ETV Bharat / international

ಇಸ್ರೇಲ್​​​​​​​​ನೊಂದಿಗಿನ ಒಪ್ಪಂದ ವಿರೋಧಿಸಿ ಪ್ರತಿಭಟಿಸಿದ 28 ಉದ್ಯೋಗಿಗಳನ್ನು ವಜಾ ಮಾಡಿದ ಗೂಗಲ್​​ - Google Fires 28 Employees

author img

By ETV Bharat Karnataka Team

Published : Apr 18, 2024, 12:54 PM IST

ಇಸ್ರೇಲ್​​​​​​​​ನೊಂದಿಗಿನ ಒಪ್ಪಂದ ವಿರೋಧಿಸಿ ಪ್ರತಿಭಟಿಸಿದ 28 ಉದ್ಯೋಗಿಗಳನ್ನು ವಜಾ ಮಾಡಿದ ಗೂಗಲ್​​
ಇಸ್ರೇಲ್​​​​​​​​ನೊಂದಿಗಿನ ಒಪ್ಪಂದ ವಿರೋಧಿಸಿ ಪ್ರತಿಭಟಿಸಿದ 28 ಉದ್ಯೋಗಿಗಳನ್ನು ವಜಾ ಮಾಡಿದ ಗೂಗಲ್​​

ಗೂಗಲ್ ಇಸ್ರೇಲಿ ಸರ್ಕಾರದೊಂದಿಗಿನ ಒಪ್ಪಂದ ವಿರೋಧಿಸಿ ತನ್ನ ಕಚೇರಿಗಳಲ್ಲಿ ಧರಣಿ ಹಾಗೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 28 ಉದ್ಯೋಗಿಗಳನ್ನು ವಜಾಗೊಳಿಸಿದೆ.

ಹೈದರಾಬಾದ್: ಟೆಕ್ ದೈತ್ಯ ಗೂಗಲ್ ಕಂಪನಿ ಇಸ್ರೇಲ್ ಜೊತೆ $ 1.2 ಶತಕೋಟಿ ಒಪ್ಪಂದ ಮಾಡಿಕೊಂಡಿದ್ದನ್ನು ವಿರೋಧಿಸಿ ನಡೆಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ 28 ಉದ್ಯೋಗಿಗಳನ್ನು ವಜಾಗೊಳಿಸಿದೆ. ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಪ್ರತಿಭಟನಾಕಾರರು ಸುಮಾರು 10 ಗಂಟೆಗಳ ಕಾಲ ಧರಣಿ ನಡೆಸಿದ್ದರು. ಈ ಪೈಕಿ ಒಂಬತ್ತು ಉದ್ಯೋಗಿಗಳನ್ನು ಅತಿಕ್ರಮ ಪ್ರವೇಶ ಆರೋಪದ ಮೇಲೆ ಬಂಧಿಸಲಾಗಿದೆ.

ಗೂಗಲ್ ಉದ್ಯೋಗಿಗಳು ಏಪ್ರಿಲ್ 16 ರಂದು ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿರುವ ಗೂಗಲ್ ಕ್ಲೌಡ್ ಚೀಫ್ ಆಪರೇಟಿಂಗ್ ಆಫೀಸರ್ ಥಾಮಸ್ ಕುರಿಯನ್ ಅವರ ಕಚೇರಿಗೆ ಮುತ್ತಿಗೆ ಹಾಕಿದ್ದರು. ಕಂಪನಿಯು ಇಸ್ರೇಲ್​​​​​ನೊಂದಿಗೆ ವ್ಯವಹಾರ ನಡೆಸಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು. ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಗ್ಗೆ ಆಂತರಿಕ ವಿಚಾರಣೆ ನಡೆಸಿರುವ ಕಂಪನಿ ಗೂಗಲ್ ಉಪಾಧ್ಯಕ್ಷ ಕ್ರಿಸ್ ರಾಕೋವ್ ಅವರ ಮೆಮೊದ ಅನ್ವಯ ಕಂಪನಿಯಿಂದ ವಜಾಗೊಳಿಸಲಾಗಿದೆ.

ಉದ್ಯೋಗಿಗಳಿಗೆ ಕಳುಹಿಸಿರುವ ಆಂತರಿಕ ಜ್ಞಾಪಕ ಪತ್ರದಲ್ಲಿ, ಕಂಪನಿಯು ಈ ರೀತಿಯ ವರ್ತನೆ ಸಹಿಸಿಕೊಳ್ಳುವುದಿಲ್ಲ ಕೆಲಸದ ಸ್ಥಳದಲ್ಲಿ ಇಂತಹುದಕ್ಕೆ ಯಾವುದೇ ಸ್ಥಾನವಿಲ್ಲ ಮತ್ತು ನಾವು ಇಂತಹದ್ದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.

ನಮ್ಮ ಬಹುಪಾಲು ಉದ್ಯೋಗಿಗಳು ಸರಿಯಾದ ಕೆಲಸವನ್ನು ಮಾಡುತ್ತಾರೆ. ನಮ್ಮ ನೀತಿಗಳನ್ನು ಉಲ್ಲಂಘಿಸುವ ನಡವಳಿಕೆಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಗೂಗಲ್​ ಹೇಳಿದೆ. ಕಂಪನಿಯು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ವಿಚ್ಛಿದ್ರಕಾರಕ ನಡವಳಿಕೆಯ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಂಪನಿ ಇದೇ ವೇಳೆ ಸ್ಪಷ್ಟಪಡಿಸಿದೆ. ಆದರೆ ಪ್ರತಿಭಟನಾಕಾರರು ಗೂಗಲ್‌ನ ಕ್ರಮವನ್ನು ಇದು ಪ್ರತಿಕಾರದ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಭೀಕರ ಅಪಘಾತ: ಮಹಾರಾಷ್ಟ್ರಕ್ಕೆ ಮದುವೆಗೆಂದು ತೆರಳುತ್ತಿದ್ದ ಬಾಗಲಕೋಟೆಯ ಐವರು ದುರ್ಮರಣ - Road Accident

ETV Bharat Logo

Copyright © 2024 Ushodaya Enterprises Pvt. Ltd., All Rights Reserved.