ಕರ್ನಾಟಕ

karnataka

ಬ್ರಹ್ಮಾಸ್ತ್ರ ನಾಯಕ ರಣಬೀರ್​ ಕಪೂರ್ ಜನ್ಮದಿನ.. ಶಿವ ಪೋಸ್ಟರ್ ಅನಾವರಣ

By

Published : Sep 28, 2022, 3:20 PM IST

Updated : Sep 28, 2022, 3:31 PM IST

40ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬಾಲಿವುಡ್ ನಟ ರಣಬೀರ್​ ಕಪೂರ್ ಅವರಿಗೆ ಅಭಿಮಾನಿಗಳು, ಸಿನಿ ತಾರೆಯರು ಶುಭಾಶಯ ಕೋರುತ್ತಿದ್ದಾರೆ.

Shiva theme from Brahmastra unveiled
ಶಿವ ಪೋಸ್ಟರ್ ಅನಾವರಣ

ಬಾಲಿವುಡ್ ನಟ ರಣಬೀರ್​ ಕಪೂರ್​​ಗೆ ಹುಟ್ಟುಹಬ್ಬದ ಸಂಭ್ರಮ. 40ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅವರಿಗೆ ಅಭಿಮಾನಿಗಳು, ಸಿನಿತಾರೆಯರು ಶುಭಾಶಯ ಕೋರುತ್ತಿದ್ದಾರೆ.

ಭಾರತೀಯ ಚಲನಚಿತ್ರೋದ್ಯಮದ ಶ್ರೇಷ್ಠ ಶೋಮ್ಯಾನ್ ರಾಜ್ ಕಪೂರ್ ಅವರ ಮೊಮ್ಮಗ ಮತ್ತು ದಿವಂಗತ ರಿಷಿ ಕಪೂರ್ ಅವರ ಪುತ್ರ ರಣಬೀರ್ ಕಪೂರ್​​ 2007ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ ಸಾವರಿಯಾ ಚಿತ್ರದ ಮೂಲಕ ಬಾಲಿವುಡ್‌ ಬಣ್ಣದ ಲೋಕ ಪ್ರವೇಶಿಸಿದರು. ಅಲ್ಲಿಂದ ಅವರ ಯಶಸ್ಸಿನ ಘಟ್ಟ ಆರಂಭವಾಗಿದ್ದು, ಈವರೆಗೆ ಅವರು ಹಿಂದಿರುಗಿ ನೋಡಿಯೇ ಇಲ್ಲ. 15 ವರ್ಷಗಳ ಸಿನಿ ಜರ್ನಿಯಲ್ಲಿ ತಮ್ಮ ಅತ್ಯದ್ಬುತ ನಟನೆಯ ಮೂಲಕ ದೊಡ್ಡ ಅಭಿಮಾನಿ ಬಳಗ ಕಟ್ಟಿಕೊಂಡಿದ್ದಾರೆ.

ಲವರ್​​ಬಾಯ್​ನಿಂದ ಹಿಡಿದು ಪ್ರೀತಿಯಲ್ಲಿ ಬಿದ್ದು ಹಾಳಾಗುವವರೆಗೆ ರಣಬೀರ್​ ಎಲ್ಲ ಮಾದರಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮೈ ಲವ್​, ವೇಕ್​ಅಪ್ ಸಿದ್, ಸ್ಟ್ರೇಂಜರ್, ರಾಯ್​, ಇಂಡಿಯಾ, ತೇಜ್ ಸೇರಿ 27ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಈ ವರ್ಷ ರಣಬೀರ್​ ಕಪೂರ್ ಬರ್ತ್​ಡೇ ವಿಶೇಷ. ಏಕೆಂದರೆ ಒಂದು ಈ ವರ್ಷವೇ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ಶೀಘ್ರದಲ್ಲೇ ತಂದೆಯಾಗಲಿದ್ದಾರೆ ಜೊತೆಗೆ ಅವರ ಅಭಿನಯದ ಬ್ರಹ್ಮಾಸ್ತ್ರ ಸೂಪರ್​ ಹಿಟ್ ಆಗಿದೆ.

