ಕರ್ನಾಟಕ

karnataka

ತುಮಕೂರಿನಲ್ಲಿ ಭಾರಿ ಮಳೆ: ತುಂಬಿ ತುಳುಕುತ್ತಿರುವ ಹಳ್ಳಕೊಳ್ಳಗಳು

By

Published : Oct 24, 2021, 2:23 PM IST

ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಗಿದ್ದು ಬಹುತೇಕ ಕೆರೆಕಟ್ಟೆಗಳು ತುಂಬಿ ತುಳುಕುತ್ತಿವೆ.

heavy rain in tumakuru
ತುಮಕೂರಿನಲ್ಲಿ ಭಾರಿ ಮಳೆ

ತುಮಕೂರು: ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಗಿದ್ದು ಬಹುತೇಕ ಕೆರೆಕಟ್ಟೆಗಳು ತುಂಬಿ ತುಳುಕುತ್ತಿವೆ. ಕೆರೆಗಳು ಕೋಡಿ ಬಿದ್ದಿದ್ದು, ಹಳ್ಳಕೊಳ್ಳಗಳಲ್ಲಿ ಯಥೇಚ್ಛವಾಗಿ ನೀರು ಹರಿದು ಹೋಗುತ್ತಿವೆ.

ಅನೇಕ ದಿನಗಳಿಂದ ಜಿಲ್ಲೆಯ ವಿವಿಧೆಡೆ ಮಳೆಯಾಗುತ್ತಿತ್ತು. ಆದರೆ ನಿನ್ನೆ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಕೆರೆಗಳಲ್ಲಿ ನೀರು ಭರ್ತಿಯಾಗಿದೆ. ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ತುಮಕೂರು ತಾಲೂಕು, ಗುಬ್ಬಿ, ತುರುವೇಕೆರೆ, ತಿಪಟೂರು ಭಾಗದಲ್ಲಿ ಭಾರಿ ಮಳೆಯಾಗಿದೆ.

ತುಮಕೂರಿನಲ್ಲಿ ಭಾರಿ ಮಳೆ: ತುಂಬಿ ತುಳುಕುತ್ತಿರುವ ಹಳ್ಳಕೊಳ್ಳಗಳು

ಇನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಲ ಕೆರೆಗಳು ಒಡೆದು, ನೀರು ಪೋಲಾಗಿದೆ. ಅಲ್ಲದೇ ಸುತ್ತಮುತ್ತಲ ಹೊಲಗದ್ದೆಗಳಿಗೆ ನೀರು ನುಗ್ಗಿ ಸಾಕಷ್ಟು ನಷ್ಟ ಆಗಿದೆ. ಕೆರೆಗಳಲ್ಲಿ ನೀರು ಪೋಲಾಗದಂತೆ ಸ್ಥಳೀಯರೇ ಮರಳಿನ ಚೀಲಗಳನ್ನು ಅಡ್ಡಲಾಗಿ ಇಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹಾವಿನಹಾಳು ಗ್ರಾಮದ ಸಮೀಪ ಸಂಪರ್ಕ ಕಡಿತಗೊಂಡಿದೆ.

ಇದನ್ನೂ ಓದಿ:ಅನುಮತಿ ಪಡೆಯದೆ ತೇಗದ ಮರ ಕಟಾವು: ಜಮೀನು ಮಾಲೀಕನ ವಿರುದ್ಧ ಪ್ರಕರಣ ದಾಖಲು

ABOUT THE AUTHOR

...view details