ETV Bharat / bharat

ನಿನ್ನಿಂದ ಆಗದು ಎಂದವರ ಮುಂದೆ ಸಾಧನೆ ಮಾಡಿ ತೋರಿಸಿದ ದಿಟ್ಟೆ: ಹಲವರಿಗೆ ಸ್ಪೂರ್ತಿ ಇವರು

author img

By

Published : Dec 28, 2022, 4:18 PM IST

ಮೂರು ಅಪಘಾತಗಳಿಂದ ಬೆನ್ನು ಮೂಳೆ ಸಮಸ್ಯೆ - ದೈಹಿಕ ದೌರ್ಬಲ್ಯಗಳನ್ನು ಮೆಟ್ಟಿನಿಂತ ಯುವತಿ - ಹೀಗಳೆದವರ ಮುಂದೆ ಸಾಧನೆ

ನಿನ್ನಿಂದ ಆಗದು ಎಂದವರ ಮುಂದೆ ಸಾಧನೆ ಮಾಡಿ ತೋರಿಸಿದ ದಿಟ್ಟೆ; ಹಲವರಿಗೆ ಸ್ಪೂರ್ತಿ ಈಕೆ
after-three-sever-injury-she-climbed-everest-her-story-inspires-many

ಎವರೆಸ್ಟ್​ ಶಿಖರ ಏರಬೇಕು ಎಂಬುದು ಆಕೆಯ ಕನಸು. ಆದರೆ, ಸರಣಿ ಅಪಘಾತಗಳಿಂದಾಗಿ ಆಕೆ ಸರಿಯಾಗಿ ನಡೆಯುವುದು ಅಸಾಧ್ಯವಾಗಿತ್ತು. ಬೇರೆ ಯಾರಾದರೂ ಆಗಿದ್ದರೆ, ಕನಸನ್ನು ಅರ್ಥಕ್ಕೆ ಕೈ ಬಿಡುತ್ತಿದ್ದರು. ಆದರೆ, ಮಿತ್ತಲ್​ ತನ್ನ ಹಣೆ ಬರಹವನ್ನು ತಾನೇ ಬರೆದಳು. ನಿನ್ನಿಂದ ಆಗದು ಎಂದು ಜರಿದವರೆಲ್ಲ ಇಂದು ಆಕೆಯ ಸಾಧನೆಗೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.

ಮೂರು ಭಾರಿ ಅಪಘಾತ: ಫಾರ್ಮಸಿ ಪದವೀಧರೆಯಾಗಿದ್ದ ಮಿತ್ತಲ್​ ಫರ್ಫ್ಯೂಮರಿ ಕಂಪನಿಯಲ್ಲಿ ನಿಯಂತ್ರಣ ವಿಶೇಷಾಧಿಕಾರಿಯಾಗಿದ್ದರು. ಮುಂಬೈ ಮೂಲಕ ಮಿತ್ತಲ್​ 2014ರಲ್ಲಿ ಅಪಘಾತಕ್ಕೆ ಒಳಗಾದರು. ಈ ವೇಳೆ, ಬೆನ್ನುಮೂಳೆ ಕೂಡ ಜರುಗಿತ್ತು. ಮೂರು ತಿಂಗಳ ಸಂಪೂರ್ಣ ವಿಶ್ರಾಂತಿ ಆಕೆಗೆ ಬೇಕಾಯಿತು. ದುರದೃಷ್ಟವಾಶತ್​ ಈ ಘಟನೆ ಮಾಸುವ ಮುನ್ನವೇ 2017ರಲ್ಲಿ ಮತ್ತೆ ಅಪಘಾತಕ್ಕೆ ಒಳಗಾಗಿ ಮತ್ತು ಬೆನ್ನು ಮೂಳೆ ಸಮಸ್ಯೆಗೆ ಗುರಿಯಾದರು.

