ಕರ್ನಾಟಕ

karnataka

ಥಾಯ್ಲೆಂಡ್​​​​ ಬಾಡಿ ಬಿಲ್ಡಿಂಗ್​ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ರಾಜಸ್ಥಾನದ ಪ್ರಿಯಾ ಸಿಂಗ್​.. ಇವರೇ ಆ ರಾಜ್ಯದ ಮೊದಲ ಮಹಿಳಾ ಬಾಡಿಬಿಲ್ಡರ್

By

Published : Dec 28, 2022, 5:39 PM IST

ರಾಜಸ್ಥಾನದ ಮೊದಲ ಮಹಿಳಾ ಬಾಡಿ ಬಿಲ್ಡರ್ ​- 8 ವರ್ಷಕ್ಕೇ ಮದುವೆ - ಪ್ರಶಸ್ತಿ ಗೆದ್ದರೂ ಬಿಕಿನಿ ಸದ್ದು

ಥೈಲ್ಯಾಂಡ್​ ಬಾಡಿ ಬಿಲ್ಡಿಂಗ್​ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ರಾಜಸ್ಥಾನ ಮೊದಲ ಮಹಿಳಾ ಬಾಡಿಬಿಲ್ಡರ್​ ಪ್ರಿಯಾ ಸಿಂಗ್​​
priya-singh-is-the-first-female-bodybuilder-from-rajasthan-to-win-a-gold-medal-in-thailand-body-building-competition

ಜೈಪುರ:ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಹೆಸರು ಎಂದರೆ ಪ್ರಿಯಾ ಸಿಂಗ್​ ಮೆಘವಾಲ್​. ಇವರು ರಾಜಸ್ಥಾನದ ಮೊದಲ ಮಹಿಳಾ ಬಾಡಿ ಬಿಲ್ಡರ್​​. ಕೇವಲ ರಾಜ್ಯಕ್ಕೆ ಮಾತ್ರವಲ್ಲದೇ ದೇಶಕ್ಕೂ ಕೀರ್ತಿ ತಂದಿದ್ದಾರೆ ಪ್ರಿಯಾಸಿಂಗ್​. ಥಾಯ್ಲೆಂಡ್​​ನ ಪಟ್ಟಾಯಂನಲ್ಲಿ ನಡೆದ 39ನೇ ಅಂತಾರಾಷ್ಟ್ರೀಯ ಮಹಿಳಾ ಬಾಡಿ ಬಿಲ್ಡಿಂಗ್​ ಸ್ಪರ್ಧೆಯಲ್ಲಿ ಚಿನ್ನದ ಪದಕಗಳಿಸಿದ್ದಾರೆ.

ಪ್ರಿಯಾ ಸಿಂಗ್​ ಮತ್ತೊಮ್ಮೆ ದೇಶದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ. ಪಟ್ಟಾಯಂನಲ್ಲಿ ಚಿನ್ನದ ಪದಕ ಜೊತೆಗೆ ಪ್ರೊಕಾರ್ಡ್​ ಅನ್ನು ಕೂಡ ಅವರು ಗೆದ್ದಿದ್ದಾರೆ. ಈ ಹಿಂದೆ ಅವರು ಮೂರು ಬಾರಿ 2018, 2019, 2020ರಲ್ಲಿ ಮಿಸ್​ ರಾಜಸ್ಥಾನಿ ಟೈಟಲ್​ ಗೆದ್ದಿದ್ದಾರೆ. ಜೊತೆಗೆ ಒಂದು ಬಾರಿ ಅಂತಾರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಮಹಿಳಾ ಬಾಡಿಬಿಲ್ಡರ್​ ಪ್ರಿಯಾ ಸಿಂಗ್​​

ಪ್ರಯಾಣ ಸುಲಭವಲ್ಲ: ರಾಜಸ್ಥಾನ ಬಿಕನೇರ್​ನ ಪ್ರಿಯಾ ಸಿಂಗ್​ ಮನೆಯ ಆರ್ಥಿಕ ಸಮಸ್ಯೆಯಿಂದಾಗಿ 8ನೇ ವರ್ಷಕ್ಕೆ ಮದುವೆಯಾದರು. ಪ್ರಿಯಾ ಸಿಂಗ್​ ಕೆಲಸ ಮಾಡಲು ನಿರ್ಧರಿಸಿದರು. ಐದನೇ ತರಗತಿ ಓದಿದ್ದ ಅವರಿಗೆ ಕೆಲಸ ಸಿಗಲಿಲ್ಲ. ಈ ವೇಳೆ ಜಿಮ್​ ಕೆಲಸ ಮಾಡುವಂತೆ ಕೆಲವರು ಆಕೆಗೆ ಸಲಹೆ ನೀಡಿದರು. ಮೊದಲ ಬಾರಿಗೆ ಈ ಕೆಲಸ ನನ್ನಿಂದ ಸಾಧ್ಯವಾ ಎಂದುಕೊಂಡೆ. ಜಿಮ್​ಗೆ ಭೇಟಿ ನೀಡಿದಾಗ ನನ್ನ ಎತ್ತರ ನೋಡಿ ಕೆಲಸ ನೀಡಿದರು. ಜಿಮ್​ನಲ್ಲಿ ಕಷ್ಟಪಟ್ಟು ಕೆಲಸ ಮಾಡಲು ಶುರು ಮಾಡಿ ತರಬೇತಿ ಆರಂಭಿಸಿದೆ.

