ETV Bharat / health

ದೈಹಿಕ - ಮಾನಸಿಕ ಯೋಗಕ್ಷೇಮವು ಭಾರತೀಯರ ಪ್ರಮುಖ ಆದ್ಯತೆ: ವರದಿ

author img

By ETV Bharat Karnataka Team

Published : Feb 7, 2024, 9:26 AM IST

Updated : Feb 7, 2024, 10:35 AM IST

ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದತ್ತ ಭಾರತೀಯರು ಹೆಚ್ಚಿನ ಗಮನವನ್ನು ಕೊಟ್ಟಿದ್ದಾರೆ ಎಂದು ವರದಿಯೊಂದು ಹೇಳಿದೆ.

Physical, mental well-being top priorities for Indians
ದೈಹಿಕ-ಮಾನಸಿಕ ಯೋಗಕ್ಷೇಮವು ಭಾರತೀಯರ ಪ್ರಮುಖ ಆದ್ಯತೆ

ನವದೆಹಲಿ: 2024ರಲ್ಲಿ ವೈಯಕ್ತಿಕ ಹಣಕಾಸು ನಿರ್ವಹಣೆಯೊಂದಿಗೆ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವು ಭಾರತೀಯರ ಪ್ರಮುಖ ಆದ್ಯತೆಗಳಾಗಿದೆ ಎಂದು ವರದಿಯೊಂದು ತಿಳಿಸಿದೆ. ಅಮೆರಿಕನ್​ ಎಕ್ಸ್‌ಪ್ರೆಸ್‌ನ ಈ 'ಅಮೆಕ್ಸ್ ಟ್ರೆಂಡೆಕ್ಸ್' ವರದಿಯು ಭಾರತ, ಆಸ್ಟ್ರೇಲಿಯಾ, ಕೆನಡಾ, ಜಪಾನ್, ಮೆಕ್ಸಿಕೊ, ಯುಕೆ ಮತ್ತು ಯುಎಸ್ ಪ್ರದೇಶಗಳಲ್ಲಿ ನಡೆಸಿದ ಸಮೀಕ್ಷೆ ನಡೆಸಿ ಈ ವರದಿ ತಯಾರಿಸಲಾಗಿದೆ.

ದೈಹಿಕ ಸ್ವಾಸ್ಥ್ಯ (ಶೇ. 76ರಷ್ಟು) ಮತ್ತು ವೈಯಕ್ತಿಕ ಹಣಕಾಸು ವಿಚಾರ (ಶೇ. 69) ಭಾರತೀಯರ ಪ್ರಮುಖ ಆದ್ಯತೆಗಳಾಗಿವೆ ಎಂದು ಈ ವರದಿ ಮಾಹಿತಿ ನೀಡಿದೆ. 2023ಕ್ಕೆ ಹೋಲಿಸಿದರೆ ಈ ವರ್ಷ ಸುಮಾರು ಶೇ. 80 ಭಾರತೀಯರು ಹೆಚ್ಚು ಖರ್ಚು ಮಾಡಲು ಯೋಜಿಸಿದ್ದಾರೆ. ದೈಹಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ವಿಚಾರದಲ್ಲಿ, ಆರೋಗ್ಯಕರ ಆಹಾರ ಸೇವನೆ (ಶೇ. 73), ಹೆಚ್ಚು ಹೊರಾಂಗಣ ಚಟುವಟಿಕೆಗಳು (ಶೇ. 63) ಮತ್ತು ಮನೆಯಲ್ಲಿ ವ್ಯಾಯಾಮಕ್ಕೆ ಸಂಬಂಧಿಸಿದ ಮಶಿನ್​ಗಳನ್ನು ಇಟ್ಟುಕೊಳ್ಳುವುದು (ಶೇ. 51) ಭಾರತೀಯರ ಆದ್ಯತಾ ಪಟ್ಟಿಯಲ್ಲಿದೆ.

