ಕರ್ನಾಟಕ

karnataka

ಜಿ20 ಶೃಂಗಸಭೆಯಲ್ಲಿ ಆರ್ಥಿಕ ಪರಿಗಣನೆಗಿಂತ ವಸುಧೈವ ಕುಟುಂಬಕಂ ತತ್ವವೇ ಮೇಲುಗೈ ಸಾಧಿಸಿದೆ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್​ ಭಾಗವ್​

By PTI

Published : Oct 16, 2023, 11:00 AM IST

''ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಇತ್ತೀಚೆಗೆ ನಡೆದಿದ್ದ ಜಿ20 ಶೃಂಗಸಭೆಯಲ್ಲಿ ಆರ್ಥಿಕ ಪರಿಗಣನೆಗಿಂತ ವಸುಧೈವ ಕುಟುಂಬಕಂ ತತ್ವವೇ ಮೇಲುಗೈ ಸಾಧಿಸಿದೆ'' ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.

RSS chief
ಜಿ20 ಶೃಂಗಸಭೆಯಲ್ಲಿ ಆರ್ಥಿಕ ಪರಿಗಣನೆಗಿಂತ ವಸುಧೈವ ಕುಟುಂಬಕಂ ತತ್ತ್ವವೇ ಮೇಲುಗೈ: ಆರ್‌ಎಸ್‌ಎಸ್ ಮುಖ್ಯಸ್ಥ

ಕಥುವಾ (ಜಮ್ಮು ಮತ್ತು ಕಾಶ್ಮೀರ):''ಸನಾತನ ಧರ್ಮವು ಭಾರತೀಯ ಸಂಸ್ಕೃತಿಯ ಸಾರವಾಗಿದೆ. ಇತ್ತೀಚಿನ ಜಿ20 ಶೃಂಗಸಭೆಯಲ್ಲಿ ಆರ್ಥಿಕ ಪರಿಗಣನೆಗಿಂತಲೂ ವಸುಧೈವ ಕುಟುಂಬಕಂ ತತ್ವವೇ ಮೇಲುಗೈ ಸಾಧಿಸಿದೆ'' ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ.

ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘಟನೆಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥರು, ''ಯುಎಸ್, ಯುಕೆ, ರಷ್ಯಾ, ಚೀನಾ ಮತ್ತು ಫ್ರಾನ್ಸ್‌ನಂತಹ ದೇಶಗಳನ್ನು ಒಳಗೊಂಡಿರುವ ಪ್ರಭಾವಿ ಗುಂಪಿನ ಶೃಂಗಸಭೆಯು ಭಾರತದ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯಲ್ಲಿ ನಡೆದಿತ್ತು. 'ವಸುಧೈವ ಕುಟುಂಬಕಂ ಹಾಗೂ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬುದೇ ಜಿ20 ಶೃಂಗಸಭೆಯ ವಿಷಯವಾಗಿತ್ತು. ಭಾರತದಲ್ಲಿ G20 ಉಪಕ್ರಮದ ಯೋಜನೆಯ ಮೂಲಕ ಆರ್ಥಿಕ ವಿಷಯಗಳಿಗಿಂತ ಮಾನವ ಪರಿಗಣನೆಗಳು ಮೇಲುಗೈ ಸಾಧಿಸಿವೆ'' ಎಂದರು.

''ಜಿ20 ಆರ್ಥಿಕ ಮತ್ತು ರಾಜತಾಂತ್ರಿಕ ಅಂಶಗಳ ಮೇಲೆ ಕೇಂದ್ರೀಕೃತವಾಗಿತ್ತು. ಈ ಅಂಶಗಳ ಮೇಲೆ ಹಲವು ಚರ್ಚೆಗಳು ನಡೆದಿವೆ ಎಂದ ಅವರು, ಭಾರತವು ಆರ್ಥಿಕ ಸಿದ್ಧಾಂತದಲ್ಲಿ ನಂಬಿಕೆ ಹೊಂದಿದೆ. ವಸುಧೈವ ಕುಟುಂಬಕಂನ ಮಾನವ ಪರಿಗಣನೆಗಳನ್ನು ಶೃಂಗಸಭೆಯಲ್ಲಿ ಎಲ್ಲರೂ ಒಪ್ಪಿಕೊಂಡಿದ್ದಾರೆ. ವಸುಧೈವ ಕುಟುಂಬಕಂನ ಮಾನವ ತತ್ವಶಾಸ್ತ್ರವು ಇತ್ತೀಚಿನ ಜಿ20ಯಲ್ಲಿ ಆರ್ಥಿಕ ಪರಿಗಣನೆಗಳಿಗಿಂತ ಮೇಲುಗೈ ಸಾಧಿಸಿದೆ. ನಾವು ಇದನ್ನು ಕಾರ್ಯರೂಪಕ್ಕೆ ತರುತ್ತೇವೆ. ನಾವು (ವಸುಧೈವ ಕುಟುಂಬಕಂ) ಅದನ್ನು ಭಾರತದಲ್ಲಿ ಹೊಂದಿದ್ದೇವೆ. ಭಾರತವು ತನ್ನದೇ ಆದ ಪ್ರಾಯೋಗಿಕ ದೃಷ್ಟಿಕೋನವನ್ನು ಹೊಂದಿದೆ. ಅದು ಕೇವಲ ಸಿದ್ಧಾಂತವನ್ನು ಆಧರಿಸಿಲ್ಲ. ನಾವು ಏಕತೆಯನ್ನು ನಂಬುತ್ತೇವೆ. ಅದನ್ನು ನಮ್ಮ ಸಂತರು ಸಾಬೀತುಪಡಿಸಿದ್ದಾರೆ'' ಎಂದು ತಿಳಿಸಿದ್ದಾರೆ.

