ಕರ್ನಾಟಕ

karnataka

ಯುಪಿ ಚುನಾವಣೆ: ಇಂದು ಬಿಜೆಪಿ, ಕಾಂಗ್ರೆಸ್​​ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ!

By

Published : Jan 15, 2022, 10:15 AM IST

UP Assembly Election 2022: ಇಂದು ಬಿಜೆಪಿ ಪಕ್ಷ 135 ರಿಂದ 140 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಮೂಲಗಳ ಪ್ರಕಾರ ಇಂದು ಬಿಡುಗಡೆಯಾಗಲಿರುವ ಮೊದಲ ಪಟ್ಟಿಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ದಲಿತರ ಜತೆಗೆ ಹಿಂದುಳಿದವರಿಗೆ ಆದ್ಯತೆ ನೀಡಲಾಗಿದೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಖನೌ(ಉತ್ರ ಪ್ರದೇಶ): ಭಾರತೀಯ ಜನತಾ ಪಕ್ಷದ ಕೇಂದ್ರ ಚುನಾವಣಾ ಸಮಿತಿ ದೆಹಲಿಯಲ್ಲಿ ಸಭೆ ನಡೆಸಿದ ಬಳಿಕ ಜ.13 ರಂದು ಮೊದಲ ಮೂರು ಹಂತದ ಎಲ್ಲ ಸ್ಥಾನಗಳ ಟಿಕೆಟ್​ ಅಂತಿಮಗೊಳಿಸಿತ್ತು. ಇಂದು 135 ರಿಂದ 140 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಬಹುದು ಎಂಬ ಮಾಹಿತಿ ಲಭ್ಯವಾಗಿದೆ.

ಹಾಲಿ ಶಾಸಕರಿಗೆ ಟಿಕೆಟ್?:

ಮೂಲಗಳ ಪ್ರಕಾರ ಇಂದು ಬಿಡುಗಡೆಯಾಗಲಿರುವ ಮೊದಲ ಪಟ್ಟಿಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ದಲಿತರ ಜತೆಗೆ ಹಿಂದುಳಿದವರಿಗೆ ಆದ್ಯತೆ ನೀಡಲಾಗಿದೆ ಎನ್ನಲಾಗಿದೆ. ಜತೆಗೆ ಪಶ್ಚಿಮ ಯುಪಿಯಿಂದ ಬರುವ ಅನೇಕ ಹಾಲಿ ಸಚಿವರಿಗೆ ಮತ್ತೊಮ್ಮೆ ಟಿಕೆಟ್ ನೀಡುವ ಸಾಧ್ಯತೆಯಿದೆ.

ಮಥುರಾದ ಶ್ರೀಕಾಂತ್ ಶರ್ಮಾ, ಮಥುರಾದ ಛತ್ರಿಯಿಂದ ಲಕ್ಷ್ಮಿ ನಾರಾಯಣ ಚೌಧರಿ, ಗಾಜಿಯಾಬಾದ್‌ನ ಅತುಲ್ ಗರ್ಗ್, ಆಗ್ರಾ ಕ್ಯಾಂಟ್‌ನಿಂದ ಜಿಎಸ್ ಧರ್ಮೇಶ್, ಥಾನಾ ಭವನದಿಂದ ಸುರೇಶ್ ರಾಣಾ ಮತ್ತು ಮುಜಾಫರ್‌ನಗರದಿಂದ ಕಪಿಲ್ ದೇವ್ ಈ ಪಟ್ಟಿಯಲ್ಲಿ ಸೇರಿದ್ದಾರೆ ಎನ್ನಲಾಗಿದೆ. ಪ್ರಸ್ತುತ, ಪಶ್ಚಿಮ ಯುಪಿಯಲ್ಲಿ ನಡೆಯಲಿರುವ ಮೊದಲ ಮೂರು ಹಂತದ ಚುನಾವಣೆಯಲ್ಲಿ ಬಹುತೇಕ ಹಾಲಿ ಶಾಸಕರು ಟಿಕೆಟ್ ಪಡೆಯುತ್ತಾರೆ ಎಂದು ನಂಬಲಾಗಿದೆ.

ಆದರೆ, ಕೆಲವು ಸ್ಥಾನಗಳಲ್ಲಿ ಪಕ್ಷ ಇನ್ನೂ ಗೊಂದಲದಲ್ಲಿದೆ. ಎಸ್‌ಪಿ ಮೈತ್ರಿಕೂಟದ ಅಭ್ಯರ್ಥಿಗಳ ಘೋಷಣೆಯ ನಂತರ ಜಾತಿ ಆಧಾರದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆಂದು ಬಿಜೆಪಿ ನಿರ್ಧರಿಸಿದೆ ಎನ್ನಲಾಗ್ತಿದೆ. ಅಭ್ಯರ್ಥಿಗಳ ಬಲಾಬಲದ ಜೊತೆಗೆ ರಾಜ್ಯದಲ್ಲಿನ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆಯೂ ಪಕ್ಷ ಸಂಪೂರ್ಣ ನಿಗಾ ವಹಿಸಿದ್ದು, ಅಭ್ಯರ್ಥಿಗಳ ಪಟ್ಟಿ ಬಂದ ನಂತರವೇ ಸಂಪೂರ್ಣ ಚಿತ್ರಣ ತಿಳಿಯಲಿದೆ.

ಕಾಂಗ್ರೆಸ್​​ನಿಂದಲೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ:

ಶುಕ್ರವಾರ ಸಭೆ ಸೇರಿದ ಕಾಂಗ್ರೆಸ್ ಕನಿಷ್ಠ 70 ಅಭ್ಯರ್ಥಿಗಳ ಹೆಸರುಗಳ ಪರಿಷ್ಕೃತ ಪಟ್ಟಿಯನ್ನು ಎಐಸಿಸಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಅಂತಿಮ ಒಪ್ಪಿಗೆಗಾಗಿ ಕಳುಹಿಸಿದ್ದು, ಪಕ್ಷವು ಯಾವಾಗ ಬೇಕಾದರೂ ತನ್ನ ಪಟ್ಟಿಯನ್ನು ಬಿಡುಗಡೆ ಮಾಡಬಹುದು ಎಂದು ಮೂಲಗಳು ತಿಳಿಸಿವೆ.

ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಶುಕ್ರವಾರ ಸಭೆ ಸೇರಿಲ್ಲ. ಸ್ಕ್ರೀನಿಂಗ್ ಕಮಿಟಿ ಒಮ್ಮತವನ್ನು ಹೊಂದಿರುವ ಹೆಸರುಗಳನ್ನು ಹೆಚ್ಚಾಗಿ ಪಟ್ಟಿ ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:UP polls-2022: 172 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳು ಫೈನಲ್​​.. ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ABOUT THE AUTHOR

...view details