ಕರ್ನಾಟಕ

karnataka

ಶ್ರೀಕೃಷ್ಣ ಜನ್ಮಾಷ್ಟಮಿಯಂದು 500ಕ್ಕೂ ಅಧಿಕ ಮಕ್ಕಳ ಜನನ: ಸಾವಿರ ಗಡಿ ದಾಟುವ ಸಾಧ್ಯತೆ

By ETV Bharat Karnataka Team

Published : Sep 6, 2023, 8:51 PM IST

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಬಿಹಾರದ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 500ಕ್ಕೂ ಅಧಿಕ ಮಕ್ಕಳು ಜನಿಸಿವೆ. ಇದು ರಾತ್ರಿ ವೇಳೆಗೆ ಸಾವಿರ ಗಡಿ ದಾಡುವ ಸಾಧ್ಯತೆ ಇದೆ.

more-than-500-children-will-be-born-in-government-hospitals-in-bihar-on-shri-krishna-janmashtami
ಶ್ರೀಕೃಷ್ಣ ಜನ್ಮಾಷ್ಟಮಿಯಂದು ಬಿಹಾರದಲ್ಲಿ 500ಕ್ಕೂ ಅಧಿಕ ಮಕ್ಕಳ ಜನನ : ಸಾವಿರ ಗಡಿ ದಾಟುವ ಸಾಧ್ಯತೆ

ಪಾಟ್ನಾ(ಬಿಹಾರ): ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ದೇಶಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಸಂಭ್ರಮದ ನಡುವೆ ಬಿಹಾರದಲ್ಲಿ ಸುಮಾರು 400ಕ್ಕೂ ಅಧಿಕ ನವಜಾತ ಶಿಶುಗಳ ಜನನವಾಗಿದೆ ಎಂದು ವರದಿಯಾಗಿದೆ. ಪಾಟ್ನಾ ಜಿಲ್ಲೆಯೊಂದರಲ್ಲೇ ಶಿಶುಗಳ ಜನನ ಸಂಖ್ಯೆ 150ರ ಗಡಿ ಮುಟ್ಟಿದೆ. ವಿವಿಧ ಜಿಲ್ಲೆಗಳ ನವಜಾತ ಶಿಶುಗಳ ಸಂಖ್ಯೆ ರಾತ್ರಿ ವೇಳೆಗೆ ಸಾವಿರದ ಗಡಿ ದಾಟಲಿದೆ ಎಂದು ಅಂದಾಜಿಸಲಾಗಿದೆ.

ಬಿಹಾರದಲ್ಲಿ ನ್ಯೂ ಟ್ರೆಂಡ್​: ಬಿಹಾರದಲ್ಲಿ ಸದ್ಯ ನ್ಯೂ ಟ್ರೆಂಡ್​ ಶುರುವಾಗಿದೆ. ಹಬ್ಬದ ದಿನಗಳಲ್ಲಿ ಹೆರಿಗೆ ದಿನಾಂಕ ನಿಗದಿಯಾಗಿರುವ ಮಹಿಳೆಯರು ಹಬ್ಬದಂದು ಹೆರಿಗೆ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಅಲ್ಲದೇ ಕೆಲವು ಮಹಿಳೆಯರಂತೂ ಹಬ್ಬದ ದಿನದಂದೇ ಮಕ್ಕಳಿಗೆ ಜನ್ಮ ನೀಡಲು ಮುಂದಾಗುತ್ತಿದ್ದಾರೆ. ಸಿಸೇರಿಯನ್​ ಪ್ರಕರಣಗಳಲ್ಲಿ ಈ ರೀತಿ ಹೆರಿಗೆ ದಿನಾಂಕವನ್ನು ಕೆಲವು ದಿನಗಳ ಕಾಲ ಮುಂದೂಡಬಹುದು. ಅಲ್ಲದೇ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಹೆರಿಗೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಹಿಳೆಯರು ಕೃಷ್ಣ ಜನ್ಮಾಷ್ಟಮಿಯಂದೇ ಮಗುವಿಗೆ ಜನ್ಮ ನೀಡಲು ಮುಂದಾಗುತ್ತಿದ್ದಾರೆ. ಸಿಸೇರಿಯನ್​ಗೆ ಒಳಗಾಗುವ ಮಹಿಳೆಯರು ಮಾತ್ರ ಈ ರೀತಿ ತಮ್ಮ ಹೆರಿಗೆ ದಿನಾಂಕವನ್ನು ನಿರ್ಧರಿಸಲು ಸಾಧ್ಯವಿರುತ್ತದೆ.

