ಕರ್ನಾಟಕ

karnataka

ಡಾ.ರಾಜ್‌ಕುಮಾರ್ ಅವರಂತೆಯೇ ಪವರ್ ಸ್ಟಾರ್​ಗೂ ಆಶೀರ್ವದಿಸಿದ ವರುಣದೇವ

By

Published : Nov 2, 2022, 11:04 AM IST

Updated : Nov 2, 2022, 1:15 PM IST

30 ವರ್ಷದ ಹಿಂದೆ ಡಾ.ರಾಜ್​ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುವ ಸಮಯದಲ್ಲಿ ಮಳೆ ಬಂದಿತ್ತು. ನಿನ್ನೆ ಸಹ ಪುನೀತ್ ರಾಜ್‌ಕುಮಾರ್​ಗೆ ಪ್ರಶಸ್ತಿ ಕೊಡುವ ವೇಳೆ ಮಳೆ ಬರುವ ಮೂಲಕ ವರುಣ ದೇವ ಆಶೀರ್ವಾದ ಮಾಡಿದ್ದಾನೆ ಎಂದು ನಟ ಶಿವರಾಜ್​ಕುಮಾರ್ ಹಳೆ ನೆನಪುಗಳನ್ನು ಮೆಲುಕು ಹಾಕಿದರು.

puneeth rajkumar
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿರುವ ನಟ. 46ನೇ ವಯಸ್ಸಿಗೆ ಹಲವು ಸಾಧನೆ ಮಾಡಿ ಬಾರದ‌ ಲೋಕಕ್ಕೆ ತೆರಳಿರುವ ದೊಡ್ಮನೆ ಹುಡುಗನಿಗೆ ಕರ್ನಾಟಕ ಸರ್ಕಾರ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಕರ್ನಾಟಕ ರತ್ನ' ನೀಡಿ ನಿನ್ನೆ ಗೌರವಿಸಿದೆ.

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್

ನಿನ್ನೆ ವಿಧಾನಸೌಧದ ಮುಂಭಾಗ ನಡೆದ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಮಾತನಾಡಿದ ನಟ ಶಿವರಾಜ್​ಕುಮಾರ್, ಕರ್ನಾಟಕ ರತ್ನ ಪ್ರಶಸ್ತಿಯನ್ನು ಅಪ್ಪಾಜಿಗೆ ಕೊಡಲಾಗಿತ್ತು. 30 ವರ್ಷದ ಬಳಿಕ ಮತ್ತೆ ಅಪ್ಪುಗೆ ಕರ್ನಾಟಕ ರತ್ನ ಕೊಡುತ್ತಿರುವುದು ಸಂತಸದ ವಿಷಯ. ಅಂದು ಡಾ. ರಾಜ್​ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುವ ಸಮಯದಲ್ಲಿ ಮಳೆ ಬಂದಿತ್ತು. ಇಂದು ಪುನೀತ್​ಗೆ ಪ್ರಶಸ್ತಿ ಕೊಡುವ ವೇಳೆ ಸಹ ಮಳೆ ಬರುವ ಮೂಲಕ ವರುಣ ದೇವ ಆಶೀರ್ವಾದ ಮಾಡಿದ್ದಾನೆ ಎಂದರು.

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್

ಇದನ್ನೂ ಓದಿ:ಅಪ್ಪು ಭಾವಚಿತ್ರಕ್ಕೆ ಕರ್ನಾಟಕ ರತ್ನ ಅರ್ಪಿಸಿದ ಕುಟುಂಬ... ವರ್ಷದ ಬಳಿಕ ಅಶ್ವಿನಿ ಮುಖದಲ್ಲಿ ನಗು

1992 ರಲ್ಲಿ‌ ಸಿನಿಮಾ ಚಿತ್ರರಂಗಕ್ಕೆ ಡಾ. ರಾಜ್​ಕುಮಾರ್ ಅವರ ಕೊಡುಗೆ ಗುರುತಿಸಿ ಅಂದಿನ‌‌‌ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪನವರು ವಿಧಾನ ಸೌಧದ ಮುಂಭಾಗ ಅಣ್ಣಾವ್ರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನ ಅಂದಿನ ರಾಜ್ಯಪಾಲರಾದ ಖುರ್ಷಿದ್ ಆಲಂ‌ ಖಾನ್ ಮೂಲಕ ನೀಡಿ ಗೌರವಿಸಲಾಗಿತ್ತು. ಈ ವೇಳೆ ನಾಯಕರಾದ ಎಸ್.ಎಂ. ಕೃಷ್ಣ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಆ ದಿನ ಮಳೆ ಬರುವ ಮುಖಾಂತರ ವರುಣ ದೇವ ರಾಜ್‍ಕುಮಾರ್ ಅವರಿಗೆ ಆರ್ಶೀವಾದ ಮಾಡಿದ್ದನಂತೆ. ಇಂದು ಕಾಕತಾಳೀಯ ಎಂಬಂತೆ ಪುನೀತ್ ರಾಜ್‍ಕುಮಾರ್​ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುವ ಸಂದರ್ಭದಲ್ಲಿ ಸಹ ವರುಣ ದೇವ ಬಂದು‌ ಆಶೀರ್ವಾದ ಮಾಡಿದ್ದಾನೆ ಅಂತ ಹಳೇ ದಿನಗಳನ್ನ ಮೆಲುಕು ಹಾಕಿದರು.

ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಡಾ. ರಾಜ್‌ಕುಮಾರ್​

ಇದನ್ನೂ ಓದಿ:ಕರ್ನಾಟಕ ರತ್ನ ಪ್ರಶಸ್ತಿ: ಮಳೆಯಿಂದ ಕುರ್ಚಿ ಒದ್ದೆ, ಒರೆಸಿ ಕುಳಿತು ಜೂ.ಎನ್​ಟಿಆರ್ ಸರಳತೆ

ಡಾ. ರಾಜ್‌ಕುಮಾರ್​ ಕುಟುಂಬ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ರಾಜ್ಯ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಜನಿಕಾಂತ್ ಮತ್ತು ಜೂನಿಯರ್​ ಎನ್‌ಟಿಆರ್, ಪುನೀತ್ ಪತ್ನಿ ಅಶ್ವಿನಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

Last Updated :Nov 2, 2022, 1:15 PM IST

ABOUT THE AUTHOR

...view details