ETV Bharat / sports

ಕೋಲ್ಕತ್ತಾ​-ರಾಜಸ್ಥಾನ​ ಪಂದ್ಯ ಒಂದಿನ ಹಿಂದ, ಗುಜರಾತ್​-ಡೆಲ್ಲಿ ಪಂದ್ಯ ಒಂದಿನ ಮುಂದ - IPL Matches Rescheduled

author img

By PTI

Published : Apr 2, 2024, 4:26 PM IST

ಐಪಿಎಲ್​ನ ಎರಡು ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಬದಲಿಸಿದೆ. ಆದರೆ, ಇದಕ್ಕೆ ಯಾವುದೇ ಕಾರಣ ನೀಡಿಲ್ಲ.

ಬಿಸಿಸಿಐ
ಬಿಸಿಸಿಐ

ನವದೆಹಲಿ: ನಡೆಯುತ್ತಿರುವ 17ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್‌ನ​ (ಐಪಿಎಲ್​) ಎರಡು ಪಂದ್ಯಗಳ ವೇಳಾಪಟ್ಟಿಯನ್ನು ಬದಲಿಸಿ ಬಿಸಿಸಿಐ ಪ್ರಕಟಣೆ ಹೊರಡಿಸಿದೆ. ಇದಕ್ಕೆ ನಿಖರ ಕಾರಣ ನೀಡಿಲ್ಲ. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆಯಬೇಕಿದ್ದ ಕೆಕೆಆರ್​ ಮತ್ತು ರಾಜಸ್ಥಾನ ನಡುವಿನ ಪಂದ್ಯ ರಾಮನವಮಿ ಹಿನ್ನೆಲೆಯಲ್ಲಿ ಒಂದು ದಿನ ಹಿಂದೂಡಲಾಗಿದೆ ಎಂದು ಹೇಳಲಾಗಿದೆ.

ಯಾವ ಪಂದ್ಯ ಬದಲಾವಣೆ: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಏಪ್ರಿಲ್ 17ರಂದು ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವನ್ನು ಏಪ್ರಿಲ್ 16ಕ್ಕೆ ನಿಗದಿ ಮಾಡಲಾಗಿದೆ. ಅಂದರೆ ಒಂದು ದಿನ ಹಿಂದೂಡಲಾಗಿದೆ. ಗುಜರಾತ್​ನ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏಪ್ರಿಲ್ 16ರಂದು ನಿಗದಿ ಮಾಡಲಾಗಿರುವ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಏಪ್ರಿಲ್ 17ಕ್ಕೆ ಮುಂದೂಡಲಾಗಿದೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

ತವರಿನಲ್ಲಿ ನಡೆಯಬೇಕಿದ್ದ ಕೆಕೆಆರ್‌ ತಂಡದ ಮೂರನೇ ಪಂದ್ಯಕ್ಕೆ ಸಾಕಷ್ಟು ಭದ್ರತೆಯನ್ನು ಒದಗಿಸಲು ಕೋಲ್ಕತ್ತಾ ಪೊಲೀಸರು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಪಂದ್ಯವನ್ನು ಒಂದು ದಿನ ಮೊದಲೇ ಹಿಂದೂಡಲಾಗಿದೆ. ಏಪ್ರಿಲ್​ 16ರಂದು ರಾಮನವಮಿ ಆಚರಿಸಲಾಗುತ್ತದೆ. ಅಂದು ಮೆರವಣಿಗೆಗಳು ನಡೆಯಲಿದ್ದು, ಸಾರ್ವಜನಿಕವಾಗಿ ಸೂಕ್ಷ್ಮವಾಗಿರುವ ರಾಜ್ಯದಲ್ಲಿ ಭದ್ರತಾ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಹೀಗಾಗಿ ಅಂದಿನ ಪಂದ್ಯವನ್ನು ಮೊದಲ ಆಯೋಜಿಸುವ ಅಥವಾ ಎರಡು ದಿನ ಮುಂದೂಡುವ ಬಗ್ಗೆ ಪೊಲೀಸರು ಸಲಹೆ ನೀಡಿದ್ದರು. ಅದರಂತೆ ಒಂದು ದಿನ ಮೊದಲೇ ಆಡಿಸಲು ಬಿಸಿಸಿಐ ನಿರ್ಧರಿಸಿದೆ. ಲೋಕಸಭೆ ಚುನಾವಣೆಯ 7 ಹಂತದ ಮತದಾನದಲ್ಲಿ ಪಶ್ಚಿಮಬಂಗಾಳದಲ್ಲಿ ಏಪ್ರಿಲ್​ 19ರಂದು ಮೊದಲ ಹಂತ ಮತ್ತು ಜೂನ್ 1ರಂದು ಎರಡನೇ ಹಂತದ ಮತದಾನ ನಡೆಯಲಿದೆ.

ಇನ್ನೂ, ಅಹಮದಾಬಾದ್​ನಲ್ಲಿ ಏಪ್ರಿಲ್​ 16ಕ್ಕೆ ನಿಗದಿಯಾಗಿದ್ದ ಗುಜರಾತ್​ ಟೈಟಾನ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ನಡುವಿನ ಪಂದ್ಯವನ್ನು ಏಪ್ರಿಲ್​ 17ಕ್ಕೆ ಮುಂದೂಡಲಾಗಿದೆ. ಆದರೆ, ಯಾವ ಕಾರಣಕ್ಕಾಗಿ ಪಂದ್ಯದ ದಿನವನ್ನು ಬದಲಿಸಲಾಗಿದೆ ಎಂಬುದರ ಬಗ್ಗೆ ಬಿಸಿಸಿಐ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: ಐಪಿಎಲ್​ 2024: ಮೋಹಿತ್​ ಶರ್ಮಾ ಅದ್ಭುತ ಸ್ಪೆಲ್;​ ಗುಜರಾತ್ ಬೌಲಿಂಗ್​ ಎದುರು ಪತರುಗುಟ್ಟಿದ​ ​ಹೈದರಾಬಾದ್ ಬ್ಯಾಟರ್ಸ್ - IPL 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.