ETV Bharat / state

ಗಣರಾಜ್ಯೋತ್ಸವ ಪರೇಡ್ ವೇಳೆ ಸಿಎಂ ಬಳಿ ಏಕಾಏಕಿ ನುಗ್ಗಲು ಯತ್ನಿಸಿದ ವ್ಯಕ್ತಿ; ವಶಕ್ಕೆ ಪಡೆದ ಪೊಲೀಸರು

author img

By ETV Bharat Karnataka Team

Published : Jan 26, 2024, 4:36 PM IST

ಸಿಎಂ ಬಳಿ ಏಕಾಏಕಿ ನುಗ್ಗಲು ಯತ್ನಿಸಿದ ವ್ಯಕ್ತಿ
ಸಿಎಂ ಬಳಿ ಏಕಾಏಕಿ ನುಗ್ಗಲು ಯತ್ನಿಸಿದ ವ್ಯಕ್ತಿ

ಗಣರಾಜ್ಯೋತ್ಸವ ಪರೇಡ್ ವೇಳೆ ಸಿಎಂ ಬಳಿ ಏಕಾಏಕಿ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಗಣರಾಜ್ಯೋತ್ಸವ ಪರೇಡ್ ವೇಳೆ ಸಿಎಂ ಬಳಿ ಏಕಾಏಕಿ ನುಗ್ಗಲು ಯತ್ನಿಸಿದ ವ್ಯಕ್ತಿ

ಬೆಂಗಳೂರು : ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ 75ನೇ ಗಣರಾಜ್ಯೋತ್ಸವ ವೇಳೆ ವ್ಯಕ್ತಿಯೊಬ್ಬ ಸಿಎಂ ಬಳಿ ನುಗ್ಗಲು ಯತ್ನಿಸಿದ ಘಟನೆ ಶುಕ್ರವಾರ ನಡೆಯಿತು. ಮೈಸೂರು ಮೂಲದ ಪರುಶರಾಮ್ ಎಂಬಾತ ಸಿಎಂ ಬಳಿ ಏಕಾಏಕಿ ನುಗ್ಗಲು ಯತ್ನಿಸಿದ್ದಾರೆ. ಮೈಸೂರು ಮೂಲದ ಪರಶುರಾಮ್ ಕರ ಪತ್ರ ಹಿಡಿದು ಸಿಎಂ ಬಳಿ ನುಗ್ಗಲು ಯತ್ನಿಸಿದ್ದು, ಕೂಡಲೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಕೆಪಿಎಸ್​ಸಿ ಆರ್ಡರ್ ವಿಳಂಬದ ಬಗ್ಗೆ ಸಿಎಂಗೆ ಮನವಿ ಸಲ್ಲಿಸಲು ಬಂದಿದ್ದ ಪರಶುರಾಮ್ ಏಕಾಏಕಿ ನುಗ್ಗಲು ಯತ್ನಿಸಿದ್ದಾರೆ.

ಪರೇಡ್ ಮಧ್ಯದಲ್ಲಿ ಮನವಿ ಪತ್ರವೊಂದನ್ನು ಪ್ರದರ್ಶಿಸಿದ್ದಾರೆ. ಮನವಿ ಪತ್ರ ಪ್ರದರ್ಶಿಸುತ್ತಿದ್ದ ಹಾಗೆಯೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಕೆಪಿಎಸ್​ಸಿ ನೇಮಕಾತಿ ಆರ್ಡರ್ ಆಗಿದೆ. ಆದರೆ ವಿಳಂಬ ಮಾಡ್ತಿದ್ದಾರೆ. ಸಿಎಂ ಗಮನಕ್ಕೆ ತರೋಕೆ ನನ್ನನ್ನು ಬಿಡ್ತಿಲ್ಲ ಎಂದ ಅವರು ಕರ ಪತ್ರವನ್ನು ಇದೇ ವೇಳೆ ಪ್ರದರ್ಶಿಸಿ ಆಕ್ರೋಶ ಹೊರ ಹಾಕಿದರು.

