ಕರ್ನಾಟಕ

karnataka

ದೇಶದಲ್ಲಿ ಏರುತ್ತಲೇ ಸಾಗುತ್ತಿದೆ ಕೋವಿಡ್; ಕಳೆದ 24 ಗಂಟೆಗಳಲ್ಲಿ 16,103 ಹೊಸ ಕೇಸ್ ಪತ್ತೆ

By

Published : Jul 3, 2022, 10:47 AM IST

ದೇಶದಲ್ಲಿ ಮಹಾಮಾರಿ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ಇಂದಿನ ಮಾಹಿತಿ ತಿಳಿಯೋಣ.

Coronavirus
Coronavirus

ನವದೆಹಲಿ: ಭಾರತದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೋವಿಡ್ ಸೋಂಕಿತರ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 16,103 ಹೊಸ ಕೇಸ್​​​ಗಳು ದೃಢಪಟ್ಟಿದ್ದು, 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದೊಂದು ದಿನದಲ್ಲಿ 13,929 ಜನರು ಕೋವಿಡ್​​ನಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಈವರೆಗೆ ಒಟ್ಟು 4,28,65,519 ಜನರು ಗುಣಮುಖರಾಗಿದ್ದಾರೆ. ಸದ್ಯಕ್ಕೆ ದೇಶದಲ್ಲಿ 1,11,711 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸಾವಿನ ಸಂಖ್ಯೆ 5,25,199 ಕ್ಕೆ ಏರಿಕೆಯಾಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಒಂದು ದಿನದಲ್ಲಿ ಒಟ್ಟು 3,76,720 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪ್ರಸ್ತುತ ಚೇತರಿಕೆಯ ಪ್ರಮಾಣವು ಪ್ರಸ್ತುತ ಶೇ 98.54 ರಷ್ಟಿದೆ. ಇಲ್ಲಿಯವರೆಗೆ 1,97,95,72,963 ಕೋಟಿ ಕೊರೊನಾ ಡೋಸ್​ಗಳನ್ನು ನೀಡಲಾಗಿದೆ. ನಿನ್ನೆ ಜನ 10,10,652 ಡೋಸ್​ ಲಸಿಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿ ಪ್ರಮುಖ ನಗರಗಳ ಇಂದಿನ ತೈಲ ಬೆಲೆ

ABOUT THE AUTHOR

...view details