"ಉತ್ತಮ ಜೀವನ ನಡೆಸಲು ಮತ್ತು ಸಮಗ್ರ ಯೋಗಕ್ಷೇಮಕ್ಕೆ ಬದ್ಧರಾಗಲು ಯಾವುದು ಮುಖ್ಯ ಎಂಬುದು ಭಾರತೀಯರಿಗೆ ತಿಳಿದಿದೆ" ಎಂದು ಅಮೆರಿಕನ್​​ ಎಕ್ಸ್‌ಪ್ರೆಸ್ ಬ್ಯಾಂಕಿಂಗ್ ಕಾರ್ಪೊರೇಷನ್​ನ (ಭಾರತ) ಸಿಇಒ ಮತ್ತು ಕಂಟ್ರಿ ಮ್ಯಾನೇಜರ್ ಸಂಜಯ್ ಖನ್ನಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಖರ್ಚು, ಉಳಿತಾಯ ಮತ್ತು ಪ್ರಯಾಣ ಸೇರಿದಂತೆ ಗ್ರಾಹಕರ ವಿಕಸನಗೊಳ್ಳುತ್ತಿರುವ ಆದ್ಯತೆಗಳನ್ನು 'ಅಮೆಕ್ಸ್ ಟ್ರೆಂಡೆಕ್ಸ್' ಸ್ಪಷ್ಟವಾಗಿ ತಿಳಿಸಿದೆ ಎಂದು ಹೇಳಿದರು.

ಇದಲ್ಲದೇ, ಉದ್ಯೋಗದಲ್ಲಿರುವ ಭಾರತೀಯರು ತಮ್ಮ ಮಾನಸಿಕ ಆರೋಗ್ಯದ ಮೇಲೂ ಗಮನ ಕೇಂದ್ರೀಕರಿಸುತ್ತಿದ್ದಾರೆ. ವರ್ಕ್​ ​ - ಲೈಫ್​ ಬ್ಯಾಲೆನ್ಸ್, ತಮಗೆ ಹೊಂದಿಕೆಯಾಗುಂತಹ ಕೆಲಸವನ್ನು ಆಯ್ದುಕೊಳ್ಳುವುದು ಮತ್ತು ಸಪೋರ್ಟಿವ್​​​ ವರ್ಕ್ ಎನ್ವಿರಾನ್ಮೆಂಟ್​​ - ಪ್ರಮುಖ ಅಂಶಗಳಾಗಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸುಮಾರು ಶೇ. 80 ರಷ್ಟು ಭಾರತೀಯರು ಕೆಲಸದಲ್ಲಿ ತಮ್ಮ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ವರ್ಕ್​​-ಲೈಫ್​ ಬ್ಲ್ಯಾಲೆನ್ಸ್ - (ಶೇ. 67), ತಮಗೆ ಹೊಂದಿಕೆಯಾಗುಂತಹ ಕೆಲಸವನ್ನು ಆಯ್ದುಕೊಳ್ಳುವುದು - (ಶೇ.61) ಮತ್ತು ಸಹಾಯಕ ಕೆಲಸದ ವಾತಾವರಣ - (ಶೇ.60) ಕಡೆ ಗಮನ ಕೇಂದ್ರೀಕರಿಸುತ್ತಿದ್ದಾರೆ.

ಸರಿಸುಮಾರು ಶೇ. 78ರಷ್ಟು ಭಾರತೀಯರು ತಮ್ಮ ಕೆಲಸದ ಸ್ಥಳವು ಆರೋಗ್ಯ ಮತ್ತು ಯೋಗಕ್ಷೇಮದ ಲಾಭವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ. ಶೇ. 84 ರಷ್ಟು ಜನರು 2024 ರಲ್ಲಿ ಈ ಲಾಭ ಬಳಸಿಕೊಳ್ಳುವ ಸಾಧ್ಯತೆ ಇದೆ. ಕೆಲಸದ ಸ್ಥಳ ಪೂರಕವಾಗಿದ್ದರೆ, ಶೇಕಡ 82 ರಷ್ಟು ಭಾರತೀಯರು ತಮ್ಮ ಗುರಿ ತಲುಪುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಅಮ್ಮನ 35 ವರ್ಷದ ಹಳೇ ಘರ್ಚೋಲಾ ಸೀರೆಯುಟ್ಟು ಮಿಂಚಿದ ಸೋನಂ ಕಪೂರ್

