆಡಳಿತವನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸುತ್ತದೆ ಎಂದು ಎಚ್ಚರಿಸಿದೆ

ಇತ್ತೀಚಿನ ತಿಂಗಳಲ್ಲಿ ಕ್ಷಿಪಣಿಗಳ ಉಡಾವಣೆ ವಿರೋಧಿಸಿ ವಾಗ್ದಾಳಿ ನಡೆಸಿರುವ ದಕ್ಷಿಣ ಕೊರಿಯಾ, ಉತ್ತರ ಕೊರಿಯಾ ಮಾತ್ರ ಈ ಕುರಿತು ಸಾರ್ವಜನಿಕ ಮೌನ ವಹಿಸಿದ್ದು, ಕೊರಿಯಾ ಗಡಿ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಕ್ಷಿಪಣಿಗಳು ನಿಂತಿವೆ. ಈ ಕುರಿತು ಮಾತನಾಡಿರುವ ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥ ಸಿಬ್ಬಂದಿ ಮಾತನಾಡಿದ್ದು, ಬೆಳಗ್ಗೆ 4 ಗಂಟೆಗೆ ಅವರು ಕ್ಷಿಪಣಿ ದಾಳಿ ಪತ್ತೆ ಮಾಡಿದ್ದಾರೆ. ಆದರೆ, ಎಷ್ಟು ಕ್ಷಿಣಿಗಳನ್ನು ಉಡಾವಣೆ ಮಾಡಲಾಗಿದೆ ಅಥವಾ ಎಷ್ಟು ದೂರದಿಂದ ಹಾರಿದೆ ಎಂದು ತಕ್ಷಣಕ್ಕೆ ವರದಿ ಮಾಡಿಲ್ಲ. ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಸೇನೆಗಳು ಈ ಉಡಾವಣೆಯನ್ನು ಹತ್ತಿರದಿಂದ ವಿಶ್ಲೇಷಣೆ ನಡೆಸುತ್ತಿರುವುದಾಗಿ ತಿಳಿಸಿದೆ.

ಉತ್ತರ ಕೊರಿಯಾ ಇತ್ತೀಚಿನ ವರ್ಷದಲ್ಲಿ ಸ್ಟ್ರಾಟರ್ಜಿಕ್​ ಎಂದು ವ್ಯಾಖ್ಯಾನಿಸಲಾದ ಕ್ರೂಸ್​ ಕ್ಷಿಪಣೆಯನ್ನು ಪರೀಕ್ಷಾರ್ಥ ನಡೆಸುತ್ತಿದೆ. ಇದರಲ್ಲಿ ಪರಮಾಣು ಶಸ್ತ್ರಾಸ್ತ್ರ ಅಳವಡಿಸಲಾಗಿದೆ. ತಜ್ಞರು ಹೇಳುವಂತೆ, ಈ ಕ್ಷಿಪಣಿಯ ಮುಖ್ಯ ಗುರಿ ನೌಕ ಆಸ್ತಿ ಮತ್ತು ಬಂದರುಗಳನ್ನು ಹೊಡೆದುರಿಳಿಸುವುದಾಗಿದೆ. ಇದನ್ನು ಸಣ್ಣ ವಿಮಾನದಂತೆ ಹಾರಲು ಮತ್ತು ನೆಲದ ಮೇಲೆ ಪ್ರಯಾಣಿಸುವಂತೆ ಕೂಡ ವಿನ್ಯಾಸ ಮಾಡಲಾಗಿದ್ದು, ಇದನ್ನು ರಾಡಾರ್​​ನಲ್ಲಿ ಪತ್ತೆ ಹಚ್ಚುವುದು ಕಷ್ಟವಾಗಿದೆ. ಈ ಕ್ರೂಸ್​ ಕ್ಷಿಪಣಿ ಅಮೆರಿಕದ ಸೇನೆಯಲ್ಲಿ ಹೆಚ್ಚೆಚ್ಚು ಸಂಗ್ರಹಗೊಳ್ಳುತ್ತಿದ್ದು, ದಕ್ಚಿಣವನ್ನು ಗುರಿಯಾಗಿಸಿ ಕ್ಷಿಣಿಗಳ ರಕ್ಷಣೆ ಹೆಚ್ಚುತ್ತಿದೆ.

