ETV Bharat / state

ಮಗು ದತ್ತು ಪಡೆದ ಪ್ರಕರಣ: ಸೋನುಗೌಡರನ್ನ ನಾಲ್ಕು ದಿನಗಳ ಕಸ್ಟಡಿಗೆ ಪಡೆದ ಪೊಲೀಸರು - ನಟಿ ಹೇಳಿದ್ದಿಷ್ಟು - violation of Hindu Adoption Act

author img

By ETV Bharat Karnataka Team

Published : Mar 22, 2024, 6:53 PM IST

Updated : Mar 22, 2024, 7:39 PM IST

sonu-srinivas
ಸೋನು ಶ್ರೀನಿವಾಸ್​ಗೌಡ

ನಟಿ ಸೋನು ಶ್ರೀನಿವಾಸ್​ಗೌಡ ಅವರನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, ನಾಲ್ಕು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ.

ನಟಿ ಸೋನು ಶ್ರೀನಿವಾಸ್​ಗೌಡ

ಬೆಂಗಳೂರು : ಮಗು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಠಾಣೆ ಪೊಲೀಸರು, ನಟಿ ಸೋನುಗೌಡ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಬಳಿಕ ನಾಲ್ಕು ದಿನಗಳ ವಶಕ್ಕೆ ಪಡೆದುಕೊಂಡಿದ್ದಾರೆ.

ಬಿಗ್ ಬಾಸ್ ಓಟಿಟಿ ಸ್ಪರ್ಧಿಯಾಗಿದ್ದ ಸೋನು ಶ್ರೀನಿವಾಸ್​ಗೌಡ ಅವರ ವಿರುದ್ಧ ಬಾಲ ನ್ಯಾಯ ಕಾಯಿದೆ, ಹಿಂದೂ ದತ್ತು ಕಾಯ್ದೆ ಉಲ್ಲಂಘನೆಯಡಿ ಇಂದು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಬಂಧನ ಮಾಡಿದ್ದರು. ಬಂಧಿತೆ ನಟಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಪೊಲೀಸರು ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದುಕೊಂಡರು‌.‌ ಆರೋಪಿತೆಯೊಂದಿಗೆ ರಾಯಚೂರಿಗೆ ತೆರಳಿ ಮಹಜರು‌ ಮಾಡಲಿದ್ದಾರೆ‌‌.‌ ವಿಚಾರಣೆ ಮುಗಿದ ಬಳಿಕ ವಾಸ್ತವ್ಯಕ್ಕಾಗಿ ಮಡಿವಾಳದಲ್ಲಿರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದಲಿದ್ದಾರೆ.

ಹುಡಗಿಯನ್ನ ರಕ್ಷಣೆ ಮಾಡುವುದಕ್ಕಾಗಿ ಈ ಕೆಲಸ ಮಾಡಿದೆ - ನಟಿ: ನ್ಯಾಯಾಲಯದಿಂದ ಹೊರ ಬರುವಾಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೋನು ಶ್ರೀನಿವಾಸ್, ಕಾನೂನಾತ್ಮಕ ತನಿಖೆ ನಡೆಯುತ್ತಿದೆ. ಒಂದು ಹುಡುಗಿಯನ್ನ ರಕ್ಷಣೆ ಮಾಡಬೇಕೆಂದು ನಾನು ಕರೆದುಕೊಂಡು ಬಂದಿದ್ದೆ ಮತ್ತು ಆ ಬಾಲಕಿ ಸುರಕ್ಷಿತವಾಗಿದ್ದಾಳೆ ಎಂದರು.

ಕಳೆದ ಮಾರ್ಚ್ 2ರಂದು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸೋನುಗೌಡ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ರಾಯಚೂರು ಮೂಲದ ಹೆಣ್ಣು ಮಗುವೊಂದನ್ನ ಪೋಷಕರ ಸಮ್ಮುಖದಲ್ಲಿ ದತ್ತು ಪಡೆದಿರುವುದಾಗಿ ಹೇಳಿಕೊಂಡಿದ್ದರು.

ಆದರೆ ಹಿಂದೂ ದತ್ತು ಕಾಯ್ದೆ ಅನ್ವಯ ದತ್ತು ಪಡೆಯುವ ವ್ಯಕ್ತಿ ಮತ್ತು ದತ್ತು ಪಡೆಯಲ್ಪಡುವ ಮಗುವಿನ ನಡುವೆ ಕನಿಷ್ಠ 25 ವರ್ಷ ಅಂತರವಿರಬೇಕು. ದತ್ತು ಪಡೆಯುವ ವ್ಯಕ್ತಿ ತನ್ನ ಅರ್ಹತೆಯ ಕುರಿತು ಕೇಂದ್ರ ಹಾಗೂ ರಾಜ್ಯ ದತ್ತು ಪ್ರಾಧಿಕಾರಕ್ಕೆ ಮಾಹಿತಿ ನೀಡಿ, ಅವರ ಸಮ್ಮುಖದಲ್ಲಿ ದತ್ತು ಸ್ವೀಕರಿಸಬೇಕು.

ಅಲ್ಲದೇ, ಮಗುವಿನ ಪೋಷಕರು ಹಾಗೂ ಮಗುವಿಗೆ ವಿವಿಧ ಸೌಕರ್ಯಗಳನ್ನ ನೀಡಿರುವುದಾಗಿ ಸೋನು ಗೌಡ ಹೇಳಿಕೊಂಡಿರುವುದು, ಮೇಲ್ನೋಟಕ್ಕೆ ಇದು ಮಾರಾಟ ಪ್ರಕ್ರಿಯೆಯಂತೆ ತೋರುತ್ತಿದೆ. ಮತ್ತು ಮಗುವಿನ ಆತ್ಮಾಭಿಮಾನಕ್ಕೆ ಧಕ್ಕೆ ತರುವಂತದ್ದಾಗಿರುತ್ತದೆ. ಮೇಲ್ನೋಟಕ್ಕೆ ಮಗು 1 ಅಥವಾ 2ನೇ ತರಗತಿಯ ಶಿಕ್ಷಣಕ್ಕೆ ಅರ್ಹವಾಗಿರುವಂತೆ ತೋರುತ್ತಿದ್ದು, ಮಾರ್ಚ್ ತಿಂಗಳಿನಲ್ಲಿ ಶಾಲೆಗೆ ಕಳುಹಿಸಿರುವುದಿಲ್ಲ. ಆದ್ದರಿಂದ ಸೋನು ಗೌಡ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ದೂರು ನೀಡಲಾಗಿತ್ತು. ಸದ್ಯ ಈ ಆರೋಪದಡಿ ಸೋನು ಗೌಡ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಮಗುವನ್ನ ತಮ್ಮ ವಶಕ್ಕೆ ಪಡೆದುಕೊಂಡು ಸರ್ಕಾರಿ ಬಾಲಮಂದಿರದಲ್ಲಿ ಆಶ್ರಯ ಕಲ್ಪಿಸಿದ್ದಾರೆ.

ಇದನ್ನೂ ಓದಿ : ದತ್ತು ಕಾಯ್ದೆ ಉಲ್ಲಂಘನೆ ಆರೋಪ: ಸೋನು ಶ್ರೀನಿವಾಸ್ ಗೌಡ ಬಂಧನ - SONU SRINIVAS GOWDA ARREST

Last Updated :Mar 22, 2024, 7:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.