ವಯಸ್ಕರು ಈ ವರ್ಷ ಹೆಚ್ಚು ಲೈವ್ ಸ್ಪೋರ್ಟ್ಸ್ ಈವೆಂಟ್​ಗಳನ್ನು ಆನಂದಿಸಲು ಎದುರು ನೋಡುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಸುಮಾರು ಶೇ. 61 ರಷ್ಟು ಭಾರತೀಯರು 2024ರಲ್ಲಿ ಹೆಚ್ಚು ಲೈವ್ ಸ್ಪೋರ್ಟ್ಸ್ ಈವೆಂಟ್​ಗಳಲ್ಲಿ ಭಾಗಿಯಾಗಲಿದ್ದಾರೆ. ಶೇ.97 ರಷ್ಟು ಜನರು ಈ ವರ್ಷ ಕ್ರೀಡಾಕೂಟದಲ್ಲಿ ಭಾಗವಹಿಸೋ ಸಲುವಾಗಿ ಪ್ರಯಾಣಿಸಲು ಸಿದ್ಧರಾಗಿದ್ದಾರೆ. ಶೇ.69 ಜನರು ಟಿಕೆಟ್ ಖರೀದಿಸಲು ಮನಸ್ಸು ಮಾಡಿದ್ದಾರೆ.

ಇದನ್ನೂ ಓದಿ: 'ದಿಗಂತ್​​​ ನನ್ನ ಕ್ರಶ್'​​- ಸಂಗೀತಾ ಶೃಂಗೇರಿ; ತೆರೆ ಹಂಚಿಕೊಂಡ 'ಮಾರಿಗೋಲ್ಡ್' ಜೋಡಿಯ ಸುಂದರ ಫೋಟೋಗಳಿಲ್ಲಿವೆ

ಸುಸ್ಥಿರತೆಯ ನಿರ್ಣಯಗಳತ್ತ ಭಾರತೀಯರ ಗಮನ ಕೇಂದ್ರೀಕೃತವಾಗಿದೆ. ಶೇ. 59ರಷ್ಟು ಜನರು ಕಡಿಮೆ ಪ್ಲಾಸ್ಟಿಕ್ ಅಥವಾ ಒಂದು - ಬಾರಿ ಬಳಸಬಹುದಾದ ಉತ್ಪನ್ನಗಳನ್ನು ಬಳಸಲು ಯೋಜಿಸಿದರೆ, ಶೇ. 58 ರಷ್ಟು ಜನರು ತಮ್ಮ ಮನೆಯಲ್ಲಿ ಮರುಬಳಕೆ ಮಾಡುವ ಅಭ್ಯಾಸವನ್ನು ಸುಧಾರಿಸಲು ಬಯಸಿದ್ದಾರೆ. ಶೇ. 56ರಷ್ಟು ಮಂದಿ ತಮ್ಮ ಪ್ರಯಾಣದ ಅಭ್ಯಾಸವನ್ನು ಸುಧಾರಿಸಲು ಬಯಸಿದ್ದಾರೆ. ಶೇ. 66 ರಷ್ಟು ಜನರು ಸುಸ್ಥಿರತೆಗೆ ಆದ್ಯತೆ ನೀಡುವ ವಸತಿಗಳನ್ನು ಕಾಯ್ದಿರಿಸಲು ಬಯಸಿದ್ದಾರೆ.

Last Updated : Feb 7, 2024, 10:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.