ಕರ್ನಾಟಕ

karnataka

ನನ್ನ ಮಾತು ಕೇಳಿದ್ರೆ ಕೇಂದ್ರದ ವಿರುದ್ಧ ರೈತರ ಚಳವಳಿ 2 ನಿಮಿಷದಲ್ಲಿ ಕೊನೆ : ದಿಗ್ವಿಜಯ್​ ಸಿಂಗ್​

By

Published : Sep 27, 2021, 10:01 PM IST

ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​​ ರೈತರೊಂದಿಗೆ ಚರ್ಚೆಗೆ ಸಿದ್ಧರಾಗಿರುವುದಾಗಿ ಹೇಳುತ್ತಾರೆ. ಆದರೆ, ಎಂಎಸ್​ಪಿ ಕಾನೂನು ಬಗ್ಗೆ ಮಾತನಾಡುವುದಿಲ್ಲ. ರೈತರೊಂದಿಗೆ ಚರ್ಚಿಸದೇ ಕಾನೂನು ತರಲಾಗಿದೆ ಎಂದರು..

digvijay singh
digvijay singh

ಭೋಪಾಲ್​​(ಮಧ್ಯಪ್ರದೇಶ):ಸದಾ ಒಂದಿಲ್ಲೊಂದು ವಿಷಯವನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್​ ಸಿಂಗ್​ ಇದೀಗ ರೈತರ ಪ್ರತಿಭಟನೆಗೆ ಸಾಥ್​ ನೀಡಿದ್ದು, ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ ಕೇಂದ್ರ ಸರ್ಕಾರ ನನ್ನ ಮಾತು ಕೇಳಿದ್ರೆ ಈ ಪ್ರತಿಭಟನೆ ಎರಡು ನಿಮಿಷದಲ್ಲಿ ಕೊನೆಗೊಳ್ಳಲಿದೆ ಎಂದಿದ್ದಾರೆ.

ಇದನ್ನೂ ಓದಿರಿ:ಗಂಡನ ಮನೆಯವರ ವರದಕ್ಷಿಣೆ ಕಿರುಕುಳ.. ನವವಿವಾಹಿತೆ ಆತ್ಮಹತ್ಯೆಗೆ ಶರಣು..

ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಇಂದು ದೇಶಾದ್ಯಂತ ಪ್ರತಿಭಟನೆ ನಡೆದಿದೆ. ಮಧ್ಯಪ್ರದೇಶದಲ್ಲೂ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಈ ವೇಳೆ ರೈತರ ಪ್ರತಿಭಟನೆಗೆ ಸಾಥ್ ನೀಡಿ ಮಾತನಾಡಿರುವ ದಿಗ್ವಿಜಯ್​ ಸಿಂಗ್​, ರೈತರು ಕಳೆದ 11 ತಿಂಗಳಿಂದ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಿಕ್ಕಟ್ಟು ಕೇವಲ 2 ನಿಮಿಷದಲ್ಲಿ ಬಗೆಹರಿಯಬಹುದು. ಆದರೆ, ಅದಕ್ಕಾಗಿ ಮೋದಿ ಎಂಎಸ್​ಪಿ ಕಾನೂನು ಘೋಷಣೆ ಮಾಡಬೇಕು ಎಂದಿದ್ದಾರೆ.

ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​​ ರೈತರೊಂದಿಗೆ ಚರ್ಚೆಗೆ ಸಿದ್ಧರಾಗಿರುವುದಾಗಿ ಹೇಳುತ್ತಾರೆ. ಆದರೆ, ಎಂಎಸ್​ಪಿ ಕಾನೂನು ಬಗ್ಗೆ ಮಾತನಾಡುವುದಿಲ್ಲ. ರೈತರೊಂದಿಗೆ ಚರ್ಚಿಸದೇ ಕಾನೂನು ತರಲಾಗಿದೆ ಎಂದರು.

ನೂತನ ಕೃಷಿ ಕಾಯ್ದೆ ವಿರೋಧಿಸಿ ಕಳೆದ 11 ತಿಂಗಳಿಂದ ವಿವಿಧ ರೈತ ಸಂಘಟನೆಗಳು ಮೇಲಿಂದ ಮೇಲೆ ಪ್ರತಿಭಟನೆ ನಡೆಸುತ್ತಿವೆ. ಇಂದು ದೇಶಾದ್ಯಂತ 50ಕ್ಕೂ ಅಧಿಕ ರೈತ ಸಂಘಟನೆಗಳು ರಸ್ತೆಗಿಳಿದು ಉಗ್ರ ಹೋರಾಟ ನಡೆಸಿದವು.

ABOUT THE AUTHOR

...view details