ಆಕೆಯ ಆರೋಗ್ಯ ಕೂಡ ಗಂಭೀರಗೊಂಡಿತು. ಆಕೆಗೆ ಎದ್ದು ಕುಳಿತು ಕೊಳ್ಳುವುದು ಸಾಹಸವೇ ಆಗಿತ್ತು. ಸಣ್ಣ ವಸ್ತು ಕೊಂಡೊಯ್ಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು. ಮೂಲಭೂತ ಕೆಲಸ ನಿರ್ವಹಣೆಗೂ ಕುಟುಂಬ ಸದಸ್ಯರ ಮೇಲೆ ಅವಲಂಬಿತವಾಗಬೇಕಾಯಿತು. ಅಹಾಯಕಳಾದ ಆಕೆಗೆ ತನ್ನ ಬಗ್ಗೆಯೇ ಜಿಗುಪ್ಸೆ ಮೂಡಿತು. ಇದರಿಂದ ಚೇತರಿಕೆ ಕಾಣುವ ಹೊತ್ತಿಗೆ ಸ್ನಾನದ ಮನೆಯಲ್ಲಿ ಜಾರಿ ಬಿದ್ದು ಮತ್ತೆ ಆಸ್ಪತ್ರೆಗೆ ದಾಖಲಾದಳು.

ಕನಸು ಮಾತ್ರ ಜೀವಂತ: ಇಷ್ಟೆಲ್ಲಾ ಘಟನೆ ನಡೆದರೂ ಆಕೆಗೆ ಎವರೆಸ್ಟ್​ ಏರಬೇಕು ಎಂಬ ಕನಸು ಜೀವಂತವಾಗಿತ್ತು. ಈ ವೇಳೆ ಒಂದು ಕಾಲು ಕಳೆದುಕೊಂಡ ಅರುನಿಮಾ ಎವರೆಸ್ಟ್​​ ಏರಿದ ಕಥೆಯಿಂದ ಪ್ರೇರೇಪಿತರಾದರು. ಅರುನಿಮಾಗೆ ಸಾಧ್ಯವಾಗಿದ್ದು, ತನಗೆ ಏಕೆ ಸಾಧ್ಯವಾಗದು ಎಂದು ಛಲಹೊಂದಿದ ಮಿತ್ತಲ್​ ತನ್ನ ದೇಹದ ನಿಯಂತ್ರಣ ಪಡೆದು ವ್ಯಾಯಾಮ ಆರಂಭಿಸಿದರು.

ಕೆಲವು ದಿನಗಳ ತರಬೇತಿ ನಂತರ, ಏಕಾಂಗಿಯಾಗಿ ಸಣ್ಣ ಶಿಖರಗಳನ್ನು ಏರಲು ಶುರು ಮಾಡಿದರು. ಎಷ್ಟೇ ಸಮಸ್ಯೆ ಎದುರಾದರೂ ಅದನ್ನು ಮೆಟ್ಟಿನಿಂತು ಆಕೆ ಆತ್ಮವಿಶ್ವಾಸವನ್ನು ಹೊಂದಿದಳು. ಈ ವೇಳೆ, ಆಕೆಯ ಕುಟುಂಬಸ್ಥರು ಮತ್ತು ಸಂಬಂಧಿಗಳು ತಡೆದರು. ಆದರೆ, ತನ್ನ ಜೀವದ ಅಪಾಯವನ್ನು ಲೆಕ್ಕಿಸದೇ ಆಕೆ ಕಳೆದ ಏಪ್ರಿಲ್​ನಲ್ಲಿ ಎವರೆಸ್ಟ್​ ಶಿಖರ ಏರಿ ಭಾರತದ ಧ್ವಜ ಹಾರಿಸಿದರು

