ETV Bharat / health

ಆರೋಗ್ಯಕ್ಕಾಗಿ ಶಿಕ್ಷಣ; ಭವಿಷ್ಯದ ಮುನ್ನಡಿಗೆ ಇದುವೇ ಅಡಿಪಾಯ - Schooling For Health

author img

By ETV Bharat Karnataka Team

Published : Apr 6, 2024, 2:22 PM IST

Updated : Apr 12, 2024, 12:27 PM IST

schooling-for-health-foundation-for-the-future
schooling-for-health-foundation-for-the-future

ಶಾಲೆಗಳಲ್ಲಿ ಆರಂಭಿಕ ಹಂತದಲ್ಲೇ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಮೂಲಕ ಸ್ವಾಸ್ಥ ಸಮಾಜಕ್ಕೆ ಮುನ್ನುಡಿ ಬರೆಯಬಹುದು ಎಂದು ಲೇಖಕರಾದ ಪ್ರೊ ಕೆ. ಶ್ರೀನಾಥ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಹೈದರಾಬಾದ್​: ಜೀವನದಲ್ಲಿ ಹೊಂದಬಹುದಾದ ಅತ್ಯಮೂಲ್ಯ ಆಸ್ತಿ ಎಂದರೆ ಅದು ಆರೋಗ್ಯ. ವ್ಯಕ್ತಿಯ ಉಳಿವಿನಿಂದ ದೈಹಿಕ, ಮಾನಸಿಕ, ಭಾವನಾತ್ಮಕ ಸೇರಿದಂತೆ ಸಕಲ ಚಟುವಟಿಕೆಗಳು ಕೂಡ ಈ ಆರೋಗ್ಯದ ಮೇಲೆ ನಿಂತಿದೆ. ಇದೇ ಕಾರಣದಿಂದ ಇದು ಹೆಚ್ಚು ಆಂತರಿಕ ಮೌಲ್ಯ ಹೊಂದಿದೆ. ಆದರೂ ಕೂಡ ಜನರು ಆರೋಗ್ಯ ಮೌಲ್ಯದ ಬಗ್ಗೆ ಅಷ್ಟಾಗಿ ಕಾಳಜಿ ಹೊಂದಿಲ್ಲ. ಅನೇಕರು ಮುಂದೆ, ಸುಲಭವಾಗಿ ತಮ್ಮ ವೈಯಕ್ತಿಕ ನಡುವಳಿಕೆ ಅಥವಾ ಬಾಹ್ಯ ಪ್ರಭಾವದಿಂದ ಇದನ್ನು ಹಾನಿಗೊಳಿಸಿಕೊಳ್ಳುತ್ತಾರೆ. ಜೊತೆಗೆ ಆರೋಗ್ಯವನ್ನು ಕಾಪಾಡುವಲ್ಲಿ ಸಾಮಾಜಿಕ, ಆರ್ಥಿಕ, ಪರಿಸರದ ಪ್ರಭಾವವೂ ಇದೆ. ಇವು ಅನೇಕ ರೋಗ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ಜನರು ತಮ್ಮ ಬಗ್ಗೆ ಅಥವಾ ತಮ್ಮ ಕುಟುಂಬ ಸದಸ್ಯರ ಆರೋಗ್ಯ ಕಾಳಜಿವಹಿಸುವ ಮಿತವಾದ ಜ್ಞಾನ ಹೊಂದಿದ್ದಾರೆ.

ಜನರ ಮತ್ತು ವ್ಯಕ್ತಿಯ ಆರೋಗ್ಯ ಸುಧಾರಣೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ಹೊಂದಿದೆ. ಯುನೆಸ್ಕೋ ಕೂಡ ಶಿಕ್ಷಣವೂ ಅಭಿವೃದ್ಧಿಯ ವೇಗವರ್ಧಕವಾಗಿದ್ದು, ಇದು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಪ್ರತಿಪಾದಿಸುತ್ತದೆ. ಇಂಚಿಯಾನ್​ ಘೋಷಣೆಯು, 2015ರಲ್ಲಿ ಸುಸ್ಥಿರ ಅಭಿವೃದ್ಧಿ ನಾಲ್ಕು ಗುರಿಗಳಲ್ಲಿ ಶಿಕ್ಷಣ ನೈಪುಣ್ಯತೆ ಮತ್ತು ಮೌಲ್ಯ ಹಾಗೂ ಉತ್ತಮ ವರ್ತನೆಯನ್ನು ನೀಡುತ್ತದೆ ಎಂದು ತಿಳಿಸಿದೆ. ಶಿಕ್ಷಣವು ವಿದ್ಯಾರ್ಥಿಗಳು ಕಳಪೆ ಆರೋಗ್ಯ ಹೊಂದುವುದನ್ನು ತಡೆಯುತ್ತದೆ ಎಂದು ತಿಳಿಸುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣ ಮತ್ತು ಆರೋಗ್ಯದ ಸಂಬಂಧವನ್ನು ಉತ್ತಮಗೊಳಿಸಬೇಕಾದ ಅವಶ್ಯಕತೆ ಇದೆ.

