ETV Bharat / state

ಉತ್ತಮ ಆರೋಗ್ಯಕ್ಕಾಗಿ ಕುಮಾರಸ್ವಾಮಿ, ವಿಜಯೇಂದ್ರ ಮದ್ಯ ಸೇವಿಸುವುದು ಬಿಡಲಿ: ಸುರ್ಜೇವಾಲಾ - Surjewala

author img

By ETV Bharat Karnataka Team

Published : Apr 25, 2024, 8:10 PM IST

Updated : Apr 25, 2024, 10:54 PM IST

ಮದ್ಯದ ಬೆಲೆ ಏರಿಕೆಯಿಂದಾಗಿ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಒದಗಿಸಲಾಗುತ್ತಿದೆ ಎಂಬ ಆರೋಪಕ್ಕೆ ರಣದೀಪ್‌ಸಿಂಗ್ ಸುರ್ಜೇವಾಲಾ ಟಾಂಗ್ ಕೊಟ್ಟರು.

Randeep Singh Surjewala spoke at a press conference.
ಕಾಂಗ್ರೆಸ್ ಹಿರಿಯ ನಾಯಕ ರಣದೀಪ ಸಿಂಗ್ ಸುರ್ಜೆವಾಲಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಮಾತನಾಡಿದರು.

ಚಿಕ್ಕೋಡಿ: ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಅವರಿಗೆ ಮದ್ಯ ಕುಡಿಯುವ ಚಟವಿದ್ದರೆ ಕುಡಿಯುವುದು ನಿಲ್ಲಿಸಲಿ. ಇದರಿಂದ ಅವರ ಆರೋಗ್ಯ ಚೆನ್ನಾಗಿರುತ್ತದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಟೀಕಿಸಿದರು.

ಗುರುವಾರ ಚಿಕ್ಕೋಡಿ ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಬೆಲೆ ಏರಿಕೆ, ನೋಟ್ ಬ್ಯಾನ್, ಕೊರೋನಾದಲ್ಲಿ ಸಾವನ್ನಪ್ಪಿರುವ ಪತ್ನಿಯರ ಹಾಗೂ ದೆಹಲಿಯಲ್ಲಿ ನಡೆದ ರೈತ ಹೋರಾಟದಲ್ಲಿ ಮೃತಪಟ್ಟವರ ರೈತರ ಪತ್ನಿಯರ ಮಂಗಳಸೂತ್ರವನ್ನು ಮೋದಿ ಸರ್ಕಾರ ಕಸಿದುಕೊಂಡಿದೆ. ದೇಶದಲ್ಲಿ ಬೆಲೆ ಏರಿಕೆಯಿಂದ ಮಹಿಳೆಯರು ಮಂಗಳ ಸೂತ್ರ ಮಾರಿದ್ದಾರೆ. ಈ ಮೂಲಕ ಲಕ್ಷಾಂತರ ಮಹಿಳೆಯರ ಮಂಗಳ ಸೂತ್ರ ಕಸಿಯಲಾಗಿದೆ. ಮಂಗಳಸೂತ್ರ ಕಸಿದುಕೊಂಡಿದ್ದು ಮೋದಿ ಸರ್ಕಾರ. ಬೇರಾವುದೇ ಸರ್ಕಾರ ಅಲ್ಲ ಎಂದು ದೂರಿದರು.

ಗ್ಯಾರಂಟಿ ತಂದಿದ್ದಕ್ಕೆ ಬಿಜೆಪಿ, ಜೆಡಿಎಸ್​ಗೆ ಹೊಟ್ಟೆಕಿಚ್ಚು: ಗ್ಯಾರಂಟಿಗಳು ಜನರ ಜೀವನ ಬದಲಾಯಿಸಿವೆ. ಹೀಗಾಗಿ ಬಿಜೆಪಿ, ಜೆಡಿಎಸ್‌ನವರಿಗೆ ಹೊಟ್ಟೆಕಿಚ್ಚು. ಕರ್ನಾಟಕದಲ್ಲಿ ಎರಡು ಮಾಡೆಲ್ ಇದೆ. ಒಂದು ಕಾಂಗ್ರೆಸ್ ಗ್ಯಾರಂಟಿ ಮಾಡೆಲ್. ಇನ್ನೊಂದು ಭಾರತೀಯ ಚೊಂಬು ಪಾರ್ಟಿಯ ಮಾಡೆಲ್. ಬಿಜೆಪಿ, ಜೆಡಿಎಸ್ ಡಿಎನ್ಎ ರೈತರ, ಯುವಕರ,ಮಹಿಳೆಯರ, ಬಡವರ ವಿರೋಧಿಯಾಗಿದೆ. ಬಡ ಜನರಿಗೆ ಗ್ಯಾರಂಟಿಯ ಲಾಭ ಸಿಕ್ಕಿದೆ ಎಂದು ಹೇಳಿದರು.

ಇದನ್ನೂಓದಿ: ಏ.27ಕ್ಕೆ ಬೆಳಗಾವಿ ಲೋಕಸಭೆ ಅಖಾಡಕ್ಕೆ ಮೋದಿ ಎಂಟ್ರಿ: ಜಿಲ್ಲೆಯಲ್ಲಿ ನಮೋ ವಾಸ್ತವ್ಯಕ್ಕೆ ಸಕಲ ಸಿದ್ಧತೆ - Modi will visit to Belgavi

Last Updated :Apr 25, 2024, 10:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.