ಕರ್ನಾಟಕ

karnataka

ಐಟಿ ದಾಳಿ ಪ್ರಕರಣದ ವಿಚಾರಣೆ ಕೈಬಿಡಲು ಸುಪ್ರೀಂ​ ನಕಾರ: ಡಿಕೆಶಿಗೆ ಮತ್ತೆ ಸಂಕಷ್ಟ

By

Published : Aug 27, 2020, 4:51 PM IST

ಡಿಕೆ ಶಿವಕುಮಾರ್​ ದೆಹಲಿ ಹಾಗೂ ರಾಜ್ಯದಲ್ಲಿನ ನಿವಾಸದ ಮೇಲೆ 2017ರಲ್ಲಿ ನಡೆದ ಐಟಿ ದಾಳಿ ಪ್ರಕರಣದ ವಿಚಾರಣೆ ಕೈಬಿಡಲು ಸುಪ್ರೀಂಕೋರ್ಟ್​ ನಿರಾಕರಿಸಿದೆ.

DK Shivakumar
DK Shivakumar

ನವದೆಹಲಿ:ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿವಾಸದ ಮೇಲಿನ​​​​ ಐಟಿ ದಾಳಿ ಪ್ರಕರಣದ ವಿಚಾರಣೆ ರದ್ದುಗೊಳಿಸುವಂತೆ ಕೋರಿ ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್​​​ ಕೇಸ್​ ಕೈಬಿಡಲು ನಿರಾಕರಿಸಿದೆ.

ಕಾಂಗ್ರೆಸ್​ನ ಹಿರಿಯ ಮುಖಂಡ ಡಿಕೆ ಶಿವಕುಮಾರ್​​ ನಿವಾಸದ ಮೇಲೆ 2017ರಲ್ಲಿ ಐಟಿ ದಾಳಿ ನಡೆಸಲಾಗಿತ್ತು. ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪದಿಂದ ಕೈಬಿಡುವಂತೆ ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ಈಗಾಗಲೇ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಇದಾದ ಬಳಿಕ ಈ ವಿಚಾರ ರದ್ದುಗೊಳಿಸುವಂತೆ ಡಿಕೆ ಶಿವಕುಮಾರ್​ ಪರ ವಕೀಲರು ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಇಂದು ವಿಚಾರಣೆ ನಡೆಸಿರುವ ಸರ್ವೋಚ್ಛ ನ್ಯಾಯಾಲಯ ಪ್ರಕರಣ ಕೈಬಿಡಲು ನಿರಾಕರಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ ದೆಹಲಿ ಮತ್ತು ಬೆಂಗಳೂರಿನ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಶಿವಕುಮಾರ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 120-'ಬಿ' (ಅಪರಾಧಿಕ ಒಳಸಂಚು) ಅನುಸಾರ ಪ್ರಕರಣ ದಾಖಲಿಸಿತ್ತು. ಐಟಿ ದಾಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದಿಂದ ನನ್ನನ್ನು ಕೈಬಿಡಬೇಕು ಎಂದು ಕೋರಿ ಡಿ.ಕೆ.ಶಿವಕುಮಾರ್ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು.

ABOUT THE AUTHOR

...view details