ಶಾಲೆಗಳಲ್ಲಿ ಆರೋಗ್ಯದ ಕುರಿತು ಉತ್ತೇಜನ: ಶಾಲೆಗಳು ವಿದ್ಯಾರ್ಥಿಗಳ ಜೀವಮಾನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ವ್ಯಕ್ತಿ ಜೀವನಕ್ಕೆ ಜ್ಞಾನ, ಮೌಲ್ಯ ನೀಡುವ ಜೊತೆಗೆ ಮುಂದಿನ ಸಮಾಜ ರೂಪಿಸುವತ್ತ ಮುನ್ನಡೆಸಿ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುತ್ತದೆ. ಇದನ್ನು ಸಾಧಿಸಲು ವ್ಯಕ್ತಿಯ ಆರೋಗ್ಯದ ರಕ್ಷಣೆ ಅತ್ಯಗತ್ಯವಾಗಿದೆ.

ವೈಯಕ್ತಿಕ ನೈರ್ಮಲ್ಯ, ಉತ್ತಮ ನೈರ್ಮಲ್ಯ, ಆರೋಗ್ಯಕರ ಆಹಾರ ಆಯ್ಕೆ, ದೈಹಿಕ ಚಟುವಟಿಕೆ, ಒತ್ತಡ ನಿಭಾಯಿಸುವ ತಂತ್ರ ಸೇರಿದಂತೆ ಜೀವನ ಪಾಠದ ಕೆಲವು ಅಂಶಗಳ ಮೇಲೆ ಶಾಲೆಗಳು ಆರಂಭದಲ್ಲೇ ಪ್ರಭಾವ ಬೀರಿರುತ್ತವೆ. ಸಂಚಾರ ಸುರಕ್ಷತೆ ಮತ್ತು ಪ್ರಥಮ ಚಿಕಿತ್ಸೆಯ ಪಾಠ, ದೈಹಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುತ್ತವೆ. ಇದೇ ವೇಳೆ ಬೆದರಿಸುವಿಕೆ, ದೈಹಿಕ ಹಿಂಸೆ, ತಾರತಮ್ಯ ಮತ್ತು ಲಿಂಗ ಪಕ್ಷಪಾತದಂತಹ ಹಾನಿಕಾರಕ ಅಂಶಗಳನ್ನು ಚರ್ಚಿಸಿ, ಉತ್ತಮ ನಡುವಳಿಕೆ ರೂಪಿಸಲು ಸಹಾಯ ಮಾಡುತ್ತದೆ.

ಶಾಲೆಗಳಲ್ಲಿ ಸ್ವಚ್ಛ ಮತ್ತು ಹಸಿರು ಪರಿಸರ, ಉತ್ತಮ ಗಾಳಿ ಮತ್ತು ಸರಿಯಾಗಿ ಬೆಳಕಿರುವ ತರಗತಿ ಕೊಠಡಿಗಳು, ಆಟದ ಮೈದಾನಗಳನ್ನು ಒದಗಿಸುವುದು, ಅಂಗವಿಕಲ ಸ್ನೇಹಿ ಮೂಲಸೌಕರ್ಯ, ಆರೋಗ್ಯಕರ ಕೆಫೆಟೇರಿಯಾ ಆಹಾರ ಮತ್ತು ತಂಬಾಕು ಉತ್ಪನ್ನಗಳು, ಮದ್ಯ ಮತ್ತು ಮಾದಕ ದ್ರವ್ಯಗಳನ್ನು ಹೊರಗಿಡಲು ಕಟ್ಟುನಿಟ್ಟಿನ ನೀತಿಗಳನ್ನು ಜಾರಿಗೊಳಿಸುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಪ್ರಚಾರ ನಡೆಸಬಹುದು. ಇಲ್ಲಿಯೇ ಮಾನಸಿಕ ಆರೋಗ್ಯ ಸಮಾಲೋಚನೆಯನ್ನು ಒದಗಿಸಬಹುದು. ಯೋಗ ಮತ್ತು ಧ್ಯಾನ ತಂತ್ರಗಳನ್ನು ಕಲಿಸಬಹುದು. ಕಣ್ಣಿನ ಮತ್ತು ಕಿವಿಯ ಸಮಸ್ಯೆಗಳ ಆರಂಭಿಕ ಪತ್ತೆಗೆ ತಪಾಸಣೆ ನಡೆಸಬಹುದು. ಈ ಮೂಲಕ ಕಲಿಕೆಗೆ ಉಂಟಾಗುವ ದೈಹಿಕ ಅಡಚಣೆ ತೆಗೆಯಬಹುದಾಗಿದೆ. ಮಾನಸಿಕ ಆರೋಗ್ಯ ಸವಾಲುಗಳನ್ನು ಜಯಿಸಲು ಅಥವಾ ದೈಹಿಕ ಅಸಾಮರ್ಥ್ಯಗಳಿಂದ ಉಂಟಾಗುವ ಅಡೆತಡೆಗಳನ್ನು ನಿವಾರಿಸಲು ಬೆಂಬಲದ ಗುಂಪನ್ನು ರೂಪಿಸಬಹುದು. ಇದು ಅವರಲ್ಲಿ ಸಹಾನುಭೂತಿ ಉತ್ತೇಜಿಸುವ ಜೊತೆಗೆ ಮೌಲ್ಯಯುತ ಗುಣಗಳ ಕಲಿಕೆಗೆ ಸಹಾಯವಾಗುತ್ತದೆ.