''ಭಾರತವು 'ಚಿನ್ನದ ಹಕ್ಕಿ' ಇದ್ದಂತೆ, ದೀರ್ಘಕಾಲದವರೆಗೆ ಅಂದ್ರೆ, ಸುಮಾರು 3,000 ವರ್ಷಗಳ ಹಿಂದೆ ಹಾಗೆಯೇ ಇತ್ತು. ಬಡತನ ಇರಲಿಲ್ಲ, ಭಿಕ್ಷಾಟನೆ ಇರಲಿಲ್ಲ. ಎಲ್ಲರೂ ಪ್ರೀತಿಯಿಂದ ಬದುಕುತ್ತಿದ್ದರು. ದಾಳಿಗಳನ್ನು ಎದುರಿಸುತ್ತಿದ್ದರೂ ಭಾರತವು ಮೊದಲ ಸ್ಥಾನದಲ್ಲಿ ಇತ್ತು. ಭಾರತವು ಮಾರ್ಗದರ್ಶನ ನೀಡುವ ಪುರಾತನ ನಿಧಿಯನ್ನು ಹೊಂದಿದೆ ಎಂದು ಜಗತ್ತು ಭಾವಿಸುತ್ತದೆ" ಎಂದು ವಿವರಿಸಿದರು.

ಉಕ್ರೇನ್- ರಷ್ಯಾ ಮತ್ತು ಇಸ್ರೇಲ್-ಹಮಾಸ್ ಸಂಘರ್ಷ ವಿಚಾರ: ಉಕ್ರೇನ್- ರಷ್ಯಾ ಮತ್ತು ಇಸ್ರೇಲ್-ಹಮಾಸ್ ಸಂಘರ್ಷಗಳನ್ನು ಪ್ರಸ್ತಾಪಿಸಿದ ಆರ್‌ಎಸ್‌ಎಸ್ ಮುಖ್ಯಸ್ಥರು, ''ಶಾಂತಿ ಮತ್ತು ಸಂತೋಷವನ್ನು ತರಲು ಜಗತ್ತು ಭಾರತದತ್ತ ನೋಡುತ್ತಿದೆ ಎಂದ ಅವರು, ಘರ್ಷಣೆಗಳು ಮುಂದುವರಿದಿವೆ. ಸಣ್ಣ ಮಕ್ಕಳು ತಮ್ಮ ಶಾಲೆಗೆ ಬಂದೂಕುಗಳನ್ನು ಹೊತ್ತುಕೊಂಡು ಹೋಗುವುದರಿಂದ ಅಪರಾಧಗಳು ಹೆಚ್ಚಿವೆ. ಕುಟುಂಬಗಳು ಶಿಥಿಲಗೊಳ್ಳಲು ಪ್ರಾರಂಭಿಸಿವೆ. ಯಂತ್ರಗಳು ಅಂತಿಮವಾಗಿ ನಮ್ಮನ್ನು ಬದಲಾಯಿಸಬಹುದೆಂದು ಜನರಿಗೆ ಭಯ ಕಾಡುತ್ತಿದೆ. ಜಗತ್ತು ಇದೆಲ್ಲದರಿಂದ ಹೊರಬರಲು ದಾರಿ ಕಂಡುಕೊಳ್ಳುತ್ತಿಲ್ಲ. ಆದರೆ, ಅವರು ಭಾರತದಿಂದ ಪರಿಹಾರದ ದಾರಿ ಕಂಡುಕೊಳ್ಳಬಹುದೆಂದು ನಂಬುತ್ತಾರೆ" ಎಂದು ಮೋಹನ್​ ಭಾಗವತ್ ಹೇಳಿದರು.

ನಂತರ, ಆರ್‌ಎಸ್‌ಎಸ್ ಮುಖ್ಯಸ್ಥರು ಕಥುವಾ ಹೊರವಲಯದಲ್ಲಿರುವ ಜಖಬುದ್ ಗ್ರಾಮವನ್ನು ತಲುಪಿದರು. ಮಂತ್ರಗಳ ಪಠಣ ಮತ್ತು ಘಂಟೆಗಳ ನಾದದ ನಡುವೆ ರಾಮ್ ಲೀಲಾ ಸಂಕೀರ್ಣದ ಬಳಿ ಭಾರತ ಮಾತೆಯ ಪ್ರತಿಮೆಯನ್ನು ಅನಾವರಣಗೊಳಿಸಿದರು. "ನಾವು ಭಾರತ ಮಾತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದೇವೆ. ಇದು ಏಕತೆಯ ಸಂಕೇತವಾಗಿದೆ. ಇದು ಐಕ್ಯತೆ, ಸಂಸ್ಕೃತಿ ಮತ್ತು ಅಭಿವೃದ್ಧಿಯ ಕಡೆಗೆ ತೋರಿಸುತ್ತದೆ. ಗ್ರಾಮ ಒಗ್ಗಟ್ಟಾಗಿ ನಿಂತರೆ ಏನು ಬೇಕಾದರೂ ಮಾಡಬಹುದು" ಎಂದು ಅವರು ಗ್ರಾಮಸ್ಥರಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ಇ-ಶ್ರಮ ಕಾರ್ಡ್ ಯೋಜನೆ ಎಂದರೇನು? ಪ್ರಯೋಜನಗಳ ಬಗ್ಗೆ ಗೊತ್ತಿದೆಯೇ? ನೋಂದಣಿ ಹೇಗೆ? ಸಂಪೂರ್ಣ ಮಾಹಿತಿ

ABOUT THE AUTHOR

...view details