ವಿಶೇಷವಾಗಿ ಶುಭಕೋರಿದ ತಾಯಿ ನೀತು ಕಪೂರ್

ಪತ್ನಿ, ನಟಿ ಆಲಿಯಾ ಭಟ್​ ಬ್ರಹ್ಮಾಸ್ತ್ರ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರೆ, ತಾಯಿ ನೀತು ಕಪೂರ್​ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. ಮಗನೊಂದಿಗಿನ ಫೋಟೋ ಶೇರ್ ಮಾಡಿ, ಇದು ನಮಗೆ ನಿನಗೆ ಪ್ರಮುಖ ಮೈಲಿಗಲ್ಲು ವರ್ಷವಾಗಿದೆ. ನಿನ್ನ ತಂದೆ ಇದ್ದಿದ್ದರೆ ಬಹಳ ಹೆಮ್ಮೆ ಪಡುತ್ತಿದ್ದರು. ಎಲ್ಲವರನ್ನೂ ಅವರು ಮೇಲಿನಿಂದ ನೋಡುತ್ತಿದ್ದಾರೆ ಎಂದು ನಂಬಿದ್ದೇನೆ. ನೀನು ನನ್ನ ಶಕ್ತಿ ಅಸ್ತ್ರ ಎಂದು ಬರೆದಿದ್ದಾರೆ.

ಇದನ್ನೂ ಓದಿ:ಸಂಗೀತ ಶಾರದೆ ಲತಾ ಮಂಗೇಶ್ಕರ್ ಜನ್ಮದಿನ...ಎಲ್ಲೆಲ್ಲೂ ಗಾನ ಕೋಗಿಲೆಯ ಸ್ವರ ಸ್ಮರಣೆ

ನಿರ್ದೇಶಕ ಅಯಾನ್ ಮುಖರ್ಜಿ ತಮ್ಮ ಆತ್ಮೀಯ ಸ್ನೇಹಿತ ರಣಬೀರ್ ಕಪೂರ್ ಹುಟ್ಟುಹಬ್ಬ ಹಿನ್ನೆಲೆ ಬ್ರಹ್ಮಾಸ್ತ್ರದಿಂದ ಶಿವ ಥೀಮ್ ಅನ್ನು ಅನಾವರಣಗೊಳಿಸಿದರು. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಬ್ಯಾನರ್ ಅಡಿ ತಯಾರಾದ ರಣಬೀರ್ ಮತ್ತು ಆಲಿಯಾ ಅಭಿನಯದ ಈ 'ಬ್ರಹ್ಮಾಸ್ತ್ರ ಭಾಗ 1: ಶಿವ' ಚಿತ್ರವು ವಿಶ್ವಾದ್ಯಂತ 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇನ್ನೂ ಸ್ವಯಂ ಹಿ ತೂ ಅಗ್ನಿ ಹೇ ಸಂಪೂರ್ಣ ಹಾಡು ಕೂಡ ಬಿಡುಗಡೆ ಆಗಿದೆ. ಧರ್ಮ ಪ್ರೊಡಕ್ಷನ್ ಕೂಡ ವಿಶೇಷವಾಗಿ ಶುಭಾಶಯ ಕೋರಿದೆ.

ರಾಲಿಯಾ ದಂಪತಿ

ಇನ್ನೂ ಈ ಬ್ರಹ್ಮಾಸ್ರ್ತ ಚಿತ್ರವು 400 ಕೋಟಿಗೂ ಅಧಿಕ ಬಜೆಟ್‌ನಲ್ಲಿ ನಿರ್ಮಾಣ ಆಗಿದೆ. ಈವರೆಗೆ ಸುಮಾರು 410 ಕೋಟಿ ರೂ. ಅನ್ನು ಗಳಿಸಿದೆ. ಇಷ್ಟು ದೊಡ್ಡ ಮೊತ್ತವನ್ನು ಗಳಿಸಿದ್ದರೂ ಈ ಚಿತ್ರವು ವಿಶ್ವದ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 15 ಚಿತ್ರಗಳಲ್ಲಿ ಸೇರ್ಪಡೆಗೊಂಡಿಲ್ಲ. ಅದರಲ್ಲೂ 6 ಚಿತ್ರಗಳ ಅರ್ಧದಷ್ಟು ಕಲೆಕ್ಷನ್ ಕೂಡ ಮಾಡಲು ಸಾಧ್ಯವಾಗಿಲ್ಲ.

Last Updated :Sep 28, 2022, 3:31 PM IST

ABOUT THE AUTHOR

...view details