ಕರ್ನಾಟಕ

karnataka

ಕಾಂಗ್ರೆಸ್​​ನವರು ಹೇಳಿಕೊಳ್ಳಲು ಭಾರತೀಯರು.. ಆದರೆ, ಇಟಲಿ ನಾಯಕತ್ವಕ್ಕೆ ಮಣೆ ಹಾಕ್ತಿದ್ದಾರೆ‌.. ಸಿ ಟಿ ರವಿ

By

Published : Sep 24, 2021, 3:31 PM IST

ಕಾಂಗ್ರೆಸ್​​ನಲ್ಲಿ ಅಸಹಿಷ್ಟುತಾ ಭಾವನೆ ಯಾವ ಮಟ್ಟಿಗೆ ಇದೆ ಎಂದರೆ, ಲೋಕಸಭೆ ಸ್ಪೀಕರ್ ಬಂದು ಭಾಷಣ ಮಾಡುತ್ತಿರುವುದನ್ನೂ ಸಹಿಸಲಾಗುತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಅತಿಥೇಯ ರಾಜ್ಯ ಕರ್ನಾಟಕ. ಅತಿಥೇಯರಾಗಿ, ಅತಿಥಿಗಳನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದು ಗೊತ್ತಿಲ್ಲ. ಈಗಿರುವುದು ಇಟಲಿಯನ್ ಕಾಂಗ್ರೆಸ್. ನೈತಿಕ ಮೌಲ್ಯವನ್ನು ಕಳೆದುಕೊಂಡಿದೆ..

ct ravi
ಸಿ.ಟಿ ರವಿ

ಬೆಂಗಳೂರು :ಕಾಂಗ್ರೆಸ್ ನವರಿಗೆ ಮೆಕಾಲೆ ಶಿಕ್ಷಣ ನೀತಿ ಬೇಕಾಗಿದೆ. ಕಾಂಗ್ರೆಸ್ ಗುಲಾಮಗಿರಿ ಸಂಕೇತ. ಗಾಂಧಿ ಫೋಟೋ ಹಾಕಿರುವ ಕಾಂಗ್ರೆಸ್ ಇದಲ್ಲ. ಇಟಲಿ ನಾಯಕತ್ವ ಒಪ್ಪಿರುವ ಕಾಂಗ್ರೆಸ್​​ ಎಂದು ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಆರೋಪಿಸಿದರು.

ಕಾಂಗ್ರೆಸ್ ವಿರುದ್ಧ ಸಿ ಟಿ ರವಿ ವಾಗ್ದಾಳಿ

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ನವರು ಹೇಳಿಕೊಳ್ಳೋಕೆ ಮಾತ್ರ ಭಾರತೀಯರು. ಆದರೆ, ಇಟಲಿ ನಾಯಕತ್ವಕ್ಕೆ ಮಣೆ ಹಾಕುತ್ತಿದ್ದಾರೆ‌. ನಮ್ಮ ಸಂಸ್ಕ್ರತಿ, ಕನ್ನಡಕ್ಕೆ ಒತ್ತು ನೀಡುವ ಶಿಕ್ಷಣ ನೀತಿ ಕಾಂಗ್ರೆಸ್​​ಗೆ ಬೇಕಿಲ್ಲ. ಹಾಗಾದರೆ, ಕಾಂಗ್ರೆಸ್ ಕನ್ನಡ ವಿರೋಧಿಯಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್​​ನಲ್ಲಿ ಅಸಹಿಷ್ಟುತಾ ಭಾವನೆ ಯಾವ ಮಟ್ಟಿಗೆ ಇದೆ ಎಂದರೆ, ಲೋಕಸಭೆ ಸ್ಪೀಕರ್ ಬಂದು ಭಾಷಣ ಮಾಡುತ್ತಿರುವುದನ್ನೂ ಸಹಿಸಲಾಗುತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಅತಿಥೇಯ ರಾಜ್ಯ ಕರ್ನಾಟಕ. ಅತಿಥೇಯರಾಗಿ, ಅತಿಥಿಗಳನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದು ಗೊತ್ತಿಲ್ಲ. ಈಗಿರುವುದು ಇಟಲಿಯನ್ ಕಾಂಗ್ರೆಸ್. ನೈತಿಕ ಮೌಲ್ಯವನ್ನು ಕಳೆದುಕೊಂಡಿದೆ ಎಂದು ಆರೋಪಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಸ್ಕಿಲ್ ಶಿಕ್ಷಣ ಬೇಕು ಅಂತಾ ನಾವು ಮುಂದಾದ್ರೆ, ಅವರು ಮೆಕಾಲೆ ಶಿಕ್ಷಣವೇ ಬೇಕು ಎನ್ನುತ್ತಿದ್ದಾರೆ. ಭಾರತೀಯತೆಯನ್ನು ಒಳಗೊಂಡಿರುವ ಶಿಕ್ಷಣಕ್ಕೆ ಮಾತ್ರ ಒತ್ತು ನೀಡುತ್ತಿದ್ದು, ಪ್ರಾದೇಶಿಕ ಭಾಷೆಗೆ ಮಹತ್ವ ನೀಡುತ್ತೇವೆ ಎಂದು ಹೇಳಿದರು.