ಬುಧವಾರ, ಉತ್ತರ ಕೊರಿಯಾ ಎರಡು ಕಡಿಮೆ ಅಂತರದ ಬ್ಯಾಲೆಸ್ಟಿಕ್​ ಕ್ಷಿಪಣಿಯನ್ನು ತಮ್ಮ ರಾಜಧಾನಿ ಪ್ಯೊಂಗ್ಯಾಂಗ್​​ ಸಮೀಪ ಉಡಾವಣೆ ಮಾಡಿದೆ. ಇದು ಲ್ಯಾಂಡ್​ ಆಗುವ ಮುನ್ನ 550 ಕಿಲೋ ಮೀಟರ್​ ಹಾರಿದೆ. ಆ ಕ್ಷಿಪಣಿಗಳ ಹಾರಾಟದ ಅಂತರವು ಪ್ಯೊಂಗ್ಯಾಂಗ್ ಮತ್ತು ದಕ್ಷಿಣ ಕೊರಿಯಾದ ಬಂದರು ನಗರ ಆಗಿರುವ ಬುಸಾನ್ ನಡುವಿನ ಅಂತರಕ್ಕೆ ಹೊಂದಿಕೆ ಆಗಿದೆ. ಇಲ್ಲಿ ಯುಎಸ್​ಎಸ್​​ ಕೆಂಟುಕಿ ಜಲಾಂತರ್ಗಾಮಿ ಕೂಡ ಬಿಡುಬಿಟ್ಟಿದೆ. ಈ ಕೆಂಟುಕಿ 1980 ರ ಬಳಿಕ ಇದೇ ಮೊದಲ ಬಾರಿಗೆ ದಕ್ಷಿಣ ಕೊರಿಯಾಕ್ಕೆ ಯುಎಸ್ ಪರಮಾಣು-ಸಜ್ಜಿತ ಜಲಾಂತರ್ಗಾಮಿ ನೌಕೆ ಬಂದಿಳಿದಿದೆ.

ಉತ್ತರ ಕೊರಿಯಾದ ರಾಜನನ್ನು ಎಲ್ಲಿ ಇಡಲಾಗಿದೆ. ಆತನ ಸ್ಥಿತಿ ಏನು ಎಂಬ ಅಮೆರಿಕದ ಮನವಿಗೆ ಇನ್ನು ಕೂಡ ಯಾವುದೇ ಪ್ರತಿಕ್ರಿಯೆಯನ್ನು ನೀಡಲಾಗಿಲ್ಲ. ಅಮೆರಿಕ ಕೂಡ ಉತ್ತರ ಕೊರಿಯಾ ರಾಜ ಕಿಮ್​ ಜೊಂಗ್​ ಉನ್​​ ​ ಯೋಗಕ್ಷೇಮದ ಬಗ್ಗೆ ಕಾಳಜಿವಹಿಸಿದೆ. ಉತ್ತರ ಕೊರಿಯಾ ವಾರ ಅಥವಾ ತಿಂಗಳು ಕಳೆದರೂ ರಾಜನ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ. ವಿಶ್ಲೇಷಕರು ಹೇಳುವಂತೆ ಹತೋಟಿಯನ್ನು ಗರಿಷ್ಠಗೊಳಿಸಲು ಮತ್ತು ಆತನ ಬಿಡುಗಡೆ ನಡೆಸಲು ಅಮೆರಿಯ ಪ್ರಯತ್ನವನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಜನಾಂಗೀಯ ನಿಂದನೆಗೆ ಸಿಂಗಾಪುರದಲ್ಲಿ ಭಾರತೀಯ ಮೂಲದ ಅಧಿಕಾರಿ ಸಾವು?: ತನಿಖೆಗೆ ಕೇಂದ್ರ ಸರ್ಕಾರ ಆಗ್ರಹ

ABOUT THE AUTHOR

...view details