ಏತನ್ಮಧ್ಯೆ, ಬಾಡಿ ಬಿಲ್ಡಿಂಗ್​ ಕ್ಷೇತ್ರದಲ್ಲಿ ಮಹಿಳೆಯರು ಇಲ್ಲ ಎಂಬುದು ತಿಳಿಯಿತು. ಇದಕ್ಕಾಗಿ ತಯಾರಿ ಆರಂಭಿಸಿದೆ. ಈ ವೇಳೆ ಡ್ರೆಸ್​ ವಿಷಯದ ಬಗ್ಗೆ ಪ್ರಶ್ನೆ ಮೂಡಿತು. ಈ ಸಂಬಂಧ ನನ್ನ ಪೋಷಕರು, ಗಂಡನಿಗೆ ಕೇಳಿದಾಗ ಅವರು ಈ ಬಗ್ಗೆ ಸಂತಸವನ್ನೇನು ಪಡಲಿಲ್ಲ. ನನ್ನ ಸಂಬಂಧಿಕರು ನನ್ನನ್ನು ನೋಡುವ ದೃಷ್ಟಿ ಬದಲಾಯಿತು. ಆದರೆ, ಇಂದು ಇದೇ ಸಂಬಂಧಿಕರು ನನ್ನನ್ನು ಗೌರವದಿಂದ ಕಾಣುತ್ತಿದ್ದಾರೆ ಎಂದಿದ್ದಾರೆ.

ಪ್ರಶಸ್ತಿ ಗೆದ್ದರೂ ಬಿಕಿನಿ ಸದ್ದು: ಈ ಸಾಧನೆ ಹೊರಾತಾಗಿ ಪ್ರಿಯಾ ಅವರ ಉಡುಪು ಇದೀಗ ಎಲ್ಲೆಡೆ ಸದ್ದಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಇದು ನಿಮ್ಮ ಆಲೋಚನೆ ಮತ್ತು ದೃಷ್ಟಿಕೋನಕ್ಕೆ ಬಿಟ್ಟಿದ್ದು. ಸ್ಪರ್ಧೆಯಲ್ಲಿ ನನ್ನ ಉಡುಪು ಬಿಕಿನಿ ಆಗಿತ್ತು. ಎಲ್ಲ ಸ್ಪರ್ಧಿಗಳು ಇದೆ ಉಡುಪಿನಲ್ಲಿ ಹೋಗಿದ್ದರು. ಪ್ರಶಸ್ತಿ ಗೆದ್ದ ಬಳಿಕ ಚಿತ್ರಗಳನ್ನು ಪಡೆಯಲಾಯಿತು. ಈ ವೇಳೆ ಬಿಕಿನಿ ಫೋಟೋಗಳನ್ನು ಸೆರೆ ಹಿಡಿಯಲಾಗಿದೆ. ಮೈ ಮುಚ್ಚಿದ ಬಟ್ಟೆ ತೊಟ್ಟು ಬಾಡಿ ತೋರಿಸಲು ಸಾಧ್ಯವೇ? ಎನ್ನುವ ಅವರು, ಜನರು ತಮ್ಮ ಆಲೋಚನೆಯನ್ನು ಬದಲಾಯಿಸಿಕೊಳ್ಳಬೇಕು ಎಂದೂ ಕರೆ ನೀಡಿದ್ದಾರೆ.

ಪ್ರಶಸ್ತಿ ಗೆದ್ದ ಬಳಿಕ ಅನೇಕ ಜನರು ನನಗೆ ಕರೆ ಮಾಡಿ ಮತ್ತು ಸಾಮಾಜಿಕ ಜಾಲತಾಣದಲ್ಲೂ ಶುಭಾಶಯಗಳನ್ನು ಕೋರಿದ್ದಾರೆ. ಸಮಾಜದಲ್ಲಿ ಇನ್ನು ಅನೇಕ ಬದಲಾವಣೆ ಆಗಬೇಕಿದೆ. ಪೊಲೀಸ್​ ಸಮವಸ್ತದಲ್ಲಿದ್ದಾಗ ನಿಮ್ಮ ಕುಟುಂಬ ಸದಸ್ಯರು ಎದುರಾದರೆ ಹೋಗಿ ಬಟ್ಟೆ ಬದಲಾಯಿಸುತ್ತೀರಾ. ಇಲ್ಲ, ಅವರ ಪಾಡಿಗೆ ಅವರು ಕರ್ತವ್ಯ ಮುಂದುವರೆಸುತ್ತಾರೆ. ಅದೇ ರೀತಿ ನಾನು ವೇದಿಕೆ ಮೇಲೆ ನಾನು ನನ್ನ ಕರ್ತವ್ಯ ಮಾಡಿದೆ ಎಂದಿದ್ದಾರೆ.

ಸರ್ಕಾರದಿಂದ ಗೌರವ ಇಲ್ಲ: ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಬಳಿಕ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೂಡ ಸಿಗಲಿಲ್ಲ. ಕುಟುಂಬಸ್ಥರು ಮತ್ತು ಕೆಲ ಸ್ನೇಹಿತರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಜೀವನದಲ್ಲಿ ಮತ್ತಷ್ಟು ಸಾಧನೆ ಮಾಡುವ ಗುರಿಯನ್ನು ಹೊಂದಿದ್ದು, ದೇಶದ ಹೆಸರನ್ನು ಮತ್ತಷ್ಟು ಉಜ್ವಲಿಸುವ ಗುರಿ ಹೊಂದಿದ್ದೇನೆ ಎನ್ನುತ್ತಾರೆ.

ಇದನ್ನೂ ಓದಿ: ನಿನ್ನಿಂದ ಆಗದು ಎಂದವರ ಮುಂದೆ ಸಾಧನೆ ಮಾಡಿ ತೋರಿಸಿದ ದಿಟ್ಟೆ: ಹಲವರಿಗೆ ಸ್ಪೂರ್ತಿ ಇವರು

ABOUT THE AUTHOR

...view details