ನೂತನ ಶಿಕ್ಷಣ ನೀತಿಯಲ್ಲಿ ಕೇಸರೀಕರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ ಟಿ ರವಿ, ಆರ್​​ಎಸ್​​ಎಸ್ ನಲ್ಲಿ ಸಂಸ್ಕಾರ ನೀಡುವ ವಿಚಾರ ಇದೆ. ಆದರೆ, ಅವರಿಗೆ ತುಕಡೆ ಗ್ಯಾಂಗ್ ಮಾಡುವವರು ಬೇಕು. ಮಹಾತ್ಮಗಾಂಧಿ ಹೆಸರು ಹೇಳಲು ಅವರಿಗೆ ಯೋಗ್ಯತೆ ಇಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಲೆ ಏರಿಕೆ ವಿಚಾರದಲ್ಲಿ ಕಾಂಗ್ರೆಸ್​​ ಪ್ರತಿಭಟನೆ ವಿಚಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಚೆನ್ನಾಗಿ ಉತ್ತರ ನೀಡಿದ್ದಾರೆ. ಸ್ವಾತಂತ್ರ್ಯ ಬಂದಾಗ 1ರೂ. ಪೆಟ್ರೋಲ್ ದರ ಇತ್ತು. ಸ್ವಾತಂತ್ರ್ಯ ನಂತರ ಅಷ್ಟೇ ಇತ್ತಾ.? ಇದು ತಾತ್ಕಾಲಿಕ. ಕೋವಿಡ್ ಹೆಚ್ಚಳ ಹಿನ್ನೆಲೆ ಜಗತ್ತಿನಾದ್ಯಂತ ಬೆಲೆ ಹೆಚ್ಚಾಗಿದೆ. ವಾಜಪೇಯಿ ಅಧಿಕಾರದಿಂದ ಇಳಿದಾಗ ಪೆಟ್ರೋಲ್ ಬೆಲೆ 43 ರೂ. ಇತ್ತು. ವಾಜಪೇಯಿ ನಂತರ 96 ರೂ‌.ಗೆ ಹೋಗಿರಲಿಲ್ಲವೇ? ಎಂದರು.

ಡಿಎನ್​​ಎಗೆ ಮ್ಯಾಚ್ :ಟಾಂಗಾ ಡಿಎನ್​​​ಎಗೂ, ಕಾಂಗ್ರೆಸ್ ಡಿಎನ್​​ಎಗೂ ಮ್ಯಾಚ್ ಆಗುತ್ತದೆ. ಎರಡೂ ಒಂದೇ.. ಅವರು ಖಾಯಂ ಆಗಿ ಟಾಂಗಾದಲ್ಲೇ ಬರ್ತಾರೆ ಅಂದರೆ ಸಂತೋಷ. ಸಿಎಂ ಬೊಮ್ಮಾಯಿ ಹೇಳಿದ್ದಾರೆ ಕಾಂಗ್ರೆಸ್ ಎತ್ತಿನಗಾಡಿಯಲ್ಲಿ ಬಂದು ಬೆಂಜ್ ಕಾರಲ್ಲಿ ಹೋಗ್ತಾರೆ ಎಂದು ಅವರು ಸರಿಯಾಗಿ ಹೇಳಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ:ಮಾಜಿ ಸಿಎಂ ಯಡಿಯೂರಪ್ಪ ಈ ಬಾರಿಯ ಅತ್ಯುತ್ತಮ ಶಾಸಕ.. ಹೊಸ ಸಂಪ್ರದಾಯಕ್ಕೆ ನಾಂದಿ..

ABOUT THE AUTHOR

...view details