ತರಬೇತಿ ಪಡೆದ ದಾದಿಯರಿಂದ ನಡೆಸಲ್ಪಡುವ ಶಾಲಾ ಆರೋಗ್ಯ ಚಿಕಿತ್ಸಾಲಯಗಳು, ಸಾಮಾನ್ಯ ಜ್ವರ, ಋತುಚಕ್ರ ಸಮಸ್ಯೆ, ಬಾಲ್ಯದ ಮಧುಮೇಹದಂತಹ ಅನೇಕ ಸಮಸ್ಯೆಗಳ ಕುರಿತು ತಿಳಿಸಲು ಸಹಾಯ ಮಾಡುತ್ತದೆ. ಜೊತೆಗೆ ಶಿಕ್ಷಕರಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಮತ್ತು ಆರೋಗ್ಯ ತುರ್ತುಸ್ಥಿತಿಗಳಿಗೆ ಕೌಶಲ್ಯ ಮತ್ತು ಸೂಕ್ಷ್ಮತೆ ನಿರ್ವಹಣೆ ಕುರಿತು ತರಬೇತಿ ನೀಡಬೇಕು.

ವಿದ್ಯಾರ್ಥಿಗಳ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣ: ವಿದ್ಯಾರ್ಥಿಗಳು ತಮ್ಮ ಕುಟುಂಬದ ಸದಸ್ಯರಲ್ಲಿ ಆರೋಗ್ಯಕರ ನಡವಳಿಕೆಯನ್ನು ಉತ್ತೇಜಿಸಲು ಈ ಶಿಕ್ಷಣ ಸಹಾಯವಾಗಲಿದೆ. ಆರೋಗ್ಯದ ಕುರಿತು ಕುಟುಂಬ ಸದಸ್ಯರಿಗೆ ಸೂಕ್ತ ಮಾಹಿತಿ ನೀಡಲು, ಮನವೊಲಿಸುವ ಸಂವಹನ ಕೌಶಲ್ಯ ಹೊಂದಲಿದ್ದು, ಅವರು ಆರೋಗ್ಯ ಚಾಂಪಿಯನ್​ ಆಗಲಿದ್ದಾರೆ. ಜೊತೆಗೆ ತಂಬಾಕಿನ ದುಷ್ಪರಿಣಾಮದ ಕುರಿತು ಅರಿವನ್ನು ವಿದ್ಯಾರ್ಥಿಗಳು ಹೊಂದಲಿದ್ದು, ಈ ಅಭ್ಯಾಸ ತ್ಯಜಿಸುವಂತೆ ಕುಟುಂಬ ಸದಸ್ಯರಿಗೂ ತಿಳಿಸಬಹುದು.

