ಕರ್ನಾಟಕ

karnataka

ಜೀವಕ್ಕೆ ಕುತ್ತು ತಂದ ಸೆಲ್ಫಿ... ಬೆಟ್ಟದಿಂದ ಬಿದ್ದು ಯುವತಿ ಸಾವು

By

Published : Sep 3, 2019, 1:28 AM IST

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವತಿಯೋರ್ವಳು ಆಯಾತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಗುಜರಾತ್​ನ ಪಾವಗಢ್​ ದೇವಸ್ಥಾನದ ಬಳಿ ನಡೆದಿದೆ.

ಬೆಟ್ಟದಿಂದ ಬಿದ್ದು ಯುವತಿ ಸಾವು

ಪಂಚಮಹಲ್(ಗುಜರಾತ್​):ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವತಿಯೋರ್ವಳು ಬೆಟ್ಟದಿಂದ ಕಾಲುಜಾರಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಗುಜರಾತ್​ನ ಪಂಚಮಹಲ್​​ನಲ್ಲಿ ನಡೆದಿದೆ.

ಬೆಟ್ಟದಿಂದ ಬಿದ್ದು ಯುವತಿ ಸಾವು

ಮೂಲತ ಮಧ್ಯಪ್ರದೇಶದ ಥಂಡ್ಲಾ ಪಟ್ಟಣದವಳಾಗಿದ್ದ 25 ವರ್ಷದ ವಿನಿತಾ ಸೋಲಂಕಿ ನಿನ್ನೆ ಗುಜರಾತ್​ನ ಪಾವಗಢ್​​​​ನಲ್ಲಿರುವ ಭದ್ರಾ ಮಹಾಕಾಳಿ ದೇವಸ್ಥಾನಕ್ಕೆ ತನ್ನ ಕುಟುಂಬದೊಂದಿಗೆ ಆಗಮಿಸಿದ್ದಳು. ಈ ವೇಳೆ ಬೆಟ್ಟದ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಆಕೆ ಮುಂದಾದಾಗ ಆಯಾತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಈ ವೇಳೆ ಆಕೆಯೊಂದಿಗೆ ಅತ್ತೆ ಮತ್ತು ಎರಡು ವರ್ಷದ ಮಗು ಇತ್ತು ಎಂದು ತಿಳಿದು ಬಂದಿದೆ.

ಪ್ರತ್ಯಕ್ಷದರ್ಶಿಗಳು ತಿಳಿಸಿರುವ ಪ್ರಕಾರ, ವಿನಿತಾ ಸೋಲಂಕಿ ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸೆಲ್ಫಿ ಕ್ಲಿಕ್ ಮಾಡಿಕೊಳ್ಳುವ ಉದ್ದೇಶದಿಂದ ದೇವಸ್ಥಾನಕ್ಕೆ ತೆರಳುವ ಕಿರಿದಾದ ದಾರಿಯಲ್ಲಿ ನಿಂತಿದ್ದಳು.ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಸುಮಾರು 200 ಅಡಿಗಳಷ್ಟು ಕೆಳಗೆ ಹೋಗಿದ್ದಾಳೆ ಎಂದು ತಿಳಿಸಿದ್ದಾರೆ. ಇಲ್ಲಿಯವರೆಗೆ ಆಕೆಯ ಮೃತದೇಹ ಪತ್ತೆ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದು, ಬೆಳಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಗುಜರಾತ್​ನ ಪಾವಗಢ್​​​​ನಲ್ಲಿರುವ ಭದ್ರಾ ಮಹಾಕಾಳಿ ದೇವಸ್ಥಾನ ಪ್ರಸಿದ್ಧ ದೇಗುಲಗಳಲ್ಲಿ ಒಂದಾಗಿದ್ದು, ಮಳೆಗಾಲದಲ್ಲಿ ಹೆಚ್ಚನ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

Intro:Body:

ಜೀವಕ್ಕೆ ಕುತ್ತು ತಂದ ಸೆಲ್ಫಿ... ಬೆಟ್ಟದಿಂದ ಬಿದ್ದು ಯುವತಿ ಸಾವು

ಪಂಚಮಹಲ್(ಗುಜರಾತ್​): ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವತಿಯೋರ್ವಳು ಬೆಟ್ಟದಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಗುಜರಾತ್​ನ ಪಂಚಮಹಲ್​​ನಲ್ಲಿ ನಡೆದಿದೆ.

ಮೂಲತ ಮಧ್ಯಪ್ರದೇಶದ ಥಂಡ್ಲಾ ಪಟ್ಟಣದವಳಾಗಿದ್ದ 25 ವರ್ಷದ ವಿನಿತಾ ಸೋಲಂಕಿ ನಿನ್ನೆ ಗುಜರಾತ್​ನ ಪಾವಗಢ್​​​​ನಲ್ಲಿರುವ ಭದ್ರಾ ಮಹಾಕಾಳಿ ದೇವಸ್ಥಾನಕ್ಕೆ ತನ್ನ ಕುಟುಂಬದೊಂದಿಗೆ ಆಗಮಿಸಿದ್ದಳು. ಈ ವೇಳೆ ಬೆಟ್ಟದ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಆಕೆ ಮುಂದಾದಾಗ ಆಯಾತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಈ ವೇಳೆ ಆಕೆಯೊಂದಿಗೆ ಅತ್ತೆ ಮತ್ತು ಎರಡು ವರ್ಷದ ಮಗು ಇತ್ತು ಎಂದು ತಿಳಿದು ಬಂದಿದೆ.

ಪ್ರತ್ಯಕ್ಷದರ್ಶಿಗಳು ತಿಳಿಸಿರುವ ಪ್ರಕಾರ, ವಿನಿತಾ ಸೋಲಂಕಿ ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸೆಲ್ಫಿ ಕ್ಲಿಕ್ ಮಾಡಿಕೊಳ್ಳುವ ಉದ್ದೇಶದಿಂದ ದೇವಸ್ಥಾನಕ್ಕೆ ತೆರಳುವ ಕಿರಿದಾದ ದಾರಿಯಲ್ಲಿ ನಿಂತಿದ್ದಳು.ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಸುಮಾರು 200 ಅಡಿಗಳಷ್ಟು ಕೆಳಗೆ ಹೋಗಿದ್ದಾಳೆ ಎಂದು ತಿಳಿಸಿದ್ದಾರೆ. ಇಲ್ಲಿಯವರೆಗೆ ಆಕೆಯ ಮೃತದೇಹ ಪತ್ತೆ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದು, ಬೆಳಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಗುಜರಾತ್​ನ ಪಾವಗಢ್​​​​ನಲ್ಲಿರುವ ಭದ್ರಾ ಮಹಾಕಾಳಿ ದೇವಸ್ಥಾನ ಪ್ರಸಿದ್ಧ ದೇಗುಲಗಳಲ್ಲಿ ಒಂದಾಗಿದ್ದು, ಮಳೆಗಾಲದಲ್ಲಿ ಹೆಚ್ಚನ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

Conclusion:

ABOUT THE AUTHOR

...view details