ಕರ್ನಾಟಕ

karnataka

ಮಹಿಳೆಯರಿಗೆ ಪ್ರತ್ಯೇಕ ಚಾಲನಾ ತರಬೇತಿ: ಟ್ರೈನರ್​​ ಪ್ರಯತ್ನಕ್ಕೆ ಸ್ಥಳೀಯರ ಮೆಚ್ಚುಗೆ

By

Published : Jun 22, 2020, 1:54 PM IST

ಮಹಿಳೆಯರಿಗಾಗಿಯೇ ಇಲ್ಲೊಬ್ಬ ಮಹಿಳೆ ಬೈಕ್ ಟ್ರೈನಿಂಗ್ ಸ್ಕೂಲ್ ತೆರೆದಿದ್ದಾರೆ. ಡಿಫ್ರೆಂಟ್ ಸ್ಟೈಲ್‌ ಹಾಗೂ ಡಿಫ್ರೆಂಟ್ ಟೆಕ್ನಿಕ್​ನಲ್ಲಿ ಬೈಕ್​ ತರಬೇತಿ ನೀಡುತ್ತಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.

bike training school
ಬೈಕ್ ಟ್ರೈನಿಂಗ್ ಸ್ಕೂಲ್

ಕಲಬುರಗಿ:ನಗರದ ಕರುಣೇಶ್ವರ ಕಾಲೋನಿಯ ರೇನ್​ಬೋ ಅಪಾರ್ಟ್​ಮೆಂಟ್​ ನಿವಾಸಿಯಾದ ಸವಿತಾ ಜವ್ಹಾರ ಎಂಬುವವರು ರೇನ್​​ಬೋ ಸ್ಕೂಟಿ ಟ್ರೇನಿಂಗ್ ಸ್ಕೂಲ್​ ಹೆಸರಿನಲ್ಲಿ ಮಹಿಳೆಯರಿಗೆ ಬೈಕ್​ ಓಡಿಸುವುದನ್ನು ಕಲಿಸುವುದಕ್ಕೆ ಮುಂದಾಗಿದ್ದಾರೆ. ಈ ಮೂಲಕ ಮಹಿಳೆಯರು ಪುರುಷರ ಮೇಲೆ ಅವಲಂಬಿತರಾಗದಿರಲು ತರಬೇತಿ ನೀಡುತ್ತಿದ್ದಾರೆ.

ಸಾಮಾನ್ಯವಾಗಿ ಬೈಕ್​ ಚಾಲನಾ ತರಬೇತಿ ನೀಡುವವರು ಹಿಂದೆ ಕುಳಿತು ತರಬೇತಿ ನೀಡುತ್ತಾರೆ. ಆದರೆ, ಇವರು ಬೈಕ್​ ಸವಾರರ ಹಿಂದೆ ಕುಳಿತುಕೊಳ್ಳದೇ ಕೆಲವೊಂದು ಸುಲಭವಾದ ಟೆಕ್ನಿಕ್​ಗಳನ್ನು ತಿಳಿಸುವ ಮೂಲಕ ಬೈಕ್​ ಚಾಲನೆ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡುತ್ತಾರೆ.

ಬೈಕ್ ಟ್ರೈನಿಂಗ್ ಸ್ಕೂಲ್

ಕೇವಲ 10 ದಿನಗಳಲ್ಲಿ ಬೈಕ್​ ಚಾಲನೆ ಮಾಡುವುದವನ್ನು ತರಬೇತಿ ನೀಡುವ ಇವರು ಈಗಾಗಲೇ 250 ಮಂದಿಗೆ ತರಬೇತಿ ನೀಡಿದ್ದಾರೆ. ಇವರ ಬಳಿ ತರಬೇತಿಗೆ ಯುವತಿಯವರು ಮಾತ್ರವಲ್ಲ, 55 ವರ್ಷದಿಂದ 60 ವರ್ಷ ವೃದ್ಧೆಯರೂ ಕೂಡಾ ಬಂದು ತರಬೇತಿ ಪಡೆದುಕೊಳ್ಳುತ್ತಾರೆ.

ತಮ್ಮದೇ ದ್ವಿಚಕ್ರದ ಮೂಲಕ ತರಬೇತಿ ನೀಡುವ ಸವಿತಾ ಅವರು, ತರಬೇತಿಗೆ 2,500 ರೂಪಾಯಿ ಶುಲ್ಕ ಪಡೆಯುತ್ತಾರೆ. ಕಲಿಕಾ ಸಂದರ್ಭದಲ್ಲಿ ತಗಲುವ ಪೆಟ್ರೋಲ್ ಖರ್ಚು ಹಾಗೂ ವಾಹನ ಡ್ಯಾಮೇಜ್ ಏನೇ ಆದ್ರೂ ತಾವೇ ಭರಿಸಿಕೊಳ್ತಾರೆ. ಒಟ್ಟಿನಲ್ಲಿ ವಾಹನ ಓಡಿಸೋದು ತುಂಬಾ ಕಷ್ಟ ಅಂತಾ ಹಿಂಜರಿಯುವ ಮಹಿಳೆಯರು, ವೃದ್ದೆಯರು ಕೂಡ ಈಗ ಸವಿತಾ ಅವರಿಂದ ದ್ವಿಚಕ್ರ ಓಡಿಸೋದನ್ನ ಕಲಿತು ಖುಷಿ ಪಡ್ತಿದ್ದಾರೆ.

ABOUT THE AUTHOR

...view details