ವಿದ್ಯಾರ್ಥಿಗಳ ಜ್ಞಾನವನ್ನು ಹಂತ ಹಂತವಾಗಿ ಹೆಚ್ಚಿಸಬಹುದು. ಇದಕ್ಕೆ ರಚನಾತ್ಮಕ ಪಠ್ಯಕ್ರಮದ ಕಲಿಕೆಯ ಜೊತೆಗೆ, ಸಂಘಟಿತ ಸಹಪಠ್ಯ ಚಟುವಟಿಕೆಗಳು ಮತ್ತು ಗುಂಪು ಯೋಜನೆಗಳು ಕಲಿಕೆಗೆ ಪರಿಣಾಮಕಾರಿ ಸಹಾಯಕವಾಗಬಹುದು. ಲೈಂಗಿಕ ಶಿಕ್ಷಣದಂತಹ ಸೂಕ್ಷ್ಮ ವಿಷಯಗಳಾದ ಲಿಂಗ ಸಮಾನತೆ ಮತ್ತು ಪರಸ್ಪರ ಗೌರವ ನೀಡುವಲ್ಲಿ ಮಕ್ಕಳನ್ನು ಉತ್ತೇಜಿಸಬಹುದಾಗಿದೆ.

ವಿದ್ಯಾರ್ಥಿಗಳಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಮತ್ತು ಭವಿಷ್ಯದಲ್ಲಿ ಅದನ್ನು ರಕ್ಷಿಸುವ ಕ್ರಮಗಳಿಗಾಗಿ ನೀತಿ ನಿರೂಪಕರೊಂದಿಗೆ ಸಲಹೆ ನೀಡಬಹುದು. ಹವಾಮಾನ ಬದಲಾವಣೆಯಂತಹ ಗಂಭೀರ ವಿಚಾರ ಕುರಿತು ಅರಿವು ಮೂಡಿಸಬಹುದು. ತಮ್ಮ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುವ ಈ ಬಾಹ್ಯ ಪ್ರಭಾವಗಳನ್ನು ಹೇಗೆ ತಡೆಯುವುದು ಮತ್ತು ತಗ್ಗಿಸುವುದು ಎಂಬುದನ್ನು ಯುವಜನರು ಕಲಿಯಬೇಕು. ವ್ಯಕ್ತಿಗಳಾಗಿ ಮತ್ತು ಸಂಘಟಿತವಾಗಿ ಹಾಗೂ ಸಾಮೂಹಿಕವಾಗಿ ಈ ಕುರಿತು ಶಾಲೆಗಳು ಅವರಿಗೆ ತರಬೇತಿ ನೀಡಬಹುದು.

ಆರೋಗ್ಯ ಕುರಿತು ಕಲಿಕೆಯಿಂದಾಗಿ ವಿದ್ಯಾರ್ಥಿಗಳು ಸಮಾಜದಲ್ಲಿ ಪರಿಣಾಮಕಾರಿ ಬದಲಾವಣೆಯ ಏಜೆಂಟ್ ಆಗಬಹುದು. ನನ್ನ ಇತ್ತೀಚಿನ ಪುಸ್ತಕ “ಪಲ್ಸ್ ಟು ಪ್ಲಾನೆಟ್: ದಿ ಲಾಂಗ್ ಲೈಫ್‌ಲೈನ್ ಆಫ್ ಹ್ಯೂಮನ್ ಹೆಲ್ತ್” ಯುವಕರಿಗೆ ಸಮಗ್ರ ದೃಷ್ಟಿಕೋನವನ್ನು ಒದಗಿಸುವ ಕೊಡುಗೆಯಾಗಿದೆ.

ಲೇಖನ: ಪ್ರೊ ಕೆ. ಶ್ರೀನಾಥ್ ರೆಡ್ಡಿ, ಪಿಎಚ್‌ಎಫ್‌ಐನ ಸಾರ್ವಜನಿಕ ಆರೋಗ್ಯದ ಪ್ರಾಧ್ಯಾಪಕರು

ಪ್ರಮುಖ ಸೂಚನೆ: ಪ್ರೊ ಕೆ. ಶ್ರೀನಾಥ್ ರೆಡ್ಡಿ ಅವರು ಪಿಎಚ್‌ಎಫ್‌ಐನ ಸಾರ್ವಜನಿಕ ಆರೋಗ್ಯದ ಪ್ರತಿಷ್ಠಿತ ಪ್ರಾಧ್ಯಾಪಕರಾಗಿದ್ದಾರೆ. ಈ ಲೇಖನದ ಸಂಪೂರ್ಣ ಅಭಿಪ್ರಾಯವು ಲೇಖಕರಾದ್ದೇ ಆಗಿರುತ್ತದೆ

ಇದನ್ನೂ ಓದಿ: ದೇಶದಲ್ಲಿ ಹೆಚ್ಚುತ್ತಿದೆ ಜೀವನಶೈಲಿ ಆಧಾರಿತ ರೋಗ: ಭಾರತ ವಿಶ್ವದ ಕ್ಯಾನ್ಸರ್ ರಾಜಧಾನಿಯಾಗುವ ಅಪಾಯ

Last Updated :Apr 12, 2024, 12:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.