ಕೃಷ್ಣ ಜನ್ಮಾಷ್ಟಮಿಯಂದು ಮಕ್ಕಳ ಜನನ.. ವೈದ್ಯರ ಪ್ರತಿಕ್ರಿಯೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಟ್ನಾದ ಪ್ರಸೂತಿ ತಜ್ಞೆ ಡಾ. ಸಾರಿಕಾ ರೈ ಅವರು, ಯಾವುದೇ ಹಿಂದು ಹಬ್ಬಗಳನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಅದೇ ರೀತಿ ಕೃಷ್ಣ ಜನ್ಮಾಷ್ಟಮಿಯನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಹೆರಿಗೆಗಳ ಸಂಖ್ಯೆ ಹೆಚ್ಚಾಗಿದೆ. ಸದ್ಯ 10ಕ್ಕೂ ಹೆಚ್ಚು ಹೆರಿಗೆಯನ್ನು ಮಾಡಿದ್ದೇನೆ. 40 ಹೆರಿಗೆ ಇನ್ನೂ ಬಾಕಿ ಇದೆ. ಇದರಲ್ಲಿ ಕೆಲವು ಸಾಮಾನ್ಯ ಹೆರಿಗೆ, ಇನ್ನು ಕೆಲವು ಸಿಸೇರಿಯನ್​ ಪ್ರಕರಣಗಳಾಗಿವೆ. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಅಭಿವೃದ್ದಿ ಆಗಿರುವುದರಿಂದ ಸಿಸೇರಿಯನ್​ ಪ್ರಕರಣಗಳಲ್ಲಿ ಹೆರಿಗೆಯನ್ನು ನಾಲ್ಕೈದು ದಿನಗಳ ಕಾಲ ಮುಂದೂಡಬಹುದು ಎಂದು ಹೇಳಿದರು.

ಒಬ್ಬ ಮಹಿಳೆಯು ಕೃಷ್ಣ ಜನ್ಮಾಷ್ಟಮಿ ನಿಮಿತ್ತ ರಾತ್ರಿ 12 ಗಂಟೆಗೆ ಹೆರಿಗೆ ಮಾಡುವಂತೆಯೂ ಬೇಡಿಕೆ ಇಟ್ಟಿದ್ದಾರೆ. ಇಂತಹ ಸಂದರ್ಭಗಳಲ್ಲಿ ಲಸಿಕೆ ನೀಡಿ ಹೆರಿಗೆಯನ್ನು ಮುಂದೂಡಲು ಕ್ರಮಕೈಗೊಳ್ಳಲಾಗುತ್ತದೆ. ಬಳಿಕ 11.15ರ ಸುಮಾರಿಗೆ ಮಹಿಳೆಯನ್ನು ಚಿಕಿತ್ಸಾ ಕೊಠಡಿಗೆ ಕರೆದೊಯ್ದು 12 ಗಂಟೆಗೆ ಹೆರಿಗೆ ಮಾಡಿಸಲಾಗುತ್ತದೆ ಎಂದು ಹೇಳಿದರು.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಜನಜಂಗುಳಿ: ಹೆರಿಗೆ ನಿಮಿತ್ತ ಗರ್ಭಿಣಿಯರು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ಧಾವಿಸಿದ್ದು, ಇದರಿಂದಾಗಿ ಬಿಹಾರದ ಆಸ್ಪತ್ರೆಗಳಲ್ಲಿ ಜನಜಂಗುಳಿ ಉಂಟಾಗಿದೆ. ಇದರಲ್ಲಿ ಹೆಚ್ಚಿನವರು ಸಾಮಾನ್ಯ ಹೆರಿಗೆಗೆ ಆಗಮಿಸಿದ್ದರೆ, ಇನ್ನುಕೆಲವರು ಸಿಸೇರಿಯನ್​ಗೆ ಆಗಮಿಸಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಒಟ್ಟು 35 ಶಿಶುಗಳ ಜನನವಾಗಿದೆ. ಆರಾರಿಯಾ ಜಿಲ್ಲೆಯಲ್ಲಿ ಒಟ್ಟು 24 ಮಕ್ಕಳ ಜನನವಾಗಿದೆ.ಇದರಲ್ಲಿ 13 ಗಂಡು, 11 ಹೆಣ್ಣು. ಮಕ್ಕಳು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ :ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ : ಮಂಗಳೂರಿನಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ

ABOUT THE AUTHOR

...view details