ಸಾಧನೆ ಬಗ್ಗೆ ಹೆಮ್ಮೆ: 10 ದಿನಗಳ ಕಾಲ ಈ ಯಾನದಲ್ಲಿ ಹವಾಮಾನ ಬದಲಾವಣೆ, ಹಿಮ, ಮಳೆಯಿಂದಾಗಿ ನಮ್ಮ ಎಲ್ಲಾ ಬಟ್ಟೆಗಳು ಒದ್ದೆಯಾದವು. ಹೃದಯ ಬೇನೆ, ತಲೆ ನೋವು, 102 ಡಿಗ್ರಿ ಜ್ವರ ಜೊತೆಗೆ ಆಕ್ಸಿಜನ್​ ಮಟ್ಟ ಕೂಡ ಕ್ಷೀಣಿಸಿತು. ಆದರೂ ನನಗೆ ಏನಾಗುತ್ತದೆ ಎಂಬುದರ ಬಗ್ಗೆ ನಾನು ಚಿಂತಿಸಲಿಲ್ಲ. ನನ್ನ ಆತಂಕವೆಲ್ಲ ಶಿಖರ ಏರಲು ಸಾಧ್ಯವಾಗುತ್ತದೆ ಇಲ್ಲವೋ ಎಂಬುದಾಗಿತ್ತು. ಶಿಖರ ಏರಿ, ಧ್ವಜ ಹಾರಿಸಿದ ಬಳಿಕ ನನಗೆ ಆದ ಸಂತೋಷ ವರ್ಣಿಸಲು ಸಾಧ್ಯವಿಲ್ಲ.

ಶಿಖರದಿಂದ ಕೆಳಗೆ ಇಳಿಯುವಾಗ ನನಗೆ ಜ್ವರದ ತಾಪಮಾನ ಏರಿಕೆ ಆಯಿತು. ಜೊತೆಗೆ ಆಕ್ಸಿಜನ್​ ಮಟ್ಟ ಕೂಡ ಕ್ಷೀಣಿಸಿತು. ಈ ವೇಳೆ, ಹೆಲಿಕಾಪ್ಟರ್​ ರೆಫ್ಯೂಜಿ ಕ್ಯಾಂಪ್​ಗೆ ನನ್ನನ್ನು ಕರೆತರಲಾಯಿತು. ನನ್ನ ಆರೋಗ್ಯ ಸಹಕರಿಸಿದರಿಂದಲೇ ನಾನು ಶಿಖರ ಏರಲು ಸಾಧ್ಯವಾಯಿತು ಎಂದು ಕೊಳ್ಳುತ್ತಿರುವಾಗಲೇ ನನ್ನ ಈ ಸಾಧನೆಗೆ ತಂದೆ ಮೆಚ್ಚಿದರು. ಸಂಬಂಧಿಕರು ಹೊಗಳಿದರು. ಈ ವೇಳೆ ನನಗೆ ನಾನು ಸಾಧನೆ ಮಾಡಿದೆ ಎನ್ನಿಸಿತು. ಇದು ನನ್ನ ಪ್ರಯಾಣದ ಅಂತ್ಯವಲ್ಲ. ಇನ್ನು ಹಲವು ಶಿಖರವನ್ನು ಏರಬೇಕು ಎಂಬುದನ್ನು ಯೋಜಿಸುತ್ತಿದ್ದೇನೆ. ಯಾವುದೇ ದೌರ್ಬಲ್ಯಗಳನ್ನು ಮೆಟ್ಟಿನಿಂತು ಸಾಧನೆ ಮಾಡಬಹುದು ಎಂಬುದಕ್ಕೆ ನಾನು ಸಕಾರಾತ್ಮಕ ನಿದರ್ಶನವಾಗಿದ್ದೇನೆ ಎನ್ನುತ್ತಾರೆ ಮಿತ್ತಲ್​​.

ಇದನ್ನೂ ಓದಿ: ಜಗತ್ತಿನೆಲ್ಲೆಡೆ ಹಕ್ಕಿಗಾಗಿ ಧ್ವನಿ ಎತ್ತಿದ ಮಹಿಳೆಯರು: ಈ ವರ್ಷ ಅಮಿನಿಯ ಹೋರಾಟ ಹೇಗಿತ್ತು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.