ETV Bharat / international

ಹೆದ್ದಾರಿ ಕುಸಿದು ಚೀನಾದಲ್ಲಿ 19 ಮಂದಿ ಸಾವು: 30ಕ್ಕೂ ಹೆಚ್ಚು ಮಂದಿಗೆ ಗಾಯ - China Highway Collapse

author img

By PTI

Published : May 1, 2024, 11:32 AM IST

ಚೀನಾದಲ್ಲಿ ಹೆದ್ದಾರಿ ಕುಸಿದು 19 ಜನ ಸಾವು, 30 ಮಂದಿಗೆ ತೀವ್ರ ಗಾಯ
ಚೀನಾದಲ್ಲಿ ಹೆದ್ದಾರಿ ಕುಸಿದು 19 ಜನ ಸಾವು, 30 ಮಂದಿಗೆ ತೀವ್ರ ಗಾಯ

ಚೀನಾದಲ್ಲಿ ಹೆದ್ದಾರಿ ಕುಸಿದು 19 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೀಜಿಂಗ್​ (ಚೀನಾ): ದಕ್ಷಿಣ ಚೀನಾದಲ್ಲಿ ಹೆದ್ದಾರಿಯೊಂದು ಕುಸಿದು ಬಿದ್ದ ಪರಿಣಾಮ 19 ಜನರು ಸಾವನ್ನಪ್ಪಿದ್ದು ಕನಿಷ್ಟ 30ಕ್ಕೂ ಹೆಚ್ಚಿನ ಜನರು ಗಾಯಗೊಂಡಿರುವ ಘಟನೆ ಮಧ್ಯರಾತ್ರಿ ನಡೆದಿದೆ. ಪ್ರಸ್ತುತ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ರಾಜ್ಯದ ಸುದ್ದಿವಾಹಿನಿಗಳು ವರದಿ ಮಾಡಿವೆ.

ಇಲ್ಲಿಯ ಗುವಾಂಗ್‌ಡಾಂಗ್ ಪ್ರಾಂತ್ಯದ ಮೀಝೌ ನಗರ ಮತ್ತು ಡಾಬು ಕೌಂಟಿ ನಡುವಿನ ರಸ್ತೆಯು ಮಧ್ಯರಾತ್ರಿ ಸುಮಾರು 2 ಗಂಟೆ 10 ನಿಮಿಷಕ್ಕೆ ಕುಸಿದಿದೆ ಪರಿಣಾಮ ಸರಣಿ ಅಪಘಾತ ಸಂಭವಿಸಿದ್ದು, 19 ಜನ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ವಾಹಿನಿಗಳು ತಿಳಿಸಿವೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಹಮಾಸ್​ - ಇಸ್ರೇಲ್ ಯುದ್ಧ ವಿಚಾರ: ಅಮೆರಿಕದ ಹಲವು ವಿವಿಗಳಲ್ಲಿ ತೀವ್ರ ಸ್ವರೂಪ ಪಡೆದ ವಿದ್ಯಾರ್ಥಿಗಳ ಪ್ರೊಟೆಸ್ಟ್​ - Student protests intensify

ETV Bharat Logo

Copyright © 2024 Ushodaya Enterprises Pvt. Ltd., All Rights Reserved.