ETV Bharat / sports

ಟಿ20 ವಿಶ್ವಕಪ್​ಗೆ ಆಯ್ಕೆಯಾದ ಟೀಂ ಇಂಡಿಯಾದಲ್ಲಿ IPL​ ತಂಡಗಳ ಪ್ರಾತಿನಿಧ್ಯವೆಷ್ಟು? - T20 World Cup 2024

author img

By ETV Bharat Karnataka Team

Published : May 1, 2024, 6:28 PM IST

ಟೀಂ ಇಂಡಿಯಾ
ಟೀಂ ಇಂಡಿಯಾ

ಟಿ20 ವಿಶ್ವಕಪ್​ಗೆ ಆಯ್ಕೆಯಾದ ಟೀಂ ಇಂಡಿಯಾದಲ್ಲಿ ಯಾವ ಐಪಿಎಲ್​ ತಂಡದ ಆಟಗಾರರು ಪ್ರತಿನಿಧಿಸುತ್ತಿದ್ದಾರೆ. ಯಾವ ತಂಡಕ್ಕೆ ಅವಕಾಶ ಸಿಕ್ಕಿಲ್ಲ ಎಂಬುದರ ಮಾಹಿತಿ ಇಲ್ಲಿದೆ.

ಹೈದರಾಬಾದ್​: ವೆಸ್ಟ್ ಇಂಡೀಸ್​ ಮತ್ತು ಅಮೆರಿಕದಲ್ಲಿ ಮುಂದಿನ ತಿಂಗಳು ನಡೆಯುವ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ಹಿರಿಯ ಆಟಗಾರರಾದ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಸ್ಥಾನ ಪಡೆದರೆ, ಯುವ ಆಟಗಾರರಾದ ಶಿವಂ ದುಬೆ, ಸಂಜು ಸ್ಯಾಮ್ಸನ್​, ಯಶಸ್ವಿ ಜೈಸ್ವಾಲ್​ ಅವರ ಭಾಗ್ಯದ ಬಾಗಿಲು ತೆರೆದಿದೆ.

ಅವಕಾಶಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದ ರಿಂಕು ಸಿಂಗ್​, ಋತುರಾಜ್​ ಗಾಯಕ್ವಾಡ್​, ವೆಂಕಟೇಶ್​ ಅಯ್ಯರ್​, ಶುಭ್​ಮನ್​ ಗಿಲ್​ ಸೇರಿದಂತೆ ಹಲವು ಯುವ ಕ್ರಿಕೆಟರ್​ಗಳು ನಿರಾಸೆ ಅನುಭವಿಸಿದ್ದಾರೆ. ಈ ಪೈಕಿ ಕೆಲವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಟೀಂ ಕಟ್ಟುವಾಗ ಆಯ್ಕೆ ಸಮಿತಿ ಎಡವಿದೆ ಎಂಬ ಟೀಕೆ ಕೇಳಿಬಂದಿದೆ.

ಈ ಮಧ್ಯೆ ಐಪಿಎಲ್​ ಹಂಗಾಮ ನಡೆಯುತ್ತಿದ್ದು, ಇಲ್ಲಿ ಆಟಗಾರರು ತೋರಿದ ಪ್ರದರ್ಶನ ಮಾನದಂಡವಾಗಿ ಪರಿಣಮಿಸಿಲ್ಲ ಎಂಬುದು ವಿಧಿತವಾಗುತ್ತಿದೆ. ಹಲವಾರು ಯುವ ಆಟಗಾರರು ಮಿಂಚು ಹರಿಸುತ್ತಿದ್ದಾರೆ. ಆದಾಗ್ಯೂ ಇದ್ಯಾವುದನ್ನೂ ಆಯ್ಕೆಗಾರರು ಪರಿಗಣನೆಗೆ ತೆಗೆದುಕೊಂಡಿಲ್ಲ. ವೆಸ್ಟ್​ ಇಂಡೀಸ್​ನ ನಿಧಾನಗತಿ ಪಿಚ್​ಗೆ ಹೊಂದಿಕೊಂಡು ಆಡುವುದರ ಕಡೆಗೆ ಹೆಚ್ಚಿನ ಗಮನ ಹರಿಸಲಾಗಿದೆ.