ಆಗ ಕೂಡಲೇ ಎಚ್ಚೆತ್ತ ಪೊಲೀಸರು ಪರುಶುರಾಮ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದರು. ಪರಶುರಾಮ್ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತ್ತಿದ್ದರು. ಪರೇಡ್ ನಡೆಯುವ ಸಂದರ್ಭ ಏಕಾಏಕಿ ಸಿಎಂ ಬಳಿ ಮನವಿ ಸಲ್ಲಿಸಲು ಯತ್ನಿಸಿದ್ದಾರೆ. ಪರುಶುರಾಮ್ ಅವರ ಅಳಿಯನಿಗೆ ಕೆಪಿಎಸ್​ಸಿ ನೇಮಕಾತಿ ಆರ್ಡರ್ ವಿಳಂಬವಾಗಿತ್ತು. ಈ ಬಗ್ಗೆ ಸಿಎಂಗೆ ಅವರು ಮನವಿ ಸಲ್ಲಿಸಲು ಬಂದಿದ್ದರು. ಆದರೆ ಸಿಎಂ ಬಳಿ ಪೊಲೀಸರು ಬಿಡದಿದ್ದಾಗ ಗಣರಾಜ್ಯೋತ್ಸವ ಪರೇಡ್ ಮಧ್ಯೆದಲ್ಲೇ ನುಗ್ಗಲು ಯತ್ನಿಸಿದ್ದಾರೆ. ಗಣರಾಜ್ಯೋತ್ಸವ ಪರೇಡ್ ಮಧ್ಯೆದಲ್ಲಿ ಮನವಿ ಪತ್ರ ಪ್ರದರ್ಶಿಸಿದ್ದಾರೆ. ಅವರು ಮನವಿ ಪತ್ರ ಪ್ರದರ್ಶಿಸುತ್ತಿದ್ದ ಹಾಗೆಯೇ ಪೊಲೀಸರು ಅವರನ್ನ ವಶಕ್ಕೆ ಪಡೆದಿದ್ದಾರೆ.

ಪ್ರವೇಶಕ್ಕೆ ಬಿಡದ ಪೊಲೀಸರು : ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮತ್ತೊಂದು ಲೋಪವಾಗಿದ್ದು, ಪಾಸ್ ಇದ್ದರೂ ಪೊಲೀಸರು ಪಿಳ್ಳಣ್ಣ ಗಾರ್ಡನ್ ಬಿಬಿಎಂಪಿ ಜೂನಿಯರ್ ಕಾಲೇಜ್ ಪ್ರಿನ್ಸಿಪಲ್ ಮತ್ತು ಸಾವಿತ್ರಿಬಾ ಪುಲೆ ಡ್ಯಾನ್ಸ್ ಕೋರಿಯೋಗ್ರಾಪರ್ ಅವರನ್ನು ಒಳಗೆ ಪ್ರವೇಶಿಸಲು ಬಿಟ್ಟಿಲ್ಲ. ಪ್ರಥಮ ಪ್ರಶಸ್ತಿ ಲಭಿಸಿದ್ದರೂ ನಮಗೆ ಪಡೆದುಕೊಳ್ಳಲು ಬಿಟ್ಟಿಲ್ಲ ಎಂದು ಪೊಲೀಸರೊಂದಿಗೆ ಪ್ರಿನ್ಸಿಪಲ್ ಮತ್ತು ಕೋರಿಯೋಗ್ರಾಫರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ಜಾತಿ, ಧರ್ಮಗಳಂತಹ ಭಾವನಾತ್ಮಕ ವಿಷಯಗಳ ದುರ್ಬಳಕೆ ಸಂವಿಧಾನಕ್ಕೆ ಬಗೆವ ದ್ರೋಹ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.