ETV Bharat / state

ಹಾವೇರಿಯಲ್ಲಿ ಬಸವರಾಜ್​ ಬೊಮ್ಮಾಯಿ ಪರ ಚುನಾವಣಾ ಚಾಣಕ್ಯನಿಂದ ಭರ್ಜರಿ ರೋಡ್​ ಶೋ - Amit Shah Road Show

author img

By ETV Bharat Karnataka Team

Published : May 2, 2024, 7:03 AM IST

Updated : May 2, 2024, 9:11 AM IST

HAVERI
ಬಸವರಾಜ್​ ಬೊಮ್ಮಾಯಿ ಪರ ಅಮಿತ್​​ ಶಾ ಮತ ಪ್ರಚಾರ

ಬುಧವಾರ ಕೇಂದ್ರ ಗೃಹಸಚಿವ ಅಮಿತ್ ಶಾ ಹಾವೇರಿ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿ ಪರ ರೋಡ್​ ಶೋ ನಡೆಸುವ ಮೂಲಕ ಮತ ಪ್ರಚಾರ ಮಾಡಿದರು.

ಚಾಣಕ್ಯನಿಂದ ಭರ್ಜರಿ ರೋಡ್​ ಶೋ

ಹಾವೇರಿ: ಕೇಂದ್ರ ಗೃಹಸಚಿವ ಅಮಿತ್​​ ಶಾ ಹಾವೇರಿಯ ರಾಣೆಬೆನ್ನೂರು ನಗರದಲ್ಲಿ ಬುಧವಾರ ರೋಡ್ ಶೋ ನಡೆಸಿದರು. ನಗರದ ಆರ್‌ಟಿಜಿ ಎಸ್​ ಕಾಲೇಜು ಮೈದಾನದ ಹೆಲಿಪ್ಯಾಡ್‌ಗೆ ಆಗಮಿಸಿದ ಅಮಿತ್ ಶಾ ರನ್ನು ಹಾವೇರಿ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಬರಮಾಡಿಕೊಂಡರು. ನಂತರ ರಾಣೆಬೆನ್ನೂರಿನ ಕುರುಬಗೇರಿಯಲ್ಲಿ ತೆರೆದ ವಾಹನದಲ್ಲಿ ಬೃಹತ್ ರೋಡ್ ಶೋ ನಡೆಸಿದ ಅಮಿತ್ ಶಾ, ಮತದಾರರಲ್ಲಿ, ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು.

ದಾರಿ ಉದ್ದಕ್ಕೂ ಜನರತ್ತ ಕೈಬೀಸಿ ಕಾರ್ಯಕರ್ತರನ್ನು ಹುರಿದುಂಬಿಸಿದರೆ, ಕಾರ್ಯಕರ್ತರು ಪುಷ್ಪಾರ್ಚನೆ ಮಾಡುವ ಮೂಲಕ ಚುನಾವಣಾ ಚಾಣಕ್ಯನನ್ನು ಸ್ವಾಗತಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ನಡೆದ ರೋಡ್​ ಶೋ ಅಶೋಕ್​​ ವೃತ್ತದವರೆಗೆ ಸಾಗಿತು. ಅಲ್ಲಿ ಅಮಿತ್ ಶಾ ಬೊಮ್ಮಾಯಿ ಪರ ಮತಯಾಚನೆ ಮಾಡಿದರು. ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ಅಮಿತ್ ಶಾ, ನರೇಂದ್ರ ಮೋದಿ, ಬಸವರಾಜ್ ಬೊಮ್ಮಾಯಿ ಪರ ಜಯಘೋಷ ಹಾಕಿದರು.

ರೋಡ್​ ಶೋ
ರೋಡ್​ ಶೋ

ಈ ಮಧ್ಯೆ 'ಕಾರ್ಯಕರ್ತರೇ ಮತದಾರರೇ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದಕ್ಕೆ ನಿಮಗೆ ಧನ್ಯವಾದ' ಎಂದು ಅಮಿತ್ ಶಾ ಕೈ ಮುಗಿದರು. ಹೆಚ್ಚು ಪ್ರಮಾಣದಲ್ಲಿ ಬಂದಿರುವ ನಿಮ್ಮೆಲ್ಲರಿಗೆ ಆಭಾರಿಯಾಗಿರುವೆ. ಪ್ರಧಾನಿ ನರೇಂದ್ರ ಮೋದಿ ಈ ದೇಶವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ. ಅವರಿಗೆ 400 ಸಂಸದರ ಅವಶ್ಯಕತೆ ಇದೆ. ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಒಳ್ಳೆಯ ನಾಯಕರು. ಅವರ ಅವಶ್ಯಕತೆ ದೇಶಕ್ಕಿದೆ, ಅವರನ್ನು ಗೆಲ್ಲಿಸಿ ಕಳಿಸಿ' ಎಂದು ಮತದಾರರಲ್ಲಿ ಶಾ ಮನವಿ ಮಾಡಿದರು.

ಮೆರವಣಿಗೆಯಲ್ಲಿ ಅಮಿತ್​ ಶಾ ಅವರಿಗೆ, ಬಸವರಾಜ್ ಬೊಮ್ಮಾಯಿ, ಮಾಜಿ ಸಚಿವ ಬಿ.ಸಿ.ಪಾಟೀಲ್ ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ್ ಪೂಜಾರ್ ಸಾಥ್​ ನೀಡಿದರು.

ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆ: ಶಾಸಕ ರಾಜು ಕಾಗೆ ಅವರಿಗೆ ನೋಟಿಸ್ ಜಾರಿ - MLA Raju Kage

Last Updated :May 2, 2024, 9:11 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.