ಯಾವ ಐಪಿಎಲ್​ ತಂಡಕ್ಕೆ ಹೆಚ್ಚು ಛಾನ್ಸ್?​: ಟಿ20 ವಿಶ್ವಕಪ್​ಗೆ ಆಯ್ಕೆಯಾದ ಟೀಂ ಇಂಡಿಯಾ ಆಟಗಾರರು ಐಪಿಎಲ್​ನಲ್ಲಿ ತರಹೇವಾರಿ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಈ ಪೈಕಿ ಮುಂಬೈ ಇಂಡಿಯನ್ಸ್​ ತಂಡದಿಂದ ಹೆಚ್ಚು ಆಟಗಾರರು (4) ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂಬುದು ವಿಶೇಷ. ನಾಯಕ ರೋಹಿತ್​ ಶರ್ಮಾ, ಸೂರ್ಯಕುಮಾರ್​ ಯಾದವ್​, ಎಂಐ ತಂಡದ ನಾಯಕ ಹಾರ್ದಿಕ್​ ಪಾಂಡ್ಯ, ಜಸ್ಪ್ರೀತ್​ ಬುಮ್ರಾ ಅವಕಾಶ ಪಡೆದವರು.

ಬಳಿಕ ರಾಜಸ್ಥಾನ ರಾಯಲ್ಸ್​ನಿಂದ ಮೂವರು ಆಟಗಾರರಾದ ಸಂಜು ಸ್ಯಾಮ್ಸನ್​, ಯಶಸ್ವಿ ಜೈಸ್ವಾಲ್​, ಯಜುವೇಂದ್ರ ಚಹಲ್​, ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿಯಿಂದ ರಿಷಬ್​ ಪಂತ್​, ಅಕ್ಷರ್​ ಪಟೇಲ್​, ಕುಲದೀಪ್​​ ಯಾದವ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರಿನಿಂದ ವಿರಾಟ್​ ಕೊಹ್ಲಿ, ಮೊಹಮದ್​ ಸಿರಾಜ್​, ಚೆನ್ನೈ ಸೂಪರ್​ ಕಿಂಗ್ಸ್​ ತಂಡದಿಂದ ಶಿವಂ ದುಬೆ, ರವೀಂದ್ರ ಜಡೇಜಾ, ಪಂಜಾಬ್​ ಕಿಂಗ್ಸ್​ನಿಂದ ಅರ್ಷದೀಪ್​ ಸಿಂಗ್​ ಪ್ರತಿನಿಧಿಸುತ್ತಿದ್ದಾರೆ.

ಅವಕಾಶ ಸಿಗದ ಐಪಿಎಲ್​ ತಂಡಗಳು: ಐಪಿಎಲ್​ನಲ್ಲಿ ಆಡುತ್ತಿರುವ 10 ತಂಡಗಳ ಪೈಕಿ 6 ತಂಡಗಳ ಆಟಗಾರರಿಗೆ ವಿಶ್ವಕಪ್​ನಲ್ಲಿ ಆಡಲು ಅವಕಾಶ ಪಡೆದರೆ, ನಾಲ್ಕು ಫ್ರಾಂಚೈಸಿಗಳಲ್ಲಿ ಒಬ್ಬ ಆಟಗಾರರೂ ಆಯ್ಕೆಗಾರರ ಗಮನ ಸೆಳೆದಿಲ್ಲ. ಅದರಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​, ಸನ್​ರೈಸರ್ಸ್​ ಹೈದರಾಬಾದ್​, ಲಖನೌ ಸೂಪರ್​ ಜೈಂಟ್ಸ್​, ಗುಜರಾತ್ ಟೈಟಾನ್ಸ್​​ ತಂಡ ಇವೆ. ಈ ಪೈಕಿ ಕೆಕೆಆರ್​ನ ರಿಂಕು ಸಿಂಗ್​, ಗುಜರಾತ್​ ಟೈಟಾನ್ಸ್​ನ ಶುಭ್​ಮನ್​ಗಿಲ್​, ಲಖನೌ ಸೂಪರ್​ಜೈಂಟ್ಸ್​ನ ಆವೇಶ್​ಖಾನ್​ ಮೀಸಲು ತಂಡದಲ್ಲಿ ಉಳಿದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.