ಕರ್ನಾಟಕ

karnataka

ಮಹಿಳಾ ಸಿಬ್ಬಂದಿಯೊಂದಿಗೆ ಸರ್ಕಾರಿ ಕಚೇರಿಯಲ್ಲೇ ನೋಡಲ್​ ಅಧಿಕಾರಿಯ ಚೆಲ್ಲಾಟ ಆರೋಪ: ಫೋಟೋ, ವಿಡಿಯೋ ವೈರಲ್

By

Published : Nov 26, 2021, 10:18 AM IST

Updated : Nov 26, 2021, 12:06 PM IST

Nodal officer Sexual abuse with the female staff photos gone viral
ಮಹಿಳಾ ಸಿಬ್ಬಂದಿಯೊಂದಿಗೆ ನೋಡಲ್ ಅಧಿಕಾರಿ ಚೆಲ್ಲಾಟ: ವೈರಲ್ ಫೋಟೋ

ದ.ಕ ಜಿಲ್ಲೆಯ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ, ಆಯುಷ್ಮಾನ್ ನೋಡಲ್ ಆಫೀಸರ್ ಒಬ್ಬರು ಅವರು ಕಚೇರಿ ಮಹಿಳಾ ಸಿಬ್ಬಂದಿ ಜತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ವರದಿ ಆಗಿದೆ. ಕಚೇರಿಯ 9 ಮಹಿಳಾ ಸಿಬ್ಬಂದಿ ಜತೆಗೆ ಈ ಅಧಿಕಾರಿ ಚೆಲ್ಲಾಟವಾಡುತ್ತಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ.

ಮಂಗಳೂರು:ಮಂಗಳೂರಿನ ಆಯುಷ್ಮಾನ್ ನೋಡಲ್ ಅಧಿಕಾರಿಯೊಬ್ಬರು ಮಹಿಳಾ ಸಿಬ್ಬಂದಿಗಳೊಂದಿಗೆ ಚೆಲ್ಲಾಟವಾಡುತ್ತಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ. ದ.ಕ ಜಿಲ್ಲೆಯ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ, ಆಯುಷ್ಮಾನ್ ನೋಡಲ್ ಆಫೀಸರ್, ಕಚೇರಿ ಮಹಿಳಾ ಸಿಬ್ಬಂದಿ ಜತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ವರದಿ ಆಗಿದೆ. ಕಚೇರಿಯ 9 ಮಹಿಳಾ ಸಿಬ್ಬಂದಿ ಜತೆಗೆ ಈ ಅಧಿಕಾರಿ ಚೆಲ್ಲಾಟವಾಡುತ್ತಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗಿದ್ದು, ರಾಜ್ಯಾದ್ಯಂತ ಸದ್ದು ಮಾಡುತ್ತಿದೆ.

ವೈರಲ್​ ವಿಡಿಯೋದ ಫೋಟೊ

ಇತರ ಸಿಬ್ಬಂದಿಗಳ ಸಮ್ಮುಖದಲ್ಲಿ ಮಹಿಳಾ ಸಿಬ್ಬಂದಿ ಜತೆಗೆ ಈ ಅಧಿಕಾರಿ ಅಸಭ್ಯ ವರ್ತನೆ ಮಾಡಿದ್ದಾರೆ. ಹಾಡಹಗಲೇ ಕಚೇರಿಯಲ್ಲಿ ಚೆಲ್ಲಾಟವಾಡುತ್ತಿರುವ ದೃಶ್ಯಗಳನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದೆ.

ಮಹಿಳಾ ಸಿಬ್ಬಂದಿಗಳ ಜತೆಗೆ ಚೆಲ್ಲಾಟವಾಡುತ್ತಿದ್ದ ಡಾ.ರತ್ನಾಕರ್ ಸಹಕರಿಸದ ಮಹಿಳಾ ಸಿಬ್ಬಂದಿಗಳಿಗೆ ಟಾರ್ಚರ್ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಜತೆಗೆ ಮಹಿಳಾ ಸಿಬ್ಬಂದಿಯನ್ನು ಕರೆದುಕೊಂಡು ಟ್ರಿಪ್ ಕೂಡ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.

ವೈರಲ್​ ವಿಡಿಯೋದ ಫೋಟೊ

ಇದನ್ನೂ ಓದಿ:ಧಾರವಾಡದ SDM ಮೆಡಿಕಲ್ ಕಾಲೇಜಿನ 116 ವಿದ್ಯಾರ್ಥಿಗಳಿಗೆ ಕೊರೊನಾ: ಒಟ್ಟು ಸೋಂಕಿತರ ಸಂಖ್ಯೆ 182ಕ್ಕೆ ಏರಿಕೆ

Last Updated :Nov 26, 2021, 12:06 PM IST

ABOUT THE AUTHOR

...view details