ETV Bharat / state

ಪೈಪ್​​​​ಲೈನ್ ಕೊರೆದು 9ಲಕ್ಷ ರೂ ಮೌಲ್ಯದ ಡಿಸೇಲ್ ಕಳ್ಳತನ: ಪೊಲೀಸ​ರಿಂದ ತನಿಖೆ - Diesel stolen

author img

By ETV Bharat Karnataka Team

Published : Mar 22, 2024, 9:38 PM IST

Dharmasthala Police Station
ಧರ್ಮಸ್ಥಳ ಪೊಲೀಸ್ ಠಾಣೆ

ಮಂಗಳೂರು, ಹಾಸನ ಮತ್ತು ಬೆಂಗಳೂರಿಗೆ ಸರಬರಾಜು ಆಗುವ ಡಿಸೇಲ್ ಪೈಪ್ ಲೈನ್ ಕೊರೆದು 9 ಲಕ್ಷ ರೂ ಮೌಲ್ಯದ ಡಿಸೇಲ್ ಕಳ್ಳತನ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪುದುವೆಟ್ಟು ಗ್ರಾಮದ ಆಲಡ್ಕದಲ್ಲಿ ನಡೆದಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಬೆಳ್ತಂಗಡಿ(ದಕ್ಷಿಣ ಕನ್ನಡ): ಡಿಸೇಲ್ ಪೈಪ್ ಲೈನ್ ಕೊರೆದು 9ಲಕ್ಷ ರೂ ಮೌಲ್ಯದ ಡಿಸೇಲ್ ಕಳ್ಳತನ ಮಾಡಿರುವ ಘಟನೆ ಬೆಳ್ತಂಗಡಿ ಪುದುವೆಟ್ಟು ಗ್ರಾಮದ ಆಲಡ್ಕದಲ್ಲಿ ನಡೆದಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರು, ಹಾಸನ ಮತ್ತು ಬೆಂಗಳೂರಿಗೆ ಪೈಪ್ ಮೂಲಕ ಡಿಸೇಲ್ ಸರಬರಾಜು ಆಗುತ್ತಿದ್ದು ಮಾ.16ರ ರಾತ್ರಿಯಿಂದ ಮಾ.19ರ ರಾತ್ರಿಯ ಮಧ್ಯೆ ಅವಧಿಯಲ್ಲಿ ಕಳ್ಳರು ಡಿಸೇಲ್ ಪೈಪ್​ ಲೈನ್​​​ನಲ್ಲಿ ರಂಧ್ರ ಕೊರೆದು 2.5 ಇಂಚು ಹೆಚ್ ಡಿಪಿಇ ಪೈಪ್ ಮೂಲಕ ಅಂದಾಜು 12,000 ಲೀಟರ್ ಡಿಸೇಲ್​ ಅ​ನ್ನು ಕಳವು ಮಾಡಿದ್ದಾರೆ. ಕಳುವಾಗಿರುವ ಡಿಸೇಲ್​​ನ ಮೌಲ್ಯ ರೂ. 9,60,000 ಎಂದು ಪರಿಗಣಿಸಲಾಗಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು: ಘಟನೆ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 19/2024 ಕಲಂ: 427,285, 379 ಐ ಪಿ ಸಿ ಕಲಂ 15(2) ಪೆಟ್ರೊನೆಟ್ ಕಾಯ್ದೆ ಕಲಂ 3(2) ಪ್ರಿವೆನ್ಸೆನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕಳ್ಳರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಚಿನ್ನಾಭರಣ ಜಪ್ತಿ: ಚಿಕ್ಕಮಗಳೂರು ತಾಲೂಕಿನ ಮಾಗಡಿ ಚೆಕ್‍ ಪೋಸ್ಟ್​​ ಬಳಿ ಸರ್ಕಾರಿ ಬಸ್‍ನಲ್ಲಿ ಸಾಗಿಸುತ್ತಿದ್ದ ದಾಖಲೆಗಳಿಲ್ಲದ ಸುಮಾರು ಅರ್ಧ ಕೆಜಿ ಬಂಗಾರದ ಚಿನ್ನಾಭರಣಗಳನ್ನು ಚುನಾವಣೆ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಜಿಲ್ಲೆಯ ಅಜ್ಜಂಪುರ, ಮೂಡಿಗೆರೆ ತಾಲೂಕಿನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 4 ಲಕ್ಷಕ್ಕೂ ಹೆಚ್ಚು ನಗದನ್ನು ಅಧಿಕಾರಿಗಳು ಹಾಗೂ ಪೊಲೀಸರು ಜಪ್ತಿ ಮಾಡಿದ್ದಾರೆ.

ಚಿನ್ನದ ನೆಕ್ಲೇಸ್, ಬ್ರಾಸ್ಲೈಟ್, ಬಳೆ, ಸರ, ಉಂಗುರ ಜಪ್ತಿ: ಮಾಗಡಿ ಚೆಕ್‍ ಪೋಸ್ಟ್​​ನಲ್ಲಿ ಬೆಂಗಳೂರಿನಿಂದ - ಚಿಕ್ಕಮಗಳೂರಿಗೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಚಿನ್ನದ ತಾಳಿ, ನೆಕ್ಲೇಸ್, ಬ್ರಾಸ್ಲೈಟ್, ಬಳೆ, ಸರ, ಉಂಗುರಗಳುಳ್ಳ ಅರ್ಧ ಕೆಜಿಯಷ್ಟು ಚಿನ್ನಾಭರಣಗಳನ್ನ ಸೀಜ್ ಮಾಡಲಾಗಿದೆ. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ವ್ಯಕ್ತಿಯೊಬ್ಬರು ಈ ಚಿನ್ನಾಭರಣಗಳನ್ನು ಸಾಗಿಸುತ್ತಿದ್ದು, ಆಭರಣಗಳಿಗೆ ಸಂಬಂಧಿಸಿದ ಯಾವುದೇ ದಾಖಲೆ ನೀಡದ ಹಿನ್ನೆಲೆ ಆಭರಣಗಳನ್ನು ಸೀಜ್ ಮಾಡಲಾಗಿದೆ. ಈ ಚಿನ್ನಾಭರಣಗಳ ಒಟ್ಟು ಮೌಲ್ಯ ಲಕ್ಷಾಂತರ ಮೌಲ್ಯದ್ದು ಎಂದು ಅಧಿಕಾರಿಗಳ ತಂಡ ಅಂದಾಜಿಸಿದೆ. ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಭರಣಗಳ ಮೂಲದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಮಗು ದತ್ತು ಪಡೆದ ಪ್ರಕರಣ: ಸೋನುಗೌಡರನ್ನ ನಾಲ್ಕು ದಿನಗಳ ಕಸ್ಟಡಿಗೆ ಪಡೆದ ಪೊಲೀಸರು - ನಟಿ ಹೇಳಿದ್ದಿಷ್ಟು - violation of Hindu Adoption Act

ETV Bharat Logo

Copyright © 2024 Ushodaya Enterprises Pvt. Ltd., All Rights Reserved.