ETV Bharat / health

ಹದಿಹರೆಯದಲ್ಲಿ ಎದುರಾಗುವ ಬೆದರಿಕೆಗಳಿಂದ ಮಾನಸಿಕ ಸಮಸ್ಯೆಗಳು ಸೃಷ್ಟಿ: ಅಧ್ಯಯನ

author img

By ETV Bharat Karnataka Team

Published : Feb 7, 2024, 1:00 PM IST

bullying-in-teenagers-develops-psycosis
bullying-in-teenagers-develops-psycosis

ಹದಿಹರೆಯದಲ್ಲಿ ಎದುರಾಗುವ ಬೆದರಿಕೆ ವರ್ತನೆಗಳು ಅವರಲ್ಲಿ ಆರಂಭಿಕ ಹಂತದ ಮಾನಸಿಕ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಅಧ್ಯಯನವೊಂದರಿಂದ ಬಯಲಾಗಿದೆ.

ನವದೆಹಲಿ: ಬೆದರಿಕೆ (Bullying) ಒಳಗಾಗುವ ಹದಿಹರೆಯದವರಲ್ಲಿ ಆರಂಭಿಕ ಹಂತದ ಸೈಕೋಸಿಸ್​​ಕ್ಕೆ ಅಭಿವೃದ್ಧಿಯಾಗುವ ಸಾಧ್ಯತೆ ಹೆಚ್ಚಿದೆ. ಇದು ಪ್ರಾಥಮಿಕ ಹಂತದ ಮಾನಸಿಕ ಸಮಸ್ಯೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಜಪಾನ್​ನ ಟೋಕಿಯೋ ಯುನಿವರ್ಸಿಟಿ ಸಂಶೋಧಕರು ಈ ಬಗ್ಗೆ ಅಧ್ಯಯನ ಮಾಡಿದ್ದು, ಈ ಸಂಬಂಧ ಬೆದರಿಕೆಗೆ ಒಳಗಾದ 500 ಹದಿಹರೆಯದವರ ಮಿದುಳಿನ ಸ್ಕ್ಯಾನ್​ ನಡೆಸಿದ್ದಾರೆ. ಈ ವೇಳೆ ಅವರ ಆಂಟೀರಿಯರ್ ಸಿಂಗ್ಯುಲೇಟ್ ಕಾರ್ಟೆಕ್ಸ್ (ಎಸಿಸಿ)ನಲ್ಲಿ ಕಡಿಮೆ ಮಟ್ಟದ ಗ್ಲುಟಮೇಟ್ ಹೊಂದಿರುವುದು ಕಂಡು ಬಂದಿದೆ. ಇದು ಭಾವನೆಗಳನ್ನು ನಿಯಂತ್ರಿಸುವ ಮೆದುಳಿನ ಪ್ರಮುಖ ಭಾಗವಾಗಿದೆ. ಹದಿಹರೆಯದವರಲ್ಲಿ ಗ್ಲುಟಮೇಟ್​ ಕಡಿಮೆ ಮಟ್ಟದಲ್ಲಿ ಕಂಡು ಬಂದಿದ್ದು, ಇದು ಸೈಕೋಸಿಸ್​​ನ ಆರಂಭಿಕ ಹಂತದ ಅಪಾಯವನ್ನು ತೋರಿಸುತ್ತದೆ. ಆರಂಭಿಕ ಹಂತದ ಸೈಕೋಸಿಸ್​​ ಹಂತದಲ್ಲಿ ಅವರು ಬೆದರಿಕೆ ಅನುಭವಿಸಿರುವುದು ಕಂಡು ಬಂದಿದೆ.

ಈ ರೀತಿ ಸಂತ್ರಸ್ತರ ಪತ್ತೆಗಾಗಿ ಅವರು ಪ್ರಶ್ನಾವಳಿಗಳ ತಂತ್ರವನ್ನು ಬಳಕೆ ಮಾಡಿದ್ದಾರೆ. ಈ ವೇಳೆ, ಅವರ ಅನುಭವಗಳನ್ನು ನಿರ್ಣಯಿಸಲು ಔಪಚಾರಿಕ ಮನೋವೈದ್ಯಕೀಯ ಮಾಪನ ವಿಧಾನಗಳನ್ನು ಬಳಸಿದರು. ಈ ವೇಳೆ, ತಂಡವೂ ಈ ರೀತಿ ಬೆದರಿಕೆಯು ಹದಿಹರೆಯದವರ ಆರಂಭಿಕ ಹಂತದ ಸೈಕೋಸಿಸ್​​ನೊಂದಿಗೆ ಸಂಬಂಧ ಹೊಂದಿರುವುದನ್ನು ಪತ್ತೆ ಮಾಡಿದ್ದಾರೆ. ಈ ಲಕ್ಷಣಗಳು ಸೈಕೋಸಿಸ್​ಗೆ ಹತ್ತಿರ ಬಂದಿದೆ ಎಂದು ವಿವರಿಸಿದ್ದಾರೆ. ಆದರೆ, ಅವರು ಕ್ಲಿನಿಕಲ್ ರೋಗನಿರ್ಣಯಕ್ಕೆ ಸಂಪೂರ್ಣ ಮಾನದಂಡಗಳನ್ನು ಪೂರೈಸಿಲ್ಲ. ಈ ಸಮಸ್ಯೆಯ ಸ್ಕಿಜೋಫ್ರೆನಿಯಾ ಮತ್ತು ಬೈಪೋಲಾರ್​ ಸಮಸ್ಯೆಗಳನ್ನು ಒಳಗೊಂಡಿದೆ.

ಆರಂಭಿಕ ಹಂತದಲ್ಲಿ ಈ ರೀತಿಯ ಮನೋವೈಜ್ಞಾನಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ. ಇದನ್ನು ಪತ್ತೆ ಮಾಡುವ ಮೂಲಕ ನಂತರದ ಜೀವನದಲ್ಲಿ ಮನೋವೈಜ್ಞಾನಿಕ ಸಮಸ್ಯೆಗಳು ಅಭಿವೃದ್ಧಿಯಾಗದಂತೆ ತಡೆಯಬಹುದಾಗಿದೆ ಎಂದು ಅಧ್ಯಯನದ ಪ್ರಮುಖ ಲೇಖಕ ನೋಹಿರೊ ಒಕಡಾ ತಿಳಿಸಿದ್ದಾರೆ.

ಗ್ಲುಟಮೇಟ್​ ಮಟ್ಟದಲ್ಲಿನ ಬದಲಾವಣೆಗಳು ಅನೇಕ ವಿಧದ ಮನೋವೈಜ್ಞಾನಿಕ ಸಮಸ್ಯೆಗಳನ್ನು ಒಳಗೊಂಡಿದೆ. ಎಸಿಸಿ ಬದಲಾವಣೆಯು ಸೈಕೋಸಿಸ್​ ಅಧಿಕ ಅಪಾಯವನ್ನು ಹೊಂದಿದೆ. ಹದಿಹರೆಯದ ವಯಸ್ಸಿನವರನ್ನು ಕಿರುಕುಳದ ಪರಿಣಾಮದ ಬಗ್ಗೆ ಸ್ಪಷ್ಟತೆ ಇಲ್ಲ.

ಬೆದರಿಕೆಗೆ ಒಳಗಾದವರಲ್ಲಿ ಆರಂಭಿಕ ಹಂತದ ಸೈಕೋಸಿಸ್​​ ಪತ್ತೆಯಾಗಿದೆ. ಇದನ್ನು ಸಾಮಾನ್ಯ ಪತ್ತೆ ಪರೀಕ್ಷೆ ಮೂಲಕ ಪತ್ತೆ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆ ಈ ರೀತಿಯ ಜನರನ್ನು ಆಧ್ಯಯನ ಮಾಡುವುದರಿಂದ ಈ ಸಮಸ್ಯೆಯ ಆರಂಭಿಕ ಹಂತವನ್ನು ಹೆಚ್ಚಾಗಿ ಅರ್ಥೈಸಿಕೊಳ್ಳಬಹುದು. ಅಲ್ಲದೇ, ಹದಿಹರೆಯದವರ ಮಾನಸಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಬೆದರಿಕೆ ವಿರೋಧಿ​ ಕಾರ್ಯಕ್ರಮವನ್ನು ಜಾರಿಗೆ ತರುವುದು ಉತ್ತಮ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ದೈಹಿಕ - ಮಾನಸಿಕ ಯೋಗಕ್ಷೇಮವು ಭಾರತೀಯರ ಪ್ರಮುಖ ಆದ